ಫೇಕ್ ಜನೌಷಧಿ ಕೇಂದ್ರಗಳ ತಪಾಸಣೆ ಸಮರ್ಥಿಸಿದ ಸಚಿವ ಖಾದರ್ ; ಮಿನರಲ್ ವಾಟರ್ ಫ್ಯಾಕ್ಟರಿಗಳಲ್ಲಿ ಲೋಪ ಕಂಡುಬಂದರೆ ಬಿಡೋದಿಲ್ಲ.. ಸಚಿವರ ವಾರ್ನಿಂಗ್

23-11-26 05:15 pm       HK News Staffer   ಕರಾವಳಿ

ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಅನೇಕ ಕಡೆ ಓಪನ್ ಮಾಡ್ತೀರಿ, ರಾಷ್ಟ್ರ ಮಟ್ಟದಲ್ಲಿ ಟೆಂಡರ್ ಕರೆಯುತ್ತೀರಿ.. ಆದರೆ ಅನೇಕ ಫೇಕ್ ಜನೌಷಧಿ ಕೇಂದ್ರಗಳಿವೆ ಎಂಬ ಮಾಹಿತಿ ಇದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು. ಜನೌಷಧಿಯನ್ನು ಸಿಸ್ಟಮ್ಯಾಟಿಕ್ ಆಗಿ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಕಾನೂನು ಮಾಡ್ಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ‌

ಮಂಗಳೂರು, ನ.23: ಜನೌಷಧಿ ಕೇಂದ್ರಗಳನ್ನು ರಾಜ್ಯದಲ್ಲಿ ಅನೇಕ ಕಡೆ ಓಪನ್ ಮಾಡ್ತೀರಿ, ರಾಷ್ಟ್ರ ಮಟ್ಟದಲ್ಲಿ ಟೆಂಡರ್ ಕರೆಯುತ್ತೀರಿ.. ಆದರೆ ಅನೇಕ ಫೇಕ್ ಜನೌಷಧಿ ಕೇಂದ್ರಗಳಿವೆ ಎಂಬ ಮಾಹಿತಿ ಇದೆ. ಇದರಿಂದ ಜನರಿಗೆ ಯಾವುದೇ ತೊಂದರೆ ಆಗಬಾರದು. ಜನೌಷಧಿಯನ್ನು ಸಿಸ್ಟಮ್ಯಾಟಿಕ್ ಆಗಿ ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಕಾನೂನು ಮಾಡ್ಬೇಕು ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. ‌

ಜನೌಷಧಿ ಕೇಂದ್ರಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವ ವಿಚಾರದಲ್ಲಿ ಖಾದರ್ ಸಮರ್ಥನೆ ಮಾಡಿಕೊಂಡು ಸ್ಪಷ್ಟನೆ ನೀಡಿದ್ದಾರೆ. ‌ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಮಿನರಲ್ ವಾಟರ್ ಕಂಪೆನಿಗಳ ಮೇಲೂ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 112 ನೀರಿನ ಫ್ಯಾಕ್ಟರಿಯನ್ನು ತಪಾಸಣೆ ನಡೆಸುತ್ತೇವೆ. ನೀರಿನ ಫ್ಯಾಕ್ಟರಿಗಳ ಗುಣಮಟ್ಟ ಮತ್ತು ಕಾರ್ಯ ನಿರ್ವಹಣೆ ಪರಿಶೀಲನೆ ಮಾಡಿದ್ದೇವೆ. ಜನರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅದರಲ್ಲಿ 60 ಸ್ಯಾಂಪಲ್ ತಪಾಸಣೆ ಕಳಿಸಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ‌

ಬಿಸ್ಲೇರಿ ಬ್ರಾಂಡ್ ನೀರಿನ ಫ್ಯಾಕ್ಟರಿ ಮೇಲೆ ದೆಹಲಿಯಲ್ಲಿ ದಾಳಿ ಆಗಿದೆ. ರಾಜ್ಯದಲ್ಲಿ ಅದರ ಸ್ಥಿತಿಗತಿ ಏನು ಅಂತ ನಮ್ಮ ಅಧಿಕಾರಿಗಳ ಬಳಿ ಕೇಳುತ್ತೇನೆ. ರಾಜ್ಯದಲ್ಲಿ ಅನೈರ್ಮಲ್ಯ ಕಂಡುಬಂದರೆ ನಾವು ಬಿಡೋದಿಲ್ಲ. ಹೊರ ರಾಜ್ಯದಿಂದ ಬಂದ ನೀರನ್ನು ನಾವು ರಾಜ್ಯದಲ್ಲಿ ತಪಾಸಣೆಗೆ ಒಳಪಡಿಸುತ್ತೇವೆ ಎಂದು ಹೇಳಿದರು. ಮಿನರಲ್ ವಾಟರ್ ಬಳಕೆಯಿಂದ ಕ್ಯಾನ್ಸರ್ ಕಾರಕ ಎಂಬ ವದಂತಿ ಕುರಿತ ಪ್ರಶ್ನೆಗೆ ಖಾದರ್ ಉತ್ತರಿಸಿದರು.