SDPI Protest, CM DK Shivakumar, Mangalore: ರಹಿಮಾನ್ ಹತ್ಯೆ ಪ್ರಕರಣ ; ಮುಖ್ಯಮಂತ್ರಿ ಕಾರಿಗೆ ಕಪ್ಪು ಬಾವುಟ ಪ್ರದರ್ಶನ ಯತ್ನ, ಎಸ್ಡಿಪಿಐ ಕಾರ್ಯಕರ್ತರು ಪೊಲೀಸರ ವಶಕ್ಕೆ

18-09-26 10:35 am       HK News Staffer   ಕರಾವಳಿ

ಸಂಪುಟ ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಮತ್ತು ಸಚಿವರಿಗೆ ಎಸ್ಡಿಪಿಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ್ದಾರೆ. ಕಳೆದ ವರ್ಷ ಬಂಟ್ವಾಳದಲ್ಲಿ ಹತ್ಯೆಯಾಗಿದ್ದ ರಹಿಮಾನ್ ಕೊಳ್ತಮಜಲು ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲವೆಂದು ಕಪ್ಪು ಪತಾಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರು, ಸೆ.18: ಸಂಪುಟ ಸಭೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಮತ್ತು ಸಚಿವರಿಗೆ ಎಸ್ಡಿಪಿಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ್ದಾರೆ. ಕಳೆದ ವರ್ಷ ಬಂಟ್ವಾಳದಲ್ಲಿ ಹತ್ಯೆಯಾಗಿದ್ದ ರಹಿಮಾನ್ ಕೊಳ್ತಮಜಲು ಪ್ರಕರಣದಲ್ಲಿ ನ್ಯಾಯ ಸಿಕ್ಕಿಲ್ಲವೆಂದು ಕಪ್ಪು ಪತಾಕೆ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. 

ನಗರದ ಹಂಪನಕಟ್ಟೆಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ರಸ್ತೆಯಲ್ಲಿ ದಿಢೀರ್ ಕರಿಪತಾಕೆ ಹಿಡಿದು ನಡೆದುಬಂದಿದ್ದು ಮುಖ್ಯಮಂತ್ರಿ ಕಾರಿಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರ ಎನ್ನುವಂತೆ ರಹಿಮಾನ್ ಹತ್ಯೆಯಾಗಿತ್ತು.‌ ಆತನ ಮನೆಯಲ್ಲೇ ಕಡಿದು ಹತ್ಯೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಪ್ರಕರಣದ ಆರೋಪಿ ಭರತ್ ಕುಮ್ಡೇಲು ಎಂಬಾತನಿಗೆ ಕೋರ್ಟಿನಲ್ಲಿ ಜಾಮೀನು ಸಿಕ್ಕಿತ್ತು. 

ಅದೇ ಸಿಟ್ಟಿನಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾಮೀನು ಸಿಕ್ಕಿರುವುದು ಸರ್ಕಾರದ ವೈಫಲ್ಯ ಎಂದು ಎಸ್ ಡಿ ಪಿ ಐ ಆರೋಪ ಮಾಡಿದೆ.‌

SDPI activists attempted to stage a black-flag protest against Chief Minister D.K. Shivakumar and other ministers who arrived in Mangaluru for the state Cabinet meeting on Friday. The protesters reportedly held black flags and raised their opposition over the alleged lack of justice in the Rahiman Kolthamajalu murder case, in which Rahiman was killed in Bantwal last year