ಬ್ರೇಕಿಂಗ್ ನ್ಯೂಸ್
25-09-26 03:11 pm HK News Staffer ಕರ್ನಾಟಕ
ಬೆಂಗಳೂರು, ಸೆ.25: ಒಂದೆಡೆ ರಾಜ್ಯ ಸರ್ಕಾರದ ಆರ್ಥಿಕ ಸಂಕಷ್ಟ ಚರ್ಚೆಯಾಗುತ್ತಿದ್ದರೆ, ಇದೇ ವೇಳೆ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೋಟ್ಯಂತರ ನಿಧಿಯ ಮೇಲೆ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ವಿಟಿಯು ಖಜಾನೆಯಲ್ಲಿರುವ 610 ಕೋಟಿ ರೂ. ಪೈಕಿ 250 ಕೋಟಿ ರೂ. ಮೊತ್ತವನ್ನು ಬೆಂಗಳೂರಿನ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ಅಭಿವೃದ್ಧಿಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು ಚರ್ಚೆಗೆ ಕಾರಣವಾಗಿದೆ.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿರುವ ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆಯಾದ ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಟಿಯುನಿಂದ 250 ಕೋಟಿ ರೂ. ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. ಆದರೆ, ಹಲವು ವರ್ಷಗಳಿಂದ ವಿಟಿಯುಗೆ ಸರ್ಕಾರದಿಂದ ಸಮರ್ಪಕ ಅನುದಾನ ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ತನ್ನದೇ ಹಣವನ್ನು ಸರ್ಕಾರ ಕೇಳುತ್ತಿರುವುದಕ್ಕೆ ವಿಶ್ವವಿದ್ಯಾಲಯದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಹೀಗಾಗಿ, ವಿಟಿಯು ಆಡಳಿತ ಮಂಡಳಿ ಸರ್ಕಾರದ ಸರ್ಕಾರದ ಈ ಬೇಡಿಕೆಯನ್ನು ನಿರಾಕರಿಸಿದೆ ಎನ್ನಲಾಗಿದೆ.
ವಿಟಿಯು ಖಜಾನೆಯಲ್ಲಿರುವ ಹಣದ ಪೈಕಿ ಸುಮಾರು 500 ಕೋಟಿ ಮೊತ್ತವನ್ನು ಬ್ಯಾಂಕಿನಲ್ಲಿ ಫಿಕ್ಸೆಡ್ ಡಿಪಾಸಿಟ್ ಇಡಲು ವಿಟಿಯು ಕುಲಪತಿ ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಸರ್ಕಾರದ ಅನುದಾನ ಇಲ್ಲದಿದ್ದರೂ, ಮುಂದಿನ 10 ವರ್ಷಗಳ ಕಾಲ ಇದರಿಂದ ಬರುವ ಬಡ್ಡಿಯ ಹಣದಲ್ಲೇ ವಿಶ್ವವಿದ್ಯಾಲಯದ ಸಿಬ್ಬಂದಿಗೆ ವೇತನ ನೀಡಿ ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂಬುದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಅವರ ಯೋಜನೆಯಾಗಿತ್ತು.
ಯಾಕಂದ್ರೆ, ಈ ಮೊತ್ತವು ವಿಟಿಯು ಖಜಾನೆಗೆ ಆಕಸ್ಮಿಕವಾಗಿ ಬಂದಿರುವ ಹಣವಲ್ಲ. 2012-13ರಲ್ಲಿ ಆದಾಯ ತೆರಿಗೆ ಇಲಾಖೆಯು ವಿವಿಯಲ್ಲಿ ತೆರಿಗೆ ವಿನಾಯಿತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ವಿಶ್ವವಿದ್ಯಾಲಯದ ಕಾರ್ಪಸ್ ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆನಂತರ, ಸುದೀರ್ಘ ಕಾನೂನು ಹೋರಾಟ ನಡೆದು ಶಿಕ್ಷಣ ಸಂಸ್ಥೆಗಳಿಗೆ ಸಿಗುವ ತೆರಿಗೆ ವಿನಾಯಿತಿಯ (12-A ನೋಂದಣಿ) ಅಗತ್ಯ ದಾಖಲೆಗಳನ್ನು ಒದಗಿಸಿ, ವಿಟಿಯು ಆಡಳಿತ ಮಂಡಳಿಯು ಹಣವನ್ನು ಮರಳಿ ಪಡೆದಿತ್ತು. ಹೋರಾಟದ ಫಲವಾಗಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಮುಟ್ಟುಗೋಲು ಹಾಕಿಕೊಂಡಿದ್ದ ಅಸಲು ಮತ್ತು ಬಡ್ಡಿ ಸೇರಿ ಒಟ್ಟು 610 ಕೋಟಿ ರೂ. ಮೊತ್ತವನ್ನು ವಿಶ್ವವಿದ್ಯಾಲಯಕ್ಕೆ ಮರಳಿಸಿತ್ತು.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am