ಬ್ರೇಕಿಂಗ್ ನ್ಯೂಸ್
20-11-26 12:04 pm HK News Staffer ಕರ್ನಾಟಕ
ಮೈಸೂರು, ನ.20: 2028ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಸೇರಿದಂತೆ ಮುಂದಿನ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ನನಗೀಗ 80 ವರ್ಷ ವಯಸ್ಸಾಗಿದ್ದು ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಗೆ 80 ವರ್ಷ ದಾಟಿರುವುದರಿಂದ ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಾವು ಐದನೇ ಸಾಲಿನಲ್ಲಿ ಕುಳಿತಿದ್ದ ಕುರಿತು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಮಾಡಿದ್ದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ತಡವಾಗಿ ಕಾರ್ಯಕ್ರಮಕ್ಕೆ ಹೋಗಿದ್ದರಿಂದ ಹಿಂದಿನ ಸಾಲಿನಲ್ಲಿ ಕುಳಿತಿದ್ದೆ. ಅದು ಬಿಟ್ಟರೆ ಬೇರಾವುದೇ ವಿಷಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ 5ನೇ ಸಾಲಿನಲ್ಲಿ ಕುಳಿತಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಬಗ್ಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಟೀಕಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾನು ಸಮಾರಂಭಕ್ಕೆ ತಡವಾಗಿ ತೆರಳಿದ್ದೆ, ಹಾಗಾಗಿ ಮುಂದಿನ ಸಾಲಿನಲ್ಲಿದ್ದ ಖುರ್ಚಿಗಳೆಲ್ಲ ಭರ್ತಿಯಾಗಿದ್ದವು. ಹಿಂದಿನ ಸಾಲಿನಲ್ಲಿ ಕುರ್ಚಿ ಖಾಲಿಯಿದ್ದ ಕಾರಣಕ್ಕೆ ಅಲ್ಲಿಯೇ ಕುಳಿತೆ. ಅದು ನನಗಾಗಿ ನಿಗದಿ ಮಾಡಿದ್ದ ಆಸನವಲ್ಲ, ಮೊದಲು ಬಂದವರು ಮುಂದೆ ಕೂತಿದ್ದರು ಅಷ್ಟೆ ಎಂದು ಹೇಳಿದ್ದಾರೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
20-11-26 12:58 pm
HK News Staffer
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
20-11-26 09:53 pm
HK News Staffer
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯ...
20-11-26 02:32 pm
‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ...
19-11-26 07:09 pm
ದೀಪಾವಳಿಗೆ ಪಟಾಕಿ ಸಿಡಿಸಿದ್ದಕ್ಕೆ ವಿದ್ಯಾರ್ಥಿಗಳ ಫ್...
19-11-26 03:22 pm
19-11-26 09:20 pm
HK News Staffer
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm
Fr Cyprian Pinto Arrest: ಪೋಕ್ಸೋ ಕೇಸು ; ಎರಡನೇ...
18-11-26 07:20 pm
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm