ಬ್ರೇಕಿಂಗ್ ನ್ಯೂಸ್
22-06-24 11:42 am HK News Desk ಕ್ರೀಡೆ
ಗ್ರಾಸ್ ಐಲೆಟ್, ಜೂನ್.22: ಅಂತಿಮ ಮೂರು ಓವರ್‌ಗಳಲ್ಲಿ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಮಾರ್ಕೋ ಜಾನೆಸನ್, ಕಾಗಿಸೊ ರಬಾಡ ಹಾಗೂ ಆನ್ರಿಕ್ ನೋಕಿಯ ಅವರ ಪರಾಕ್ರಮದಿಂದ ದಕ್ಷಿಣ ಆಫ್ರಿಕಾ ತಂಡವು ಟಿ 20 ವಿಶ್ವಕಪ್ ಸೂಪರ್ -8 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಏಳು ರನ್‌ಗಳಿಂದ ಪರಾಭವಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್(65 ರನ್, 38 ಎಸೆತ, 4x4, 4x6) ಬಿರುಸಿನ ಆಟದ ನೆರವಿನಿಂದ ಆರು ವಿಕೆಟ್ ಗೆ 163 ರನ್ ಗಳಿಸಿತು. ಡಿಕಾಕ್ ಮತ್ತು ರೀಜಾ ಹೆಂಡ್ರಿಕ್ಸ್(19) ಮೊದಲ ವಿಕೆಟ್ ಗೆ ಭರ್ಜರಿ 86 ರನ್ ಸೇರಿಸಿದರೂ ನಂತರ ಬಂದ ಆಟಗಾರರು ಇದರ ಉಪಯೋಗ ಪಡೆಯಲಿಲ್ಲ. ಕೊನೆಯಲ್ಲಿ ಡೇವಿಡ್ ಮಿಲ್ಲರ್(43) ತಂಡದ ಮೊತ್ತವನ್ನು ಹಿಗ್ಗಿಸಿದರು.
ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಆರು ವಿಕೆಟ್ ಗೆ 156 ರನ್ ಮಾಡಲಷ್ಟೇ ಶಕ್ತವಾಗಿ ಸೋಲನುಭವಿಸಿತು. ಒಂದು ಹಂತದಲ್ಲಿ ಹ್ಯಾರಿ ಬ್ರೂಕ್ (53 ರನ್, 37 ಎಸೆತ, 7x4) ಮತ್ತು ಲಿಯಮ್ ಲಿವಿಂಗ್ ಸ್ಟೋನ್ (33) ಆಫ್ರಿಕಾ ಕೈಯಿಂದ ಜಯ ಕಸಿಯುವ ಯತ್ನ ಮಾಡಿದರೂ ಸಫಲವಾಗಲಿಲ್ಲ.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 163/6 (ಡಿಕಾಕ್ 65, ಮಿಲ್ಲರ್ 43, ಹೆಂಡ್ರಿಕ್ಸ್ 19, ಆರ್ಚರ್ 40/3)
ಇಂಗ್ಲೆಂಡ್ 156/6 (ಬ್ರೂಕ್ 53, ಲಿವಿಂಗ್ ಸ್ಟೋನ್ 33, ಕೇಶವ ಮಹಾರಾಜ್ 25/2, ರಬಾಡ 32/2)
ವೆಸ್ಟ್ ಇಂಡೀಸ್ ಜಯಭೇರಿ; ಇಂದು ಬೆಳಗ್ಗೆ ನಡೆದ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡ ಅಮೇರಿಕಾವನ್ನು 9 ವಿಕೆಟ್ ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಅಮೇರಿಕಾ ಮೊದಲು ಬ್ಯಾಟಿಂಗ್ ಮಾಡಿ 128ಕ್ಕೆ ಆಲೌಟ್ ಆದರೆ ವೆಸ್ಟ್ ಇಂಡೀಸ್ 10.5 ಓವರ್‌ಗಳಲ್ಲ್ಲೇ ಒಂದು ವಿಕೆಟ್ ಗೆ 130 ರನ್ ಗಳಿಸಿ ಗೆಲುವಿನ ನಗು ಬೀರಿತು.
Chasing a target of 129, West Indies were powered to a nine-wicket victory over the USA in their Super 8 game by Shai Hope, who blasted a 39-ball 82 (with eight sixes and four fours). Hope had reached his half century off just 26 balls.
16-10-25 04:44 pm
HK News Desk
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
ರಘು ದೀಕ್ಷಿತ್ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ; 50ರ...
15-10-25 03:32 pm
15-10-25 11:02 pm
HK News Desk
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
16-10-25 01:11 pm
Mangalore Correspondent
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು ;...
15-10-25 12:12 pm
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm