ಬ್ರೇಕಿಂಗ್ ನ್ಯೂಸ್
20-11-26 12:58 pm HK News Staffer ದೇಶ - ವಿದೇಶ
ನವದೆಹಲಿ, ನ.20: ಜಾಗತಿಕ ಜನಸಂಖ್ಯಾ ಅನುಪಾತದಲ್ಲಿ ವೇಗದ ಬದಲಾವಣೆಯಾಗುತ್ತಿದ್ದು 2035ರ ವೇಳೆಗೆ ಇಸ್ಲಾಂ ಧರ್ಮವು ಕ್ರೈಸ್ತ ಧರ್ಮವನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕದ ಪ್ಯೂ ಸಂಶೋಧನಾ ಕೇಂದ್ರದ ಹೊಸ ಅಧ್ಯಯನ ಹೇಳಿದೆ. 2070ರ ವೇಳೆಗೆ ಜಗತ್ತಿನ ಮುಸ್ಲಿಂ ಜನಸಂಖ್ಯೆ 360 ಕೋಟಿಗೂ ಹೆಚ್ಚಿದರೆ, ಕ್ರೈಸ್ತರ ಸಂಖ್ಯೆ 300 ಕೋಟಿಗೇರುವ ಬಗ್ಗೆ ಅಂದಾಜು ಮಾಡಲಾಗಿದೆ.
ಇವರ ಸಂಶೋಧನೆ ಪ್ರಕಾರ, 2020ರಲ್ಲಿ ವಿಶ್ವದ ಮುಸ್ಲಿಂ ಜನಸಂಖ್ಯೆ ಸುಮಾರು 202 ಕೋಟಿ ಇತ್ತು. ಇದು 2070ರ ವೇಳೆಗೆ 364 ಕೋಟಿಗೆ ಏರಿಕೆಯಾಗಲಿದೆ. ಅಂದರೆ, 50 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಶೇ.80ರಷ್ಟು ಬೆಳವಣಿಗೆ ಆಗಬಹುದೆಂದು ತೋರಿಸಲಾಗಿದೆ. ಇದೇ ಅವಧಿಯಲ್ಲಿ ಕ್ರೈಸ್ತರ ಸಂಖ್ಯೆ 227 ಕೋಟಿಯಿಂದ ಸುಮಾರು 296 ಕೋಟಿಗೆ ಏರಿಕೆ ಆಗಬಹುದೆಂದು ಅಂದಾಜಿಸಿದೆ. ಈ ಅನುಪಾತದ ಪ್ರಕಾರ, 2035ರ ವೇಳೆಗೆ ಮುಸ್ಲಿಮರು ಕ್ರೈಸ್ತರನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗಲಿದ್ದಾರೆ ಎಂದು ಅಧ್ಯಯನ ತಂಡ ಹೇಳಿದೆ.
ವಿಶ್ವದ ಹಿಂದೂ ಜನಸಂಖ್ಯೆಯೂ ಮುಂದಿನ 50 ವರ್ಷಗಳಲ್ಲಿ ಹೆಚ್ಚಲಿದೆ. ಆದರೆ ಇದರ ಗತಿ ಕಡಿಮೆ ಪ್ರಮಾಣದಲ್ಲಿ ಇದೆ. 2020ರಲ್ಲಿ ಸುಮಾರು 118 ಕೋಟಿಯಿದ್ದ ಹಿಂದೂಗಳ ಸಂಖ್ಯೆ 2070ರ ವೇಳೆಗೆ 140 ಕೋಟಿಯ ಸಮೀಪಕ್ಕೆ ತಲುಪಬಹುದೆಂಬ ನಿರೀಕ್ಷೆಯಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿನ ಹಿಂದೂಗಳ ಸಂಖ್ಯೆ ಕುಸಿಯಲಿದ್ದು ಜಾಗತಿಕ ಪಾಲು 2020ರ ಶೇ.14.9ರಿಂದ 2070ರ ವೇಳೆಗೆ ಶೇ.13.6ಕ್ಕೆ ಇಳಿಯಲಿದೆ ಎಂದು ಲೆಕ್ಕ ಹಾಕಿದೆ. ಇತರ ಧಾರ್ಮಿಕ ಗುಂಪುಗಳ ಬೆಳವಣಿಗೆಗೆ ಹೋಲಿಸಿದರೆ ಹಿಂದುಗಳ ಜನಸಂಖ್ಯೆಯ ಹೆಚ್ಚಳ ನಿಧಾನವಾಗಲಿದೆ.
ಇದೇ ವೇಳೆ, ಭಾರತದಲ್ಲಿ 2020ರಲ್ಲಿ ಹಿಂದೂಗಳು ಒಟ್ಟು ಜನಸಂಖ್ಯೆಯ ಶೇ.79.4ರಷ್ಟಿದ್ದರು. 2070ರ ವೇಳೆಗೆ ಈ ಪ್ರಮಾಣ ಶೇ.75.8ಕ್ಕೆ ಇಳಿಯಬಹುದು ಎಂದು ಪ್ಯೂ ಅಂದಾಜಿಸಿದೆ. ಇದೇ ಅವಧಿಯಲ್ಲಿ ಮುಸ್ಲಿಮರ ಪಾಲು ಶೇ.15.2ರಿಂದ ಶೇ.19.6ಕ್ಕೆ ಏರುವ ನಿರೀಕ್ಷೆಯಿದೆ. ದೇಶದಲ್ಲಿ ಹಿಂದೂ ಜನಸಂಖ್ಯೆಯು 2020ರಿಂದ 2070ರ ನಡುವೆ ಸುಮಾರು 17.6 ಕೋಟಿ ಹೆಚ್ಚಬಹುದು.
ಜನಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣವೇನು?
ಮುಸ್ಲಿಮರ ಜನಸಂಖ್ಯೆ ಹೆಚ್ಚಳಕ್ಕೆ ಧರ್ಮಾಂತರಕ್ಕಿಂತ ಹೆಚ್ಚಾಗಿ ಜನನ ಪ್ರಮಾಣವೇ ಪ್ರಮುಖ ಕಾರಣವಾಗಿದೆ ಎಂದು ಪ್ಯೂ ವರದಿ ಹೇಳಿದೆ. 2020-25ರ ವೇಳೆಗೆ ಮುಸ್ಲಿಂ ಮಹಿಳೆಯರ ಸರಾಸರಿ ಫಲವತ್ತತೆ ಪ್ರಮಾಣ ಪ್ರತಿ ಮಹಿಳೆಗೆ 3.1 ಮಕ್ಕಳಾಗಿದ್ದರೆ, ಕ್ರೈಸ್ತ ಮಹಿಳೆಯರಲ್ಲಿ ಇದು 2.5ರಷ್ಟಿದೆ. ಇತರ ಧಾರ್ಮಿಕ ಗುಂಪುಗಳಿಗೆ ಸೇರದ ಮಹಿಳೆಯರಲ್ಲಿ ಸರಾಸರಿ 1.6 ಮಕ್ಕಳಷ್ಟಿದೆ. ಸಾಮಾನ್ಯವಾಗಿ ಒಂದು ಪೀಳಿಗೆಯ ಜನಸಂಖ್ಯೆಯನ್ನು ಮುಂದಿನ ಪೀಳಿಗೆಯಲ್ಲಿ ಅದೇ ಮಟ್ಟದಲ್ಲಿ ಉಳಿಸಿಕೊಳ್ಳಲು ಪ್ರತಿ ಮಹಿಳೆಗೆ ಸರಾಸರಿ 2.1 ರಷ್ಟು ಮಕ್ಕಳ ಜನನ ಪ್ರಮಾಣ ಅಗತ್ಯವೆಂದು ಪರಿಗಣಿಸಲಾಗುತ್ತದೆ.
ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮುಸ್ಲಿಮರು
2070ರ ವೇಳೆಗೆ ಪಾಕಿಸ್ತಾನವು ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದ್ದು ಪ್ರಸ್ತುತ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ಇಂಡೋನೇಷ್ಯಾವನ್ನು ಪಾಕಿಸ್ತಾನ ಹಿಂದಿಕ್ಕಲಿದೆ. ನಂತರದ ಸ್ಥಾನಗಳಲ್ಲಿ ಭಾರತ ಮತ್ತು ನೈಜೀರಿಯಾ ಇರಲಿವೆ. ಅಂದರೆ, ಭಾರತವು 2070ರ ವೇಳೆಗೆ ವಿಶ್ವದ ಎರಡನೇ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ನಿರೀಕ್ಷೆಯಿದೆ.
ಇದೇ ವೇಳೆಗೆ, ಅಮೆರಿಕದಲ್ಲಿ ಕ್ರೈಸ್ತರು ಬಹುಸಂಖ್ಯಾತ ಸ್ಥಾನವನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ. ಆದರೂ ಅಲ್ಲಿನ ಅತಿ ದೊಡ್ಡ ಧಾರ್ಮಿಕ ಗುಂಪಾಗಿ ಕ್ರೈಸ್ತರೇ ಮುಂದುವರಿಯಲಿದ್ದಾರೆ ಎಂದು ವರದಿ ತಿಳಿಸಿದೆ. ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಬೌದ್ಧರ ಜನಸಂಖ್ಯೆಯೂ ಕುಸಿಯುವ ನಿರೀಕ್ಷೆಯಿದೆ. ಈ ದೇಶಗಳಲ್ಲಿ ಬೌದ್ಧರ ದೊಡ್ಡ ಸಮುದಾಯಗಳಿರುವುದರಿಂದ ಜಾಗತಿಕ ಬೌದ್ಧ ಜನಸಂಖ್ಯೆಯ ಮೇಲೂ ಪರಿಣಾಮ ಬೀರಲಿದೆ. 2020ರಲ್ಲಿ ಸುಮಾರು 32 ಕೋಟಿ ಇದ್ದ ಬೌದ್ಧರ ಸಂಖ್ಯೆ 2070ರ ವೇಳೆಗೆ 25 ಕೋಟಿಗೆ ಇಳಿಯಬಹುದು ಎಂದು ಪ್ಯೂ ಅಂದಾಜಿಸಿದೆ.
20-11-26 05:15 pm
HK News Staffer
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
ರಾಜ್ಯದಲ್ಲಿ 30ಕ್ಕೂ ಹೆಚ್ಚು ಐಪಿಎಸ್ ವರ್ಗಾವಣೆ ; ಬೆ...
18-11-26 07:26 pm
20-11-26 12:58 pm
HK News Staffer
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
ಮಂಗಳೂರಿನಲ್ಲಿ ತಪ್ಪಿದ ಭಾರೀ ಅನಾಹುತ ! ಟೇಕಾಫ್ ಹಂತದ...
16-11-26 10:56 pm
20-11-26 09:53 pm
HK News Staffer
ಮುಸ್ಲಿಂ ಯುವತಿ ಅಪಹರಣ ; ಕೇರಳದಲ್ಲಿ ಸಂಬಂಧಿಕರ ಮನೆಯ...
20-11-26 09:51 pm
ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ಮುಸ್ಲಿಂ ವಿದ್ಯ...
20-11-26 02:32 pm
‘ಸ್ಟಡಿ’ ಮಾಡಿಕೊಳ್ಳದ ವಿಪಕ್ಷ ನಾಯಕ, ಅದೇ ಒಣ- ನೀರಸ...
19-11-26 07:09 pm
ದೀಪಾವಳಿಗೆ ಪಟಾಕಿ ಸಿಡಿಸಿದ್ದಕ್ಕೆ ವಿದ್ಯಾರ್ಥಿಗಳ ಫ್...
19-11-26 03:22 pm
19-11-26 09:20 pm
HK News Staffer
Baglur Manchapanahalli Murder: ಗುಜರಿ ವ್ಯಾಪಾರದ...
19-11-26 03:20 pm
Fr Cyprian Pinto Arrest: ಪೋಕ್ಸೋ ಕೇಸು ; ಎರಡನೇ...
18-11-26 07:20 pm
ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ...
18-11-26 12:46 pm
ಬಂಟ್ವಾಳದಲ್ಲಿ ವ್ಯಾಪಾರಿ ಅಡ್ಡಗಟ್ಟಿ ಎಂಟು ಲಕ್ಷ ದರೋ...
18-11-26 12:36 pm