ಬ್ರೇಕಿಂಗ್ ನ್ಯೂಸ್
23-11-26 01:13 pm HK News Staffer ಕರಾವಳಿ
ಮಂಗಳೂರು, ನ.23: ಸಿಎಂ ಡಿಕೆ ಶಿವಕುಮಾರ್ ಅತ್ತ ಜಪಾನ್ ಪ್ರವಾಸ ಹೊರಟಿದ್ದರೆ, ಇತ್ತ ರಾಜ್ಯದ ದಿಗ್ಗಜ ಕಾಂಗ್ರೆಸ್ ನಾಯಕರ ರಾಜಕೀಯ ಚಟುವಟಿಕೆ ಬಿರುಸಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳೂರು ಪ್ರವಾಸದಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರನ್ನು ದಿಢೀರ್ ಎನ್ನುವಂತೆ ಸಚಿವ ಸತೀಶ್ ಜಾರಕಿಹೊಳಿ ಹೆಲಿಕಾಪ್ಟರ್ ನಲ್ಲಿ ಹಾರಿ ಬಂದು ಮಂಗಳೂರು ಏರ್ಪೇರ್ಟ್ ಒಳಗಡೆ ಗುಪ್ತವಾಗಿ ಚರ್ಚಿಸಿದ್ದಾರೆ.
ಭಾನುವಾರ ಸಂಜೆ ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ತನ್ನ ಖಾಸಗಿ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅಲ್ಲಿಗೇ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರನ್ನು ಕರೆಸಿಕೊಂಡಿದ್ದಾರೆ. ಅಲ್ಲದೆ, ಏರ್ಪೋರ್ಟ್ ಒಳಗಡೆಯೇ ಚೇಂಬರಿನಲ್ಲಿ ಇಬ್ಬರು ನಾಯಕರು 45 ನಿಮಿಷ ಕಾಲ ಸೀಕ್ರೆಟ್ ಮೀಟಿಂಗ್ ಮಾಡಿದ್ದಾರೆ.
ಇಬ್ಬರು ಮೀಟಿಂಗ್ ಮಾಡಿಕೊಳ್ಳಬೇಕಿದ್ದರೆ ಬೆಂಗಳೂರಿನಲ್ಲಿ ಕುಳಿತು ಮಾತುಕತೆ ಮಾಡಿಕೊಳ್ಳಬಹುದಿತ್ತು. ಆದರೆ ಅಷ್ಟು ಅರ್ಜಂಟಾಗಿ ಹೆಲಿಕಾಪ್ಟರ್ ನಲ್ಲಿ ಬಂದು ಮಂಗಳೂರಿನಲ್ಲಿ ಸೀಕ್ರೆಟ್ ಮಾಡಿಕೊಳ್ಳುವ ದರ್ದು ಏನಿತ್ತು ಅನ್ನುವುದು ಕುತೂಹಲದ ಪ್ರಶ್ನೆ. ಮುಖ್ಯಮಂತ್ರಿ ಅಥವಾ ಪಕ್ಷದ ಉನ್ನತ ನಾಯಕರು ವಿದೇಶ ಪ್ರಯಾಣ ಹೋಗಿದ್ದರೆ, ಎರಡನೇ ಹಂತದ ನಾಯಕರು ಸೀಕ್ರೆಟ್ ಮಾಡಿಕೊಳ್ಳುವುದು, ಇನ್ನೇನೋ ರಾಜಕೀಯ ಚಟುವಟಿಕೆ ಬಿರುಸುಗೊಳಿಸುವುದು ಹಿಂದೆನೂ ನಡೆದಿತ್ತು. ಇದು ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಅವರು ಹೊರಗಡೆ ಪ್ರವಾಸ ಹೋದ ಸಂದರ್ಭದಲ್ಲಿ ಡಿಕೆಶಿ ಬಣದ ನಾಯಕರು ಕುಳಿತು ಚರ್ಚಿಸುತ್ತಿದ್ದರು. ಆದರೆ ಈಗ ಡಿಕೆಶಿ ಅವರೇ ಮುಖ್ಯಮಂತ್ರಿ ಗಾದಿಯಲ್ಲಿದ್ದಾರೆ, ಅವರು ವಿದೇಶಕ್ಕೆ ಹಾರಿದ ಬೆನ್ನಲ್ಲೇ ಇತ್ತ ಪ್ರಭಾವಿ ನಾಯಕರಿಬ್ಬರು ಕುಳಿತು ಮಾತುಕತೆ ನಡೆಸಿದ್ದು ಸಾಮಾನ್ಯ ಎನ್ನುವ ಹಾಗಿಲ್ಲ.
ಬಿಕೆ ಹರಿಪ್ರಸಾದ್ ಮಂಗಳೂರಿಗೆ ಬಂದು ಸಂಜೆಯ ವೇಳೆಗೆ ರಸ್ತೆ ಮಾರ್ಗವಾಗಿ ಮಡಿಕೇರಿಗೆ ತೆರಳುವವರಿದ್ದರು. ಆದರೆ ಅದೇ ಹೊತ್ತಿಗೆ ಸಚಿವ ಜಾರಕಿಹೊಳಿ ಮಂಗಳೂರು ಏರ್ಪೋರ್ಟ್ ಬಂದಿದ್ದು, ಅಲ್ಲಿಗೇ ಕೆಪಿಸಿಸಿ ಅಧ್ಯಕ್ಷರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು ರಾಜಕೀಯ ಚಟುವಟಿಕೆ ವಿಚಾರದಲ್ಲಿ ಕುತೂಹಲ ಏಳುವಂತೆ ಮಾಡಿದೆ. ಇತ್ತೀಚೆಗೆ, ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು, ಬಿಕೆ ಹರಿಪ್ರಸಾದ್ ಅವರನ್ನು ಸಚಿವ ಸ್ಥಾನಕ್ಕೇರಿಸುವುದು ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ಈ ರೀತಿಯ ಬದಲಾವಣೆಯ ಸಮೀಕರಣಕ್ಕೆ ಸಿಎಂ ಡಿಕೆಶಿ ಕೂಡ ಒಪ್ಪಿಗೆ ನೀಡಿದ್ದರು ಎನ್ನಲಾಗಿತ್ತು.
ಡಿಸೆಂಬರ್ ವೇಳೆಗೆ ಸಚಿವ ಸಂಪುಟ ಪುನಾರಚನೆ ನಡೆದರೆ, ಅದರಲ್ಲಿ ಕೆಲವೊಬ್ಬರ ಬದಲಾವಣೆ ಜೊತೆಗೆ ಈ ರೀತಿಯ ಅದಲು ಬದಲಿನ ಆಟ ಇದೆಯೆಂಬ ಗುಸು ಗುಸು ರಾಜಕೀಯ ಪಡಸಾಲೆಯಲ್ಲಿ ಹರಿದಾಡಿತ್ತು. ಹಾಗಿದ್ದರೂ, ಅಷ್ಟು ಮಾತ್ರಕ್ಕೆ ಈ ಇಬ್ಬರು ನಾಯಕರು ಮಂಗಳೂರಿಗೆ ಬಂದು ಪಿಸುಗುಟ್ಟುವ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಹಾಗಿರಬೇಕಾದರೆ ಇವರು ಅರ್ಜಂಟಾಗಿ ಸೀಕ್ರೆಟ್ ಮೀಟಿಂಗ್ ಮಾಡಿದ್ದೇನು ಅನ್ನುವ ಪ್ರಶ್ನೆಗಳು ರಾಜಕೀಯದಲ್ಲಿ ನಾನಾ ವದಂತಿಗಳಿಗೆ ಕಾರಣವಾಗಿದೆ.
ಮತ್ತೊಂದು ಕಡೆ ಸ್ಟಿಂಗ್ ಪ್ರಕರಣದ ಬಳಿಕ ಹಲ್ಲು ಕಿತ್ತ ಹಾವಿನಂತಾಗಿರುವ ಸಿದ್ದರಾಮಯ್ಯ ಸದ್ದಿಲ್ಲದೆ ಹಲ್ಲು ಕಡಿಯುತ್ತಿದ್ದಾರೆ ಎನ್ನುವ ಮಾತುಗಳಿವೆ. ಇದರ ಫಲವೋ ಏನೋ, ಹಳೆ ಆಪ್ತ ಸತೀಶ್ ಜಾರಕಿಹೊಳಿ ನೇರವಾಗಿ ಮಂಗಳೂರಿಗೆ ಹಾರಿ ಬಂದು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ. ಇವರ ಮೀಟಿಂಗ್ ಅಜೆಂಡಾ ಏನಿತ್ತು ಅನ್ನೋದು ಗೊತ್ತಿಲ್ಲ. ಆದರೆ ಅಲ್ಲೇನೋ ಸೀಕ್ರೆಟ್ ಸಮೀಕರಣ ನಡೆದಿದೆ ಅನ್ನೋದಕ್ಕೆ ಸಾಕ್ಷ್ಯ ಬೇಕಿಲ್ಲ. ಸಿದ್ದರಾಮಯ್ಯ ರಿವರ್ಸ್ ಸ್ವಿಂಗ್ ಏಸೆಯುತ್ತಿದ್ದಾರೆಯೇ ಅನ್ನೋ ಪ್ರಶ್ನೆಗಳಿಗೆ ಸದ್ಯಕ್ಕಂತೂ ಉತ್ತರ ಸಿಗಲ್ಲ.
23-11-26 12:02 pm
HK News Staffer
ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮು...
20-11-26 05:15 pm
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ; ಕಾರು - ಬೊಲೆರೋ...
18-11-26 11:03 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
23-11-26 01:13 pm
HK News Staffer
ಬಂಟ್ವಾಳ ; ರಸ್ತೆ ಬದಿ ನಿಲ್ಲಿಸಿದ್ದ ಕಾರು, ಕ್ರೇನ್...
22-11-26 04:17 pm
ಮಂಗಳೂರು ಏರ್ಪೋರ್ಟ್ ನಲ್ಲಿ ಪಾರ್ಕಿಂಗ್ ಶುಲ್ಕ ದುಬಾರ...
21-11-26 10:59 pm
‘ಮಹಾತ್ಮೆ ಕುದ್ಮುಲ್’ ; ಸೂರಿಲ್ಲದ, ತುಂಡು ಭೂಮಿ ಇಲ್...
21-11-26 10:29 pm
ಅಪಹರಣ ಆಗಿಲ್ಲ, ವಿದ್ಯಾರ್ಥಿನಿ ತಪ್ಪುದಾರಿ ತುಳಿದಿದ್...
20-11-26 09:53 pm
23-11-26 11:59 am
HK News Staffer
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm
ಬಂಟ್ವಾಳ ; ಶಾಲೆಯಿಂದ ಮನೆಗೆ ತೆರಳುತ್ತಿದ್ದ ವಿದ್ಯಾರ...
19-11-26 09:20 pm