ಬ್ರೇಕಿಂಗ್ ನ್ಯೂಸ್
12-03-26 11:46 am HK News Staffer ಕ್ರೀಡೆ
ಮುಂಬೈ, ಮಾ 12: ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತೀಯ ತಂಡ ಸಂಭ್ರಮದಲ್ಲಿದ್ದಾಗ, ತಂಡದ ಆಲ್ರೌಂಡರ್ ಶಿವಂ ದುಬೆ ತಮ್ಮ ಸರಳತೆಯಿಂದ ಗಮನ ಸೆಳೆದಿದ್ದಾರೆ. ಅಹಮದಾಬಾದ್ನಿಂದ ಮುಂಬೈಗೆ ಮರಳಲು ವಿಮಾನದ ಟಿಕೆಟ್ ಸಿಗದ ಕಾರಣ, ಅವರು ಸಾಮಾನ್ಯ ಪ್ರಯಾಣಿಕನಂತೆ ರೈಲಿನಲ್ಲಿ ಪ್ರಯಾಣಿಸಿದ ಘಟನೆ ಇದೀಗ ವೈರಲ್ ಆಗಿದೆ.
ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 96 ರನ್ಗಳ ಭರ್ಜರಿ ಜಯ ಸಾಧಿಸಿ ಟಿ20 ವಿಶ್ವಕಪ್ ಕಪ್ ಗೆದ್ದಿತ್ತು. ಪಂದ್ಯ ಮುಗಿದ ಬಳಿಕ ಆಟಗಾರರು ಟ್ರೋಫಿಯೊಂದಿಗೆ ಹೋಟೆಲ್ನಲ್ಲಿ ಸಂಭ್ರಮಾಚರಣೆ ನಡೆಸಿದ್ದರು.
ಆದರೆ ಮಧ್ಯರಾತ್ರಿ ಬಳಿಕ ಶಿವಂ ದುಬೆ ಮಾತ್ರ ಮನೆಗೆ ಬೇಗ ತಲುಪಬೇಕೆಂಬ ಆಸೆಯಿಂದ ಪ್ರಯಾಣದ ಯೋಜನೆ ಮಾಡಿದರು. ವಿಮಾನ ಟಿಕೆಟ್ ಹುಡುಕಿದಾಗ ಎಲ್ಲಾ ಫ್ಲೈಟ್ಗಳು ಫುಲ್ ಬುಕ್ ಆಗಿದ್ದವು. ಹೀಗಾಗಿ ಕಾಯುವ ಬದಲು ಮುಂಜಾನೆ ರೈಲಿನಲ್ಲಿ ಪ್ರಯಾಣಿಸುವುದೇ ಉತ್ತಮ ಎಂದು ಅವರು ನಿರ್ಧರಿಸಿದರು.
ಅದರಂತೆ ಅಹಮದಾಬಾದ್ನಿಂದ ಮುಂಬೈಗೆ ರೈಲು ಹತ್ತಿದರು. ಅಭಿಮಾನಿಗಳಿಗೆ ಗುರುತು ಸಿಗದಂತೆ ದುಬೆ ಕ್ಯಾಪ್, ಮಾಸ್ಕ್ ಹಾಗೂ ಫುಲ್ ಸ್ಲೀವ್ ಟೀ-ಶರ್ಟ್ ಧರಿಸಿ ಸಾಮಾನ್ಯ ಪ್ರಯಾಣಿಕನಂತೆ 3ನೇ ಎಸಿ ಕೋಚ್ನಲ್ಲಿ ಮೇಲಿನ ಬರ್ತ್ಗೆ ಹತ್ತಿ ಕುಳಿತಿದ್ದರು.
ಈ ವೇಳೆ ಟಿಕೆಟ್ ಪರಿಶೀಲನೆಗೆ ಬಂದ ಟಿಸಿ, ಪ್ರಯಾಣಿಕರ ಪಟ್ಟಿಯಲ್ಲಿ ಶಿವಂ ದುಬೆ ಎಂಬ ಹೆಸರನ್ನು ನೋಡಿ “ಇವರು ಆ ಕ್ರಿಕೆಟರ್ ಶಿವಂ ದುಬೆನಾ?” ಎಂದು ಪ್ರಶ್ನಿಸಿದ್ದರಂತೆ. ಆಗ ಕೆಳಗಿನ ಸೀಟಿನಲ್ಲಿ ಕೂತಿದ್ದ ಅವರ ಪತ್ನಿ ಅಂಜುಮ್ ಖಾನ್ “ಅಯ್ಯೋ ಇಲ್ಲ ಇಲ್ಲ, ಅವರು ಇಲ್ಲಿ ಯಾಕೆ ಬರುತ್ತಾರೆ?” ಎಂದು ಹೇಳಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರಂತೆ. ಇದನ್ನು ನಂಬಿದ ಟಿಸಿ ಮುಂದೆ ಹೋಗಿದ್ದಾರೆ.
ಕೊನೆಗೆ ಮುಂಬೈನ ಬೋರಿವಲಿ ನಿಲ್ದಾಣದಲ್ಲಿ ಇಳಿದ ಶಿವಂ ದುಬೆ ಅವರನ್ನು ಸ್ಥಳೀಯ ಪೊಲೀಸರು ಭದ್ರತೆಯೊಂದಿಗೆ ಮನೆ ತಲುಪಿಸಿದ್ದಾರೆ. ಮಾರ್ಚ್ 8ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದುಬೆ ಕೇವಲ 8 ಎಸೆತಗಳಲ್ಲಿ 26 ರನ್ ಸಿಡಿಸಿ ಭಾರತ ದೊಡ್ಡ ಮೊತ್ತ ಪೇರಿಸಲು ನೆರವಾಗಿದ್ದರು. ಟೂರ್ನಿಯಲ್ಲಿ ಒಟ್ಟು 235 ರನ್ ಹಾಗೂ 5 ವಿಕೆಟ್ ಪಡೆದು ಅವರು ಮಿಂಚಿದ್ದರು.
ವಿಶ್ವಕಪ್ ಗೆದ್ದ ಬಳಿಕವೂ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಪ್ರಯಾಣಿಸಿದ ಶಿವಂ ದುಬೆ ಅವರ ಸರಳತೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 01:56 pm
HK News Staffer
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm