ಬ್ರೇಕಿಂಗ್ ನ್ಯೂಸ್
18-11-26 11:28 pm HK News Desk ದೇಶ - ವಿದೇಶ
ನವದೆಹಲಿ, ನ.18: ಸೌದಿ ಅರೇಬಿಯಾದಲ್ಲಿ ಉದ್ಭವಿಸಿರುವ ಆತಂಕದ ಪರಿಸ್ಥಿತಿ ಹಿನ್ನೆಲೆಯಲ್ಲಿ ನವೆಂಬರ್ 30ರ ವರೆಗೆ ಭಾರತದಿಂದ ಸೌದಿ ಅರೇಬಿಯಾಕ್ಕೆ ತೆರಳುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳ ಹಾರಾಟವನ್ನು ಪ್ರಮುಖ ವಿಮಾನಯಾನ ಇಂಡಿಗೋ ರದ್ದುಗೊಳಿಸಿದೆ.
ಈ ಕುರಿತು ಪ್ರಯಾಣ ಸಲಹೆಯನ್ನು ಬಿಡುಗಡೆ ಮಾಡಿರುವ ಇಂಡಿಗೋ ಸಂಸ್ಥೆಯು ಭಾರತದಿಂದ ಸೌದಿಯ ನಾಲ್ಕು ಪ್ರಮುಖ ನಗರಗಳಾದ ಜೆದ್ದಾ, ಮದೀನಾ, ರಿಯಾದ್ ಹಾಗೂ ದಮ್ಮಾಮ್ ಸಂಪರ್ಕಿಸುವ ಎಲ್ಲಾ ವಿಮಾನ ಸೇವೆಗಳು ಈ ತಿಂಗಳ ಅಂತ್ಯದ ವರೆಗೆ ಅಮಾನತ್ತಿನಲ್ಲಿ ಇರಲಿವೆ ಎಂದು ಸ್ಪಷ್ಟಪಡಿಸಿದೆ.
ಸೌದಿ ಅರೇಬಿಯಾದಲ್ಲಿ ಪ್ರಸ್ತುತ ತಲೆದೋರಿರುವ ಭದ್ರತಾ ಸಂಬಂಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ತಮ್ಮ ಮೊದಲ ಆದ್ಯತೆ ಎಂದು ಇಂಡಿಗೋ ಹೇಳಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕಾಲಕ್ಕೆ ತಕ್ಕಂತೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದೆ. ವಿಮಾನ ರದ್ದತಿಯಿಂದ ತೊಂದರೆಗೊಳಗಾದ ಗ್ರಾಹಕರಿಗೆ ಅಗತ್ಯವಿರುವ ಸಹಾಯವನ್ನು ಒದಗಿಸಲು ಬದ್ಧವಾಗಿರುವುದಾಗಿ ಸಂಸ್ಥೆ ಭರವಸೆ ನೀಡಿದೆ. ಟಿಕೆಟ್ ಬುಕಿಂಗ್ ವೇಳೆ ಪ್ರಯಾಣಿಕರು ನೀಡಿರುವ ನೋಂದಾಯಿತ ಇಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ಮೂಲಕ ಅವರಿಗೆ ಈ ಮಾಹಿತಿಯನ್ನು ತಲುಪಿಸಲಾಗುತ್ತಿದೆ.
ಸೌದಿ ಅರೇಬಿಯಾಗೆ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿರುವ ಪ್ರಯಾಣಿಕರು ತಮ್ಮ ವಿಮಾನದ ಪ್ರಸ್ತುತ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಮತ್ತು ಇಂಡಿಗೋ ಕಳುಹಿಸುವ ಅಧಿಕೃತ ಸಂದೇಶಗಳನ್ನು ಗಮನಿಸುವಂತೆ ಮನವಿ ಮಾಡಲಾಗಿದೆ.
18-11-26 11:03 pm
HK News Desk
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
ರೇಸ್ ಕೋರ್ಸ್ ವ್ಯಾಪ್ತಿಯ 79 ಎಕರೆ ಸರ್ಕಾರದ ವಶಕ್ಕೆ...
18-11-26 05:38 pm
ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣ ; ಆಯೋಗದ ಅಧ್ಯಕ್ಷ...
17-11-26 12:09 pm
ಆಟವಾಡುತ್ತಿದ್ದ ವೇಳೆ ದುರಂತ ; ಬಿಸಿ ಕೆಮಿಕಲ್ ಬಕೆಟ್...
14-11-26 09:24 pm
18-11-26 11:28 pm
HK News Desk
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
ಝಾಕಿರ್ ನಾಯ್ಕ್ 'ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್' ಮೇ...
14-11-26 10:00 am
ಚೀನಾ ಗೂಢಚಾರಿಣಿ ಬಲೆಗೆ ಎನ್ವಿಡಿಯಾ ಸಿಇಒ? ವಿವಾಹೇತ...
09-11-26 04:45 pm
ಯುದ್ಧ ನಿಲ್ಲಿಸಿ ಸಂಧಾನಕ್ಕೆ ಬನ್ನಿ.. ಇಲ್ಲದಿದ್ದರೆ...
09-11-26 11:51 am
18-11-26 07:27 pm
HK News Staffer
Bolas Factory Raid, Mangalore: ಗ್ರಾಹಕರನ್ನು ದಾ...
18-11-26 01:18 pm
Ideal Icecream Raid, Mangalore: ಕೊಲ್ಯ ಐಡಿಯಲ್...
17-11-26 08:15 pm
ಸೌಜನ್ಯಾ ಪ್ರಕರಣ ; ಮೂವರು ತಜ್ಞ ವೈದ್ಯರ ಕಮಿಟಿ ರಚನೆ...
17-11-26 06:42 pm
ಸಿದ್ದರಾಮಯ್ಯ ಸ್ಟಿಂಗ್ ಪ್ರಕರಣ ; ರೆಕಾರ್ಡ್ ಮಾಡಿದ್ದ...
17-11-26 03:15 pm
18-11-26 07:20 pm
HK News Staffer
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm
ಕೇರಳದಲ್ಲಿ ಟ್ರಾಫಿಕ್ ಉಲ್ಲಂಘನೆ ದಂಡ ; ಇ-ಚಲನ್ ಏಪ್...
16-11-26 09:56 pm
ಮೊಟ್ಟೆ ಸಾಗಾಟ ನೆಪದಲ್ಲಿ ಕೇರಳಕ್ಕೆ ಜಾನುವಾರು ಸಾಗಣೆ...
16-11-26 04:31 pm