ಬ್ರೇಕಿಂಗ್ ನ್ಯೂಸ್
21-12-22 01:13 pm Source: Vijayakarnataka ಕ್ರೀಡೆ
ಆಲ್‌ರೌಂಡ್ ಆಟವಾಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಆತಿಥೇಯ ಭಾರತ ಮಹಿಳಾ ಕ್ರಿಕೆಟ್ ತಂಡದ ಎದುರು ಟಿ20 ಕ್ರಿಕೆಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ 54 ರನ್‌ಗಳ ಭರ್ಜರಿ ಜಯ ದಾಖಲಿಸಿತು. ಆಸೀಸ್ ಪರ ಆಲ್‌ರೌಂಡರ್‌ಗಳಾದ ಆಷ್ಲೇ ಗಾರ್ಡ್ನರ್ ಮತ್ತು ಗ್ರೇಸ್ ಹ್ಯಾರಿಸ್ ಸ್ಪೋಟಕ ಅರ್ಧಶತಕಗಳನ್ನು ಬಾರಿಸಿ ಆಸೀಸ್ ಗೆಲುವಿನ ರೂವಾರಿಗಳಾದರು.
ಇಲ್ಲಿನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡುವಂತ್ತಾದ ಆಸ್ಟ್ರೇಲಿಯಾ ತಂಡಕ್ಕೆ ಟೀಮ್ ಇಂಡಿಯಾ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. 17 ರನ್‌ಗಳ ಒಳಗೆ ಆಸೀಸ್‌ನ ಇಬ್ಬರೂ ಓಪನರ್‌ಗಳನ್ನು ಭಾರತೀಯ ಬೌಲರ್‌ಗಳು ಪೆವಿಲಿಯನ್ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆಸೀಸ್ ಕ್ಯಾಪ್ಟನ್ ಹಾಗೂ ಪ್ರಮುಖ ಬ್ಯಾಟರ್ ತಹ್ಲಿಯಾ ಮೆಗ್ರಾತ್ (26) ಕೂಡ ಹೆಚ್ಚೇನು ಅಬ್ಬರಿಸಲಿಲ್ಲ. ಸರಣಿಯಲ್ಲಿ ಅತ್ಯುತ್ತಮ ಲಯ ಕಾಯ್ದುಕೊಂಡಿದ್ದ ಆಲ್‌ರೌಂಡರ್ ಎಲೀಸ್ ಪೆರಿ 14 ಎಸೆತಗಳಲದ್ಲಿ 18 ರನ್ ಮಾತ್ರವೇ ಗಳಿಸಿದರು.
ಆದರೆ, ನಂತರ ಜೊತೆಯಾದ ಆಲ್‌ರೌಂಡರ್‌ಗಳಾದ ಆಷ್ಲೇ ಗಾರ್ಡ್ನರ್ (66*) ಮತ್ತು ಗ್ರೇಸ್ ಹ್ಯಾರಿಸ್ (64*) ಐದನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನಾಡಿದರು. ಆಷ್ಲೇ ಕೇವಲ 36 ಎಸೆತಗಳಲ್ಲಿ 11 ಫೋರ್ ಮತ್ತು 1 ಸಿಕ್ಸರ್ ನೆರವಿನೊಂದಿಗೆ 205.25 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 66 ರನ್ ಚೆಚ್ಚಿದರು. ಉತ್ತಮ ಸಾಥ್ ನೀಡಿದ ಗ್ರೇಸ್, 35 ಎಸೆತಗಳಲ್ಲಿ 6 ಫೋರ್ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 64 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆರಂಭಿಕ ಆಘಾತದಿಂದ ಚೇತರಿಸಿದ ಆಸ್ಟ್ರೇಲಿಯಾ ತಂಡ ತನ್ನ 20 ಓವರ್‌ಗಳಲ್ಲಿ 196/4 ರನ್ ಪೇರಿಸಿತು.
ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯ
ರನ್‌ಚೇಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. 8 ಓವರ್‌ಗಳಲ್ಲಿ 54 ರನ್ ಕಲೆಹಾಕುವಷ್ಟರಲ್ಲೇ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 16 ಎಸೆತಗಳಲ್ಲಿ 24 ರನ್ ಸಿಡಿಸಿ ಉತ್ತಮವಾಗಿ ಬ್ಯಾಟ್ ಮಾಡುತ್ತಿದ್ದ ಹರ್ಲೀನ್ ಡಿಯೋಲ್ ರನ್‌ಔಟ್ ಆಗಿದ್ದು ಭಾರತ ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಯಿತು. ಇನಿಂಗ್ಸ್ ಮಧ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ ಆಲ್‌ರೌಂಡರ್ ದೀಪ್ತಿ ಶರ್ಮಾ 34 ಎಸೆತಗಳಲ್ಲಿ 53 ರನ್ ಸಿಡಿಸಿದರು. ಅವರ ಬಿರುಸಿನ ಇನಿಂಗ್ಸ್‌ನಲ್ಲಿ 8 ಫೋರ್ ಮತ್ತು 1 ಸಿಕ್ಸರ್ ಮೂಡಿಬಂದವು. ಇದರಿಂದ ತಂಡದ ಸೋಲಿನ ಅಂತರ ತಗ್ಗಿಸಲಷ್ಟೇ ಪ್ರಯೋಜನವಾಯಿತು. ಆಸೀಸ್ ಪರ ಸಾಂದರ್ಭಿಕ ಬೌಲರ್ ಹೆದರ್ ಗ್ರಹಾಮ್ 8ಕ್ಕೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 196 ರನ್ (ಆಷ್ಲೇ ಗಾರ್ಡ್ನರ್ 66*, ಗ್ರೇಸ್ ಹ್ಯಾರಿಸ್ 64*; ಶಫಾಲಿ ವರ್ಮಾ 17ಕ್ಕೆ 1, ದೇವಿಕಾ ವೈದ್ಯ 26ಕ್ಕೆ 1).
ಭಾರತ ಮಹಿಳಾ ಕ್ರಿಕೆಟ್ ತಂಡ: 20 ಓವರ್‌ಗಳಲ್ಲಿ 142 ರನ್‌ಗೆ ಆಲ್‌ಔಟ್ (ಹರ್ಲೀನ್ ಡಿಯೋಲ್ 24, ದೀಪ್ತಿ ಶರ್ಮಾ 53; ಹೆದರ್ ಗ್ರಹಾಮ್ 8ಕ್ಕೆ 4, ಆಷ್ಲೇ ಗಾರ್ಡ್ನರ್ 20ಕ್ಕೆ 2).
Indw Vs Ausw Dominant Australia Crush India By 54 Runs In 5th And Final T20i Of The Series.
02-05-25 10:00 pm
Bangalore Correspondent
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
Jan Dhan Scheme: ಜನಧನ್ ಖಾತೆ ಬಗ್ಗೆ ಜನರ ನಿರಾಸಕ್...
01-05-25 01:48 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 09:26 pm
Mangalore Correspondent
B Y Vijayendra, Suhas Shetty Murder, Mangalor...
02-05-25 06:44 pm
Brijesh Chowta, NIA, Suhas Shetty Murder: ಸುಹ...
02-05-25 06:31 pm
Mangalore Suhas Shetty Murder, ADGP Hitendra:...
02-05-25 03:10 pm
Udupi crime, Attempt, Suhas Shetty Murder: ಉಡ...
02-05-25 12:44 pm
02-05-25 12:00 pm
Mangalore Correspondent
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm