ಬ್ರೇಕಿಂಗ್ ನ್ಯೂಸ್
24-11-26 06:46 pm HK News Staffer ಕರಾವಳಿ
ಮಂಗಳೂರು, ನ.24: ಆರೋಗ್ಯ ಸಚಿವ ಯು.ಟಿ ಖಾದರ್ ಎರಡು ವರ್ಷಗಳ ಹಿಂದೆ ಆಗಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದನ್ನೇ ಮತ್ತೆ ಸುದ್ದಿಗೋಷ್ಟಿಯಲ್ಲಿ ಹೇಳುವ ಮೂಲಕ ಸರ್ಕಾರದ ಸಚಿವರ ಮಾತಿಗೂ ಕೃತಿಗೂ ತಾಳೆ ಇಲ್ಲ ಎನ್ನುವುದನ್ನು ತಾವಾಗಿಯೇ ಸಾಬೀತು ಪಡಿಸಿದ್ದಾರೆ. ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಖಾದರ್, ಎರಡು ಮಹತ್ವದ ಘೋಷಣೆಗಳನ್ನು ಮಾಡಿದ್ದು ಈ ಎರಡು ವಿಷಯಗಳನ್ನೂ ಕಳೆದ ಎರಡು ವರ್ಷಗಳಲ್ಲಿ ದಿನೇಶ್ ಗುಂಡೂರಾವ್ ಕೂಡ ಹಲವು ಬಾರಿ ಹೇಳುತ್ತ ಬಂದಿದ್ದರು ಅನ್ನುವುದನ್ನು ಗೂಗಲ್ ತೋರಿಸಿದೆ.
ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಎಲ್ಲ ಜಿಲ್ಲಾಸ್ಪತ್ರೆಗಳಲ್ಲೇ ಕಿಮೋಥೆರಪಿ ಸೌಲಭ್ಯ ಒದಗಿಸಲು ಡೇ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದು ಯುಟಿ ಖಾದರ್ ಹೇಳಿದ್ದಾರೆ. ಈ ಮಾತನ್ನು 2024ರಲ್ಲಿ ಆಗಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು ಎಂಬುದನ್ನು ವಿಜಯ ಕರ್ನಾಟಕ ಆನ್ಲೈನ್ ಪತ್ರಿಕೆ ತೋರಿಸಿದೆ. ಆಮೂಲಕ ಎರಡು ವರ್ಷಗಳ ಹಿಂದೆ ಆರೋಗ್ಯ ಇಲಾಖೆಯಿಂದ ಹೇಳಲಾದ ಈ ಡೇ ಕೇರ್ ಸೆಂಟರ್ ಇನ್ನೂ ಭರವಸೆ ಹಂತದಲ್ಲೇ ಇದೆಯೆಂದು ಈಗಿನ ಆರೋಗ್ಯ ಸಚಿವರು ಹೇಳಿಕೊಂಡಂತಾಗಿದೆ.
ಇದೇ ವೇಳೆ, ಹೃದಯಾಘಾತ ತಡೆಗಾಗಿ ರಾಜ್ಯದ 31 ಜಿಲ್ಲೆಗಳಿಗೂ ಹೃದಯ ಜ್ಯೋತಿ ಯೋಜನೆ ವಿಸ್ತರಣೆ ಮಾಡಲಾಗುವುದು ಎಂದು ಯುಟಿ ಖಾದರ್ ಹೇಳಿದ್ದಾರೆ. ಈ ವಿಚಾರವನ್ನೂ 2025ರ ಫೆ.19ರಂದು ಆಗಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾಗಿ ವಿಜಯ ಕರ್ನಾಟಕ ಆನ್ಲೈನ್ ಪತ್ರಿಕೆ ಸಾಕ್ಷ್ಯ ಒದಗಿಸಿದೆ. ಪುನೀತ್ ರಾಜಕುಮಾರ್ ಹೆಸರಲ್ಲಿ ಆರಂಭಿಸಿದ್ದ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಆಗ ಹೇಳಿದ್ದರೂ, ಈಗಿನ ಆರೋಗ್ಯ ಸಚಿವರೂ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಆಮೂಲಕ ಮತ್ತೆರಡು ವರ್ಷ ಸಂದರೂ, ಆ ಯೋಜನೆ ಜಾರಿಗೆ ಬಂದಿಲ್ಲ ಅನ್ನುವುದನ್ನು ಸಚಿವರೇ ಹೇಳಿಕೊಂಡಿದ್ದಲ್ಲದೆ, ಇದು ಹೊಸ ಘೋಷಣೆಯೆಂದು ಹೇಳಿ ಜನತೆಯ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಸಿಂಗಲ್ ಯೂಸ್ ಡಯಲೈಜರ್ ಯಂತ್ರಗಳನ್ನು ಮರು ಬಳಕೆಗೆ ಅವಕಾಶ ನೀಡುವುದಿಲ್ಲ ಎಂದೂ ಸಚಿವ ಯುಟಿ ಖಾದರ್ ಇದೇ ವೇಳೆ ಹೇಳಿದ್ದಾರೆ. ಸಿಂಗಲ್ ಯೂಸ್ ಡಯಲೈಜರ್ ಯಂತ್ರಗಳನ್ನು ದೇಶಾದ್ಯಂತ ಮರು ಬಳಕೆ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಮರು ಬಳಕೆಯಿಂದ ಸೋಂಕಿನ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕೇಂದ್ರ ಆರೋಗ್ಯ ಇಲಾಖೆ ಆದೇಶ ಮಾಡಿತ್ತು. ಇದೇ ವಿಚಾರವನ್ನು ಯುಟಿ ಖಾದರ್, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮರು ಬಳಕೆಗೆ ಅವಕಾಶ ಇಲ್ಲವೆಂದು ಒತ್ತು ಕೊಟ್ಟು ಹೇಳಿದ್ದಾರೆ. ನಿಜಕ್ಕಾದರೆ ಯಾವುದೇ ಆಸ್ಪತ್ರೆಗಳಲ್ಲಿ ಇಂತಹ ಯಂತ್ರಗಳನ್ನು ಮರು ಬಳಕೆ ಮಾಡಲೇಬಾರದು ಎಂದು ಕೇಂದ್ರ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದೇ ವೇಳೆ, ಮಹಿಳೆಯರಲ್ಲಿ ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್ ಪತ್ತೆಗೆ ಜಿಲ್ಲೆಗೊಂದು ವಿಶೇಷ ಸ್ಕ್ರೀನಿಂಗ್ ಯಂತ್ರ ಒದಗಿಸಲಾಗುವುದು ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ. ಎಐ ತಂತ್ರಜ್ಞಾನ ಆಧರಿಸಿ ಈ ಯಂತ್ರ ಕಾರ್ಯ ನಿರ್ವಹಿಸಲಿದೆ ಎಂದು ಖಾದರ್ ಹೇಳಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಇಲಾಖೆ ಅತಿ ದೊಡ್ಡ ಮತ್ತು ಅತಿ ಹೆಚ್ಚು ವಿಸ್ತಾರವುಳ್ಳ ಇಲಾಖೆಯಾಗಿದ್ದು, ಆಗಿಂದಾಗ್ಗೆ ಹೊಸ ಯೋಜನೆಗಳನ್ನು ಸಚಿವರು ಘೋಷಣೆ ಮಾಡುತ್ತಾರೆ. ಆದರೆ ಇವು ಘೋಷಣೆ ಅಷ್ಟೇ, ಅನುಷ್ಠಾನಕ್ಕೆ ಬರುವುದಿಲ್ಲ ಎಂದು ತಾವಾಗಿಯೇ ಹೇಳುತ್ತಿರುವುದು ಹೊಸ ಬೆಳವಣಿಗೆ ಎನ್ನಬೇಕು.
23-11-26 09:23 pm
HK News Staffer
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮು...
20-11-26 05:15 pm
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
24-11-26 06:46 pm
HK News Staffer
ಕದ್ರಿ ಯುದ್ಧ ಸ್ಮಾರಕದ ಬಳಿಯ ಯುದ್ಧ ಟ್ಯಾಂಕ್ ಮೇಲೆ ಹ...
24-11-26 10:51 am
ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇ...
24-11-26 10:49 am
ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಜಾರಿಯಾಗದ ಹಿ...
24-11-26 09:45 am
ಮಂಗಳೂರು ಕಮಿಷನರೇಟ್ ; ರಾತ್ರಿ ವಹಿವಾಟು ನಿರ್ಬಂಧ ಸಡ...
23-11-26 09:25 pm
23-11-26 02:24 pm
HK News Staffer
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm