ಬ್ರೇಕಿಂಗ್ ನ್ಯೂಸ್
07-04-26 10:48 pm HK News Staffer ಸಿನಿಮಾ
ಚೆನ್ನೈ, ಏ 07: ನಟಿ ತ್ರಿಷಾ ಕೃಷ್ಣನ್ ಅವರ ಬಗ್ಗೆ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿರುವ ವದಂತಿಗಳಿಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾ ಬಿಟ್ಟಿದ್ದಾರೆ, ಮದುವೆಯಾಗಿದ್ದಾರೆ, ರಾಜಕೀಯಕ್ಕೆ ಬರುತ್ತಿದ್ದಾರೆ ಎಂಬ ಸುದ್ದಿಗಳ ನಡುವೆ ತ್ರಿಷಾ ತಮ್ಮದೇ ಶೈಲಿಯಲ್ಲಿ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ವಿಜಯ್ ಅವರೊಂದಿಗೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಬಳಿಕ ತ್ರಿಷಾ ಹೆಸರು ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ವಿಜಯ್ ಅವರ ವೈಯಕ್ತಿಕ ಜೀವನದ ವಿಚಾರಗಳ ಜೊತೆಗೆ ತ್ರಿಷಾ ಹೆಸರು ಸೇರಿಕೊಂಡ ಹಲವು ಊಹಾಪೋಹಗಳು ಹರಿದಾಡಿದವು.
ಈ ಎಲ್ಲಾ ಸುದ್ದಿಗಳಿಗೆ ಪ್ರತಿಕ್ರಿಯಿಸಿದ ತ್ರಿಷಾ, ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ವ್ಯಂಗ್ಯಭರಿತವಾಗಿ ಬರೆಯುತ್ತಾ, “ನಾನು ಸಿನಿಮಾ ರಂಗವನ್ನೇ ಬಿಟ್ಟಿದ್ದೇನೆ, ಶ್ರೀಮಂತ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದೇನೆ, ನಾಲ್ಕು ಮಕ್ಕಳಿಗೆ ತಾಯಿಯಾಗಿದ್ದೇನೆ... ಇನ್ನೇನಾದರೂ ಸೇರಿಸಬೇಕೇ?” ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ಎಲ್ಲ ವದಂತಿಗಳು ಕಲ್ಪಿತವೆಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಸದ್ಯ ತ್ರಿಷಾ ತಮ್ಮ ಸಿನಿ ಜೀವನದಲ್ಲಿ ಬ್ಯುಸಿಯಾಗಿದ್ದು, ಆಪ್ತರೊಂದಿಗೆ ಸಮಯ ಕಳೆಯುತ್ತಾ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ ನಿರಂತರವಾಗಿ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಬೇಸತ್ತು ಈ ಬಾರಿ ನೇರವಾಗಿ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ.
ತ್ರಿಷಾ ಈ ಒಂದು ಪೋಸ್ಟ್ ಮೂಲಕ ಎಲ್ಲಾ ಗಾಸಿಪ್‌ಗಳಿಗೆ ತಕ್ಕ ಉತ್ತರ ನೀಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ವದಂತಿಗಳನ್ನು ಹರಡುವವರ ವಿರುದ್ಧವೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
02-09-26 08:31 pm
HK News Staffer
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
ವಿದೇಶದಲ್ಲಿ ವಿವಾಹವಾಗಬೇಡಿ, ಚಿನ್ನ ಖರೀದಿಸಬೇಡಿ ; ಸ...
01-09-26 12:19 pm
ನೇಪಾಳ ದುರಂತ ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇ...
31-08-26 01:28 pm
02-09-26 10:51 pm
HK News Desk
UT Khader, Mangalore: ಸಚಿವರ ಹೆಸರಲ್ಲಿ ಕಮಿಷನ್...
02-09-26 10:30 pm
ಗಂಗೊಳ್ಳಿಯಲ್ಲಿ ಮತ್ತೆ ದೋಣಿ ಅವಘಡ ; 6 ಮೀನುಗಾರರ ರಕ...
02-09-26 08:44 pm
ಕೆಆರ್ ಐಡಿಎಲ್ ಸಂಸ್ಥೆಗೆ ಯಾಕೆ ಗುತ್ತಿಗೆ ಕೊಡುತ್ತೀರ...
02-09-26 08:29 pm
ಆರೋಗ್ಯದ ವಿಚಾರದಲ್ಲಿ ರಾಜಿ ಇಲ್ಲ ; ಆಹಾರ ಸುರಕ್ಷತೆ...
02-09-26 07:09 pm
02-09-26 07:18 pm
HK News Staffer
ಓವರ್ಟೇಕ್ ವಿಚಾರದಲ್ಲಿ ಕಿರಿಕ್; ಕಾಲೇಜು ವಿದ್ಯಾರ್...
02-09-26 07:12 pm
ಕೇರಳಂ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನದ ಆಮಿಷ ; ತೆ...
02-09-26 10:37 am
ಸಿಬಿಐ ಅಧಿಕಾರಿ ಸೋಗಿನಲ್ಲಿ ದೇಶಾದ್ಯಂತ ವಂಚನಾ ಜಾಲ ;...
01-09-26 07:30 pm
ಧಾರವಾಡ ; ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡ...
01-09-26 02:58 pm