Mangalore Jail Jammer, Lawyers Protest, CM, Mangalore: ಜೈಲು ಜಾಮರ್ ಸಮಸ್ಯೆ ; ಸಂಪುಟ ಸಭೆಗೆ ಮುತ್ತಿಗೆ ಹಾಕುತ್ತೇವೆಂದಿದ್ದ ವಕೀಲರು ಪೊಲೀಸರ ವಶಕ್ಕೆ, ಕೋರ್ಟ್ ಆವರಣದಲ್ಲಿಯೇ ತಡೆ 

18-09-26 11:30 am       HK News Staffer   ಕರಾವಳಿ

ಜೈಲು ಜಾಮರ್ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಕೀಲರನ್ನು ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಮಂಗಳೂರು, ಸೆ.18: ಜೈಲು ಜಾಮರ್ ವಿಚಾರದಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯುವ ಸ್ಥಳಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದ ವಕೀಲರನ್ನು ಕೋರ್ಟ್ ಆವರಣದಲ್ಲಿಯೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‌

ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಭೆ ಸೇರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವುದಾಗಿ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದು ವಕೀಲರು ಅಲ್ಲಿಂದ ಹೊರಡುವ ಮೊದಲೇ ತಡೆ ಹಾಕಿದ್ದಾರೆ. ಹೀಗಾಗಿ ಸ್ಥಳದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ತಳ್ಳಾಟ, ಜಟಾಪಟಿ ನಡೆದಿದೆ.‌

ಮಂಗಳೂರು ಜೈಲ್ ಆಸುಪಾಸಿನಲ್ಲಿ ಕಿಮೀ ಉದ್ದಕ್ಕೆ ಮೊಬೈಲ್ ಜಾಮರ್ ಸಮಸ್ಯೆ ಎರಡು ವರ್ಷಗಳಿಂದ ಎದುರಾಗಿದ್ದು ಪ್ರತಿಭಟನೆ, ಹೈಕೋರ್ಟ್ ಹೋರಾಟದ ನಡುವೆಯೂ ಬಗೆಹರಿದಿಲ್ಲ. ಹೀಗಾಗಿ ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದರೆ ಸುಲಭದಲ್ಲಿ ಬಗೆಹರಿಯಬಹುದು ಎನ್ನುವ ನೆಲೆಯಲ್ಲಿ ಜಗದೀಶ್ ಶೇಣವ ನೇತೃತ್ವದಲ್ಲಿ ಪ್ರತಿಭಟನಾ ಜಾಥಾ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಕೋರ್ಟ್ ಆವರಣದಿಂದ ತೆರಳಿ ಸಚಿವ ಸಂಪುಟ ಸಭೆ ನಡೆಯುವ ಪಡೀಲ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ವಕೀಲರು ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ ಜಾಥಾ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. 

ಮುತ್ತಿಗೆ ಹಾಕಲು ಕೋರ್ಟ್ ಆವರಣದಿಂದ 300 ಮಂದಿ ವಕೀಲರ ತಂಡ ಹೊರಡುತ್ತೆ ಎಂದು ಜಗದೀಶ್ ಶೇಣವ ಹೇಳಿದ್ದಲ್ಲದೆ, ರಾಪಿಡ್ ಆಕ್ಷನ್ ಫೋರ್ಸ್ ಬರಲಿ ಅಥವಾ ಗೋಲಿಬಾರ್ ಆಗಲಿ. ನಮ್ಮ ಮುತ್ತಿಗೆ ಖಂಡಿತ ಎಂದು ಹೇಳಿದ್ದರಿಂದ ಸ್ಥಳದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿತ್ತು. ಭಿತ್ತಿಪತ್ರ ಹಿಡಿದು ನಿಂತ ವಕೀಲರನ್ನು ಅಲ್ಲಿಯೇ ವಶಕ್ಕೆ ಪಡೆದು ಬಸ್ಸಿಗೆ ತುಂಬಿಸಿ ಠಾಣೆಗೊಯ್ದರು.

Police detained a group of lawyers at the Mangaluru District Court premises on Thursday as they attempted to march towards the venue of the state Cabinet meeting, led by Chief Minister D.K. Shivakumar, demanding government action on the mobile jammer issue around Mangaluru prison.