ಬ್ರೇಕಿಂಗ್ ನ್ಯೂಸ್
28-01-23 01:40 pm Source: Vijayakarnataka ಕ್ರೀಡೆ
ವಾಷಿಂಗ್ಟನ್ ಸುಂದರ್ ಅವರ ಆಲ್‌ರೌಂಡ್ ಪ್ರದರ್ಶನದ ಹೊರತಾಗಿಯೂ ಭಾರತ ತಂಡ ಮೊದಲನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 21 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಟಿ20 ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತು. ಇದರ ಹೊರತಾಗಿಯೂ ವಾಷಿಂಗ್ಟನ್ ಸುಂದರ್ ಅವರು ಪಡೆದ ಕ್ಯಾಚ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಏಕದಿನ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್ ವಾಷ್ ಆಘಾತ ಅನುಭವಿಸಿದ್ದ ನ್ಯೂಜಿಲೆಂಡ್, ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಕಮ್‌ಬ್ಯಾಕ್ ಮಾಡಿತು. ಭಾರತದ ಪ್ರವಾಸದಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ನ್ಯೂಜಿಲೆಂಡ್ ತಂಡಕ್ಕೆ ಇದು ಮೊದಲು ಗೆಲುವಾಗಿದೆ.
ಪಂದ್ಯದಲ್ಲಿ ಭಾರತ ತಂಡ ಸೋತರೂ ವಾಷಿಂಗ್ಟನ್ ಸುಂದರ್ ಅವರು ತಮ್ಮ ಆಲ್‌ರೌಂಡರ್ ಪ್ರದರ್ಶನದ ಮೂಲಕ ಎಲ್ಲರ ಮನಸು ಗೆದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್ ಮಾಡುತ್ತಿದ್ದ ಫಿನ್ ಅಲೆನ್(35 ರನ್) ಅವರನ್ನು ಔಟ್ ಮಾಡಿದ ಬಳಿಕ, ಮಾರ್ಕ್ ಚಾಂಪ್ಮನ್ (0) ಅವರನ್ನು ತಮ್ಮ ಬೌಲಿಂಗ್‌ನಲ್ಲಿಯೇ ಕಾಟ್ ಅಫ್ ಬೌಲ್ಡ್ ಮಾಡಿದರು.
ಎರಡನೇ ಎಸೆತದಲ್ಲಿ ವಿಕೆಟ್: 5ನೇ ಓವರ್‌ನ ಮೊದಲ ಎಸೆತವನ್ನು ಹೊಡೆದ ನಂತರ ಫಿನ್ ಅಲೆನ್ ನಿಲ್ಲಲಿಲ್ಲ. ಎರಡನೇ ಎಸೆತದಲ್ಲೂ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಡೀಪ್‌ನಲ್ಲಿ ನಿಂತಿದ್ದ ಸೂರ್ಯಕುಮಾರ್ ಯಾದವ್ ಅವರ ಕೈ ಸೇರಿತು. ಏಕದಿನ ಸರಣಿಯಲ್ಲಿ ವಿಫಲರಾಗಿದ್ದ ಅಲೆನ್, 23 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 35 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದರು. ಅವರು ಔಟಾದ ನಂತರ ಮಾರ್ಕ್ ಚಾಂಪ್ಮನ್ ಕ್ರೀಸ್‌ಗೆ ಬಂದರು. ವಾಷಿಂಗ್ಟನ್ ಸುಂದರ್ ಅವರ ಸತತ ಮೂರು ಎಸೆತಗಳಲ್ಲಿ ಖಾತೆ ತೆರೆಯುವಲ್ಲಿ ಚಾಂಪ್ಮನ್ ವಿಫಲರಾದರು.
Washington Sundar’s catch made remember “Sundar Kand” where Hanuman flew to Lanka.#IndvsNZ #Washington #NZvIND #T20I
— Sarcastically Yours (@sarcastic_urs) January 27, 2023
ಸ್ಟನ್ನಿಂಗ್ ಕ್ಯಾಚ್ ಪಡೆದ ವಾಷಿಂಗ್ಟನ್: ವಾಷಿಂಗ್ಟನ್ ಸುಂದರ್ ಅವರ ಆರಂಭಿಕ ಮೂರು ಎಸೆತಗಳನ್ನು ಡಾಟ್ ಮಾಡಿದ ಬಳಿಕ ಮಾರ್ಕ್ ಚಾಂಪ್ಮನ್ ಕೊನೆಯ ಎಸೆತವನ್ನು ಲಾಂಗ್ ಆಫ್‌ಗೆ ತಳ್ಳಲು ಪ್ರಯತ್ನಿಸಿದರು. ಆದರೆ, ಅವರ ಯೋಜನೆ ಸಕಾರವಾಗಲಿಲ್ಲ. ಚೆಂಡು ಸರಿಯಾಗಿ ಬ್ಯಾಟ್‌ಗೆ ಮಿಡ್ಲ್ ಆಗಲಿಲ್ಲ ಹಾಗೂ ಶಾರ್ಟ್ ಕವರ್ಸ್ ಕಡೆ ಹೋಗುತ್ತಿತ್ತು. ಈ ವೇಳೆ ಸಮಯ ಪ್ರಜ್ಞೆ ಮೆರೆದ ವಾಷಿಂಗ್ಟನ್ ಸುಂದರ್ ಗಾಳಿಯಲ್ಲಿ ಹಾರಿ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಫೀಲ್ಡ್ ಅಂಪೈರ್ ಮೂರನೇ ಅಂಪೈರ್ ಸಹಾಯ ಪಡೆದರು. ವಿಡಿಯೋದಲ್ಲಿ ಸುಂದರ್ ಚೆಂಡನ್ನು ಹಿಡಿದಿರುವುದು ಸ್ಪಷ್ಟವಾಗಿತ್ತು.
WHAT. A. CATCH 🔥🔥@Sundarwashi5 dives to his right and takes a stunning catch off his own bowling 😎#TeamIndia | #INDvNZ
— BCCI (@BCCI) January 27, 2023
Live - https://t.co/9Nlw3mU634 #INDvNZ @mastercardindia pic.twitter.com/8BBdFWtuEu
ಅಕ್ಷರ ಪಟೇಲ್ ಸ್ಥಾನದಲ್ಲಿ ಆಡುತ್ತಿರುವ ವಾಷಿಂಗ್ಟನ್: ಅಕ್ಷರ್ ಪಟೇಲ್ ಅವರು ಮದುವೆಯ ಕಾರಣ ಭಾರತ ತಂಡದಿಂದ ದೂರ ಉಳಿದಿದ್ದಾರೆ. ಈ ಕಾರಣದಿಂದಾಗಿ ವಾಷಿಂಗ್ಟನ್ ಸುಂದರ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಸಿಕ್ಕ ಅವಕಾಶವನ್ನು ಚೆನ್ನೈ ಮೂಲಕ ಆಟಗಾರ ಮೊದಲನೇ ಪಂದ್ಯದಲ್ಲಿ ಬಳಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಕೊನೆಯ ಟಿ20 ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಬೆಂಚ್ ಕಾದಿದ್ದರು.
ಬ್ಯಾಟಿಂಗ್‌ನಲ್ಲಿಯೂ ಮಿಂಚಿದ ವಾಷಿಂಗ್ಟನ್ ಸುಂದರ್: 177 ರನ್ ಗುರಿ ಹಿಂಬಾಲಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶುಭಮನ್ ಗಿಲ್, ಇಶಾನ್ ಕಿಶನ್ ಹಾಗೂ ರಾಹುಲ್ ತ್ರಿಪಾಠಿ ಬಹುಬೇಗ ವಿಕೆಟ್ ಒಪ್ಪಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 47 ರನ್ ಹಾಗೂ ಹಾರ್ದಿಕ್ ಪಾಂಡ್ಯ 21 ರನ್ ಗಳಿಸಿ ವಿಕೆಟ್ ಒಪ್ಪಿಸಿ ಪಂದ್ಯವನ್ನು ಮುಗಿಸುವಲ್ಲಿ ವಿಫಲರಾದರು.
🔥🔥 MAGNIFICENT CATCH by Washington Sundar off his own bowling 💪😎🏏
— PostLo.com (@postlo) January 27, 2023
He was named by his father M. Sundar in honor of a man named P.D. Washington, who had sponsored the elder Sundar's cricket passion. 😍#TeamIndia #WashingtonSunder
✅ Follow @postlopic.twitter.com/9S0STEgtSY
ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನ ತೋರಿದರು. ಎದುರಿಸಿದ 28 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 50 ರನ್ ಸಿಡಿಸಿದರು. ಇದರ ಹೊರತಾಗಿಯೂ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಅವರಿಂದ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಅವರು 4 ಓವರ್‌ಗಳಿಗೆ ಕೇವಲ 22 ರನ್ ನೀಡಿ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದಿದ್ದರು.
Ind Vs Nz Washington Sundar, You Beauty. What A Catch Fans Louds Allrounder For Beautiful Catch In 1st T20i Against New Zealand.
07-09-25 10:17 am
Bangalore Correspondent
Mandya Suicide, Marriage: ಮದುವೆ ಕ್ಯಾನ್ಸಲ್ ಆಗಿ...
07-09-25 10:11 am
Sirsi Airgun, Murder, Crime: ಶಿರಸಿ; ಏರ್ಗನ್ ಗ...
06-09-25 08:28 pm
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
07-09-25 02:25 pm
Mangalore Correspondent
Ullal, Mangalore Police: ಮೊದಲ ಪತ್ನಿಗೆ ಜೀವನಾಂಶ...
06-09-25 10:59 pm
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
07-09-25 03:34 pm
Mangalore Correspondent
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm