Zimbabwe Vs India 3rd Odi Live Cricket Score Toss Latest Update Playing11 From Harare Sports Club Harare.
">ಬ್ರೇಕಿಂಗ್ ನ್ಯೂಸ್
22-08-22 02:16 pm Source: Vijayakarnataka ಕ್ರೀಡೆ
ಹರಾರೆ: ಆತಿಥೇಯ ಜಿಂಬಾಬ್ವೆ ಎದುರು ಏಕದಿನ ಕ್ರಿಕೆಟ್ ಸರಣಿಯನ್ನು ವೈಟ್ವಾಶ್ ಮಾಡುವ ಗುರಿ ಹೊಂದಿರುವ ಟೀಮ್ ಇಂಡಿಯಾ, ಇಲ್ಲಿನ ಹರಾರೆ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ಟೀಮ್ ಇಂಡಿಯಾ, ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ರಣತಂತ್ರ ಬದಲಾಯಿಸಿದೆ. ಮೊದಲು ಬ್ಯಾಟ್ ಮಾಡಿ ಬೃಹತ್ ಮೊತ್ತ ಪೇರಿಸುವ ಲೆಕ್ಕಾಚಾರ ಭಾರತ ತಂಡದ ನಾಯಕ ಕೆ.ಎಲ್ ರಾಹುಲ್ ಅವರದ್ದು. ಇನ್ನು ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸಂಪೂರ್ಣ 50 ಓವರ್ಗಳ ಬ್ಯಾಟಿಂಗ್ ಸಿಕ್ಕಿಲ್ಲ. ಏಕೆಂದರೆ ಎರಡೂ ಪಂದ್ಯಗಳಲ್ಲಿ ಜಿಂಬಾಬ್ವೆ ಮೊದಲು ಬ್ಯಾಟ್ ಮಾಡಿ 200ರ ಒಳಗೆ ಆಲ್ಔಟ್ ಆಗಿತ್ತು.
ನಿರೀಕ್ಷೆಯಂತೆ ಭಾರತ ತಂಡ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತಂದಿದೆ. ಪ್ರಸಿಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ವಿಶ್ರಾಂತಿ ಪಡೆದಿದ್ದು, ಅವರ ಜಾಗದಲ್ಲಿ ದೀಪಕ್ ಚಹರ್ ಮತ್ತು ಅವೇಶ್ ಖಾನ್ ಕಣಕ್ಕಿಳಿದಿದ್ದಾರೆ.
ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ವಿವರ
ಟೀಮ್ ಇಂಡಿಯಾ XI: ಶಿಖರ್ ಧವನ್, ಕೆ.ಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ದೀಪಕ್ ಚಹರ್, ಕುಲ್ದೀ ಯಾದವ್, ಅವೇಶ್ ಖಾನ್.
ಜಿಂಬಾಬ್ವೆ XI: ತಕುಡ್ವಾನ್ಶೆ ಕಾಯ್ತಾನೊ, ಇನೋಸೆಂಟ್ ಕಾಯ, ಟೋನಿ ಮುನ್ಯೊಂಗ, ವೆಸ್ಲೀ ಮೆಢೆವರ್, ಸಿಕಂದರ್ ರಾಜಾ, ರೇಗಿಸ್ ಚಕಾಬ್ವ (ವಿಕೆಟ್ಕೀಪರ್/ ಕ್ಯಾಪ್ಟನ್), ಸಿಕಂದರ್ ರಾಜಾ, ಶೇನ್ ವಿಲಿಯಮ್ಸ್, ರಯಾನ್ ಬರ್ಲ್, ಲೂಕ್ ಜಾಂಗ್ವೀ, ಬ್ರಾಡ್ ಈವನ್ಸ್, ವಿಕ್ಟರ್ ಯಾವುಚಿ, ರಿಚರ್ಡ್ ಗರಾವ.
ತಂಡಗಳ ವಿವರ
ಭಾರತ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.
ಜಿಂಬಾಬ್ವೆ: ರೇಗಿಸ್ ಚಕಾಬ್ವ (ನಾಯಕ), ತನಕ ಚಿವಾಂಗ, ಬ್ರಾಡ್ಲೀ ಈವನ್ಸ್, ಲೂಕ್ ಜಾಂಗ್ವೀ, ರಯಾನ್ ಬರ್ಲ್, ಇನೋಸೆಂಟ್ ಕಾಯ, ಕಾಯ್ತಾನೊ ತಕುಡ್ವಾನ್ಷೆ, ಕ್ಲೈವ್ ಮಡಾಂಡೆ, ವೆಸ್ಲೀ ಮೆಢೆವರ್, ತಡಿವನಾಶೆ ಮರುಮಾನಿ, ಜಾನ್ ಮಸಾರ, ಟೋನಿ ಮುನ್ಯೋಂಗ, ರಿಚರ್ಡ್ ಗರಾವ, ವಿಕ್ಟರ್ ಯಾವುಚಿ, ಸಿಕಂದರ್ ರಾಜಾ, ಮಿಲ್ಟನ್ ಶುಂಬಾ, ಡೊನಾಲ್ಡ್ ತಿರಿಪಾನೊ, ಶೇನ್ ವಿಲಿಯಮ್ಸ್.
Zimbabwe Vs India 3rd Odi Live Cricket Score Toss Latest Update Playing11 From Harare Sports Club Harare.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm