ಬ್ರೇಕಿಂಗ್ ನ್ಯೂಸ್
26-07-23 02:48 pm Source: Mykhel Kannada ಕ್ರೀಡೆ
ಭಾರತೀಯ ಕ್ರಿಕೆಟ್ ತಂಡ ಈವರೆಗೆ ಹಲವು ಬೌಲಿಂಗ್ ದಿಗ್ಗಜರನ್ನು ಕಂಡಿದೆ. ಅವರ ಸಾಮರ್ಥ್ಯದೊಂದಿಗೆ ಅವರ ಅಂಕಿಅಂಶಗಳು ತೋರಿಸುತ್ತವೆ ಮತ್ತು ಒಬ್ಬರಿಗಿಂತ ಮತ್ತೊಬ್ಬರು ಭಿನ್ನಾವಾಗಿರುತ್ತಾರೆ. ಆದರೆ, ಒಂದೇ ರೀತಿಯ ಪ್ರದರ್ಶನದೊಂದಿಗೆ ಒಂದೇ ರೀತಿ ಅಂಕಿಅಂಶ ಹೊಂದಿರುವುದನ್ನು ಎಲ್ಲಾದರೂ ಕೇಳಿದ್ದೀರಾ?.
ಭಾರತೀಯ ಬೌಲರ್‌ಗಳಾದ ಜಹೀರ್ ಖಾನ್ ಮತ್ತು ಇಶಾನ್ ಶರ್ಮಾ ಆ ಪಟ್ಟಿಗೆ ಸೇರುತ್ತಾರೆ. ಆದಾಗ್ಯೂ, ಈ ಜೋಡಿಯ ಅಂಕಿಅಂಶಗಳ ಹಿಂದೆ ಒಂದು ಅದ್ಭುತ ಆಶ್ಚರ್ಯವಿದೆ. ಇಬ್ಬರು ಆಟಗಾರರ ಅಂಕಿಅಂಶಗಳ ನಡುವೆ ಅಪರೂಪದ ಹೋಲಿಕೆ ಕಂಡುಬಂದಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಈವರೆಗೆ ಜಹೀರ್ ಖಾನ್ ಮತ್ತು ಇಶಾನ್ ಶರ್ಮಾ ಅವರ ಬೌಲಿಂಗ್ ಅಂಕಿಅಂಶಗಳು, ಅವರ ವಿಕೆಟ್‌ಗಳು, ಐದು-ವಿಕೆಟ್‌ಗಳ ಸಾಧನೆಗಳು, ಭಾರತದಲ್ಲಿನ ವಿಕೆಟ್‌ಗಳು ಮತ್ತು ಭಾರತದ ಹೊರಗಿನ ವಿಕೆಟ್ ಸಂಖ್ಯೆಗಳನ್ನು ಪರಿಗಣಿಸಿದಾಗ ಸಂಪೂರ್ಣವಾಗಿ ಒಂದೇ ಆಗಿವೆ.
ಭಾರತದ ಮಾಜಿ ವೇಗಿ ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ರಾಷ್ಟ್ರೀಯ ತಂಡಕ್ಕೆ ಬೌಲಿಂಗ್‌ನಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕ್ರಿಕೆಟ್ ಇಷ್ಟು ಗಮನ ಸೆಳೆಯಲು ಕಾರಣವೆನೆಂದರೆ, ಈ ಜೋಡಿಯು ಕ್ರಿಕೆಟ್‌ನ ಟೆಸ್ಟ್ ಸ್ವರೂಪದಲ್ಲಿ ಒಂದೇ ರೀತಿಯ ಅಂಕಿಅಂಶಗಳನ್ನು ಹಂಚಿಕೊಂಡಿರುವುದು.
IPL Points Table 2023: ಪಾಯಿಂಟ್ ಟೇಬಲ್ ನಲ್ಲಿ ದಿಢೀರ್ ಕುಸಿತ ಕಂಡ ಫಾಫ್ ಪಡೆ
ಗಮನಾರ್ಹವಾಗಿ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಂದು, ಇಶಾಂತ್ ಶರ್ಮಾ ಮತ್ತು ಜಹೀರ್ ಖಾನ್ ಅವರು ಜಿಯೋಸಿನಿಮಾದಲ್ಲಿ ವೀಕ್ಷಕ ವಿವರಣೆ ತಂಡದ ಭಾಗವಾಗಿದ್ದರು. ಎರಡನೇ ಟೆಸ್ಟ್ ಪಂದ್ಯವನ್ನು ಕವರ್ ಮಾಡುವ ಮಧ್ಯೆ, ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರಿಬ್ಬರ ಅಂಕಿಅಂಶಗಳನ್ನು ಪ್ರದರ್ಶಿಸಿದರು. ಅದು ಎಲ್ಲರನ್ನು ಬೆರಗುಗೊಳಿಸುವಂತಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಬ್ಬರೂ ವೇಗಿಗಳು ತವರಿನಲ್ಲಿ 207 ವಿಕೆಟ್‌ಗಳು ಮತ್ತು ವಿದೇಶದಲ್ಲಿ 104 ವಿಕೆಟ್‌ಗಳನ್ನು ಪಡೆದಿದ್ದು, ಒಟ್ಟಾರೆ ಒಂದೇ ರೀತಿಯಾಗಿ 311 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಜಹೀರ್ ಖಾನ್ ಮತ್ತು ಇಶಾಂತ್ ಶರ್ಮಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ತಲಾ 11 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ ಮತ್ತು ತಲಾ 1 ಬಾರಿ ಹತ್ತು ವಿಕೆಟ್ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಜಿ ವೇಗಿ ಜಹೀರ್ ಖಾನ್ 2011ರ ಏಕದಿನ ವಿಶ್ವಕಪ್ ಗೆದ್ದ ನಂತರ 2015ರಲ್ಲಿ ತಮ್ಮ ಸುಪ್ರಸಿದ್ಧ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದರು. 2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಜಂಟಿ ವಿಜೇತ ತಂಡದಲ್ಲಿ ಜಹೀರ್ ಖಾನ್ ಒಬ್ಬರಾಗಿದ್ದರು.
ಮತ್ತೊಂದೆಡೆ, ಇನ್ನೂ ಕ್ರಿಕೆಟ್‌ನಿಂದ ನಿವೃತ್ತಿಯಾಗಿರದ ಇಶಾಂತ್ ಶರ್ಮಾ ಇತ್ತೀಚೆಗೆ 2023ರ ಐಪಿಎಲ್‌ಗೆ ಹಿಂದಿರುಗಿದರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಚೆಂಡಿನೊಂದಿಗೆ ಉತ್ತಮ ಋತುವನ್ನು ಆಡಿದರು.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು. ಇದೀಗ ಎರಡೂ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.
ಭಾರತ ತಂಡಕ್ಕೆ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯನ್ನು ಪರಿಗಣಿಸಿದರೆ, ಈ ಏಕದಿನ ಸರಣಿಯು ಪ್ರಮುಖವಾಗಿರಲಿದೆ. ಇನ್ನು ವೆಸ್ಟ್ ಇಂಡೀಸ್ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿದ್ದು, ತಂಡದ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಗೆಲುವು ಅನಿವಾರ್ಯವಾಗಿದೆ.
Interesting facts about Zaheer and Ishants stats revealed during match commentary.
31-08-25 07:17 pm
HK News Desk
Siddaramaiah, Banumustak: ನಾಡಹಬ್ಬ ದಸರಾ ಎಲ್ಲರಿ...
31-08-25 05:35 pm
Bangalore Court, Dharmasthala, Delete Videos:...
30-08-25 04:51 pm
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
31-08-25 01:32 pm
HK News Desk
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
Siddaramaiah, 1991 Election: 1991ರ ಚುನಾವಣೆಯಲ್...
29-08-25 05:20 pm
31-08-25 01:56 pm
Mangaluru Correspondent
Udupi, Diksha Sets New World Record, Bharatan...
31-08-25 12:49 pm
ಬೆಂಗಳೂರಿನಲ್ಲಿ ಉಳಿದಿದ್ದು ನಿಜ, ದೆಹಲಿಗೆ ಹೋಗಿದ್ದೂ...
30-08-25 11:08 pm
2002ರ ಉಳ್ಳಾಲದ ಚಾರಿತ್ರಿಕ ನಾಗಮಂಡಲದ ರೂವಾರಿ, ಧಾರ್...
30-08-25 11:01 pm
Mangalore, Ganesh Chaturthi, Catholic: ಸಂಘನಿಕ...
30-08-25 10:10 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm