ಬ್ರೇಕಿಂಗ್ ನ್ಯೂಸ್
22-04-22 02:46 pm Source: Vijayakarnataka ಕ್ರೀಡೆ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾವು ಆರಂಭದಲ್ಲಿ ಕೆಲ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು. ಇದರ ಹೊರತಾಗಿಯೂ ಎದುರಾಳಿಗೆ ಸ್ಪರ್ಧಾತ್ಮಕ ಗುರಿಯನ್ನು ನೀಡಿದ್ದೆವು. ಆದರೆ, ಈ ಮೊತ್ತ ನಮ್ಮ ಪಾಲಿಗೆ ಸಾಕಾಗಲಿಲ್ಲ ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದರು.
ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲ ಓವರ್‌ನಲ್ಲಿ 2 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶಾನ್ ಇಬ್ಬರೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮತ್ತೊಂದು ಹಂತದಲ್ಲಿ ಮುಂಬೈ 47 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತ ಬ್ಯಾಟ್ ಮಾಡಿದ ತಿಲಕ್ ವರ್ಮಾ(51*) ಅವರ ಅರ್ಧಶತಕ ಹಾಗೂ ಹೃತಿಕ್ ರೋಷನ್(25) ನಿರ್ಣಾಯಕ ರನ್‌ಗಳ ಸಹಾಯದಿಂದ ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತ್ತು.
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ರೋಹಿತ್ ಶರ್ಮಾ,"ಪಿಚ್ ಬ್ಯಾಟಿಂಗ್‌ಗೆ ಚೆನ್ನಾಗಿಯೇ ಇತ್ತು. ಹಾಗಾಗಿ ಇನ್ನಷ್ಟು ರನ್‌ಗಳನ್ನು ನಾವು ಗಳಿಸಬೇಕಾಗಿತ್ತು. ಆದರೆ, ನಾವು ಆರಂಭದಲ್ಲಿಯೇ ಕೆಲ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು. ಇದರಿಂದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ಬ್ಯಾಟ್ ಬೀಸಲು ಆಗಿರಲಿಲ್ಲ. ಇದು ಸಮಂಜಸ ಮೊತ್ತವಾದರೂ ಗೆಲುವಿಗೆ ಸಾಕಾಗಲಿಲ್ಲ," ಎಂದರು.
ಬಳಿಕ 156 ರನ್ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 17 ರನ್ ಅಗತ್ಯವಿತ್ತು. ಕೊನೆಯ ಓವರ್ ಮೊದಲನೇ ಎಸೆತದಲ್ಲಿಯೇ ಜಯದೇವ್ ಉನಾದ್ಕಟ್ ಅವರು ಡ್ವೇನ್ ಪ್ರೆಟೋರಿಯಸ್ ವಿಕೆಟ್ ಕಬಳಿಸಿದರು. ನಂತರ ಎರಡನೇ ಎಸೆತದಲ್ಲಿ ಕೇವಲ ಒಂದು ರನ್ ನೀಡಿದ್ದರು.
ಆ ಮೂಲಕ ಕೊನೆಯ 4 ಎಸೆತಗಳಲ್ಲಿ ಸಿಎಸ್‌ಕೆಗೆ 16 ರನ್ ಅಗತ್ಯವಿತ್ತು. ಆದರೆ, ಎಂಎಸ್ ಧೋನಿ ತಮ್ಮ ಶೈಲಿಯಲ್ಲಿ ಪಂದ್ಯವನ್ನು ಮುಗಿಸಿದರು. 3 ಮತ್ತು4ನೇ ಎಸೆತಗಳಲ್ಲಿ ಕ್ರಮವಾಗಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ನಂತರ 5ನೇ ಎಸೆತದಲ್ಲಿ ಧೋನಿ 2 ರನ್ ಪಡೆದರು. ಆ ಮೂಲಕ ಕೊನೆಯ ಎಸೆತದಲ್ಲಿ 4 ರನ್ ಅಗತ್ಯವಿತ್ತು. ಧೋನಿ ಬೌಂಡರಿ ಸಿಡಿಸುವ ಮೂಲಕ ಸಿಎಸ್‌ಕೆಗೆ ಎರಡನೇ ಗೆಲುವು ತಂದುಕೊಟ್ಟರು.
ಈ ಬಗ್ಗೆ ಪ್ರತಿಕ್ರಿಯಿಸಿದ ರೋಹಿತ್ ಶರ್ಮಾ, "ಪಂದ್ಯದ ಅಂತ್ಯದಲ್ಲಿ ನಮ್ಮ ಪಾಲಿಗೆ ಇದು ಕಠಿಣ ಹೋರಾಟವಾಯಿತು. ಕೊನೆಯ ಎಸೆತದವರೆಗೂ ನಾವು ಪಂದ್ಯದಲ್ಲಿಯೇ ಇದ್ದೆವು. ಬೌಲರ್‌ಗಳು ನಮ್ಮನ್ನು ಉಳಿಸಿದ್ದರು. ಆದರೆ, ಕೊನೆಯಲ್ಲಿ ಎಂಎಸ್ ಧೋನಿ ಶಾಂತ ಸ್ವಭಾವದ ವ್ಯಕ್ತಿ ಎಂದು ನಮಗೆ ತಿಳಿದಿದೆ. ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು," ಎಂದು ಹೇಳಿದರು.
ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಜಯದೇವ್ ಉನಾದ್ಕಟ್ ಕೊನೆಯ ಓವರ್‌ನ ನಾಲ್ಕು ಎಸೆತಗಳಲ್ಲಿ ಎಂಎಸ್ ಧೋನಿ ಎದುರು ತಲೆಬಾಗಿದರು. ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿ ನೀಡುವ ಮೂಲಕ ಉನಾದ್ಕಟ್ ಬೇಸರ ಮೂಡಿಸಿದರು.
"ಸೋಲಿನ ಬಗ್ಗೆ ಬೆರಳು ತೋರಿಸುವುದು ಕಠಿಣ ಸಂಗತಿ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ನೀವು ಆರಂಭದಲ್ಲಿ ಕೆಲ ವಿಕೆಟ್‌ಗಳನ್ನು ಕಳೆದುಕೊಂಡರೆ, ಇದು ಯಾವಾಗಲೂ ಕಠಿಣವಾಗಿರುತ್ತದೆ. ಇದರ ಹೊರತಾಗಿಯೂ ನಾವು ಸ್ಪರ್ಧಾತ್ಮಕ ಗುರಿಯನ್ನು ನೀಡಿದ್ದೆವು. ಆದರೆ, ಈ ಮೊತ್ತಕ್ಕೆ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ನಮ್ಮಿಂದ ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಎಂಎಸ್ ಧೋನಿ ಮತ್ತು ಡ್ವೇನ್ ಪ್ರೆಟೋರಿಯಸ್ ಶಾಂತವಾಗಿ ಒತ್ತಡವನ್ನು ನಿಭಾಯಿಸಿದರು," ಎಂದು ರೋಹಿತ್ ಶರ್ಮಾ ಹೇಳಿದರು.
Ipl 2022 After Batting Not So Well, The Bowlers Kept Us In The Game All Through Mi Skipper Rohit Sharma On 3 Wickets Loss Against Csk.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
09-09-25 11:09 pm
HK News Desk
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
09-09-25 10:47 pm
Mangalore Correspondent
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
Mangalore, NHAI, Padmaraj: ಇನ್ನೆಷ್ಟು ಜೀವ ಬಲಿಯ...
09-09-25 05:14 pm
MLA Vedavyas Kamath, Mangalore, Yakshangana:...
09-09-25 04:47 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm