ಬ್ರೇಕಿಂಗ್ ನ್ಯೂಸ್
18-09-26 09:49 am HK News Staffer ಕರಾವಳಿ
ಮಂಗಳೂರು, ಸೆಪ್ಟೆಂಬರ್ 18: ಹಲವು ನಿರೀಕ್ಷೆಗಳನ್ನು ಹೊತ್ತು ರಾಜ್ಯ ಸಚಿವ ಸಂಪುಟದ ಐತಿಹಾಸಿಕ ಸಭೆಗೆ ಕಡಲನಗರಿ ಮಂಗಳೂರು ಸಜ್ಜಾಗಿದೆ. ಪಡೀಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ‘ಪ್ರಜಾಸೌಧ’ದ 2ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭಾಂಗಣ ಸೇರಿದಂತೆ ಇಡೀ ಸಂಕೀರ್ಣದಲ್ಲಿ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಸಚಿವ ಸಂಪುಟ ಸಭೆ ನಡೆಯಲಿರುವ ಸಭಾಂಗಣದ ಬೃಹತ್ ವೃತ್ತಾಕಾರದ ಮೇಜನ್ನು ನೈಸರ್ಗಿಕ ಗುಲಾಬಿ ಹಾಗೂ ಬಿಳಿ ಹೂವುಗಳಿಂದ ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರಿಗೆ ಅಗತ್ಯವಿರುವ ಮೈಕ್, ಫೋಲ್ಡರ್ ಮತ್ತು ದಾಖಲೆಗಳ ವ್ಯವಸ್ಥೆಗಳನ್ನು ಅಂತಿಮಗೊಳಿಸಲಾಗಿದೆ. ಸಭೆಯ ಹಿನ್ನೆಲೆಯಲ್ಲಿ ‘ಪ್ರಜಾಸೌಧ’ದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ.
ತಣ್ಣೀರುಬಾವಿಯಲ್ಲಿ ಸಚಿವರಿಗೆ ಕರಾವಳಿ ಆತಿಥ್ಯ: ತುಳುನಾಡಿನ ಖಾದ್ಯ ಸವಿದ ಗಣ್ಯರು
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಗುರುವಾರ ರಾತ್ರಿ ನಗರದ ಪ್ರಸಿದ್ಧ ತಣ್ಣೀರುಬಾವಿ ಕಡಲತೀರದಲ್ಲಿ ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ಸಮುದ್ರದ ತಂಪಾದ ಗಾಳಿ ಹಾಗೂ ಅಲೆಗಳ ಸದ್ದಿನ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಸಚಿವರು ಕರಾವಳಿಯ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು. ಇದೇ ಸಂದರ್ಭದಲ್ಲಿ ತುಳುನಾಡಿನ ಶ್ರೀಮಂತ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ವೀಕ್ಷಿಸಿದರು.
ತುಳುನಾಡಿನ ಇತಿಹಾಸ, ಕೃಷಿ, ದೈವಾರಾಧನೆ ಅನಾವರಣ
ತಣ್ಣೀರುಬಾವಿ ಬೀಚ್ ಆವರಣದಲ್ಲಿ ಸಚಿವರ ಸ್ವಾಗತಕ್ಕಾಗಿ ಕರಾವಳಿಯ ಪ್ರಾಚೀನ ಇತಿಹಾಸ, ಕೃಷಿ ಹಾಗೂ ದೈವಾರಾಧನೆಯ ಸಂಸ್ಕೃತಿಯನ್ನು ಬಿಂಬಿಸುವ ಅಪರೂಪದ ಪಾರಂಪರಿಕ ವಸ್ತುಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸಚಿವ ಯು.ಟಿ. ಖಾದರ್ ಅವರೊಂದಿಗೆ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಯೊಂದು ವಸ್ತುವನ್ನು ಕುತೂಹಲದಿಂದ ವೀಕ್ಷಿಸಿ ಅದರ ಹಿನ್ನೆಲೆ ಹಾಗೂ ಬಳಕೆಯ ಕುರಿತು ಮಾಹಿತಿ ಪಡೆದರು.
ದೈವಾರಾಧನೆ, ಯಕ್ಷಗಾನದ ಪರಿಕರಗಳತ್ತ ಸಿಎಂ ಗಮನ
ತುಳುನಾಡಿನ ದೈವಾರಾಧನೆಯಲ್ಲಿ ಬಳಸುವ ಪ್ರಾಚೀನ ಕಂಚಿನ ಮುಖವರ್ಣಿಕೆಗಳು, ಖಡ್ಗ ಹಾಗೂ ಗಂಟೆಗಳನ್ನು ಸಿಎಂ ವೀಕ್ಷಿಸಿದರು. ಯಕ್ಷಗಾನದ ಸಾಂಪ್ರದಾಯಿಕ ಮುಂಡಾಸು, ಕಿರೀಟ ಹಾಗೂ ಕರಾವಳಿಯ ವಿಶಿಷ್ಟ ಹುಲಿವೇಷದ (ಪಿಲಿನಲಿಕೆ) ಮುಖವಾಡಗಳನ್ನೂ ಆಸಕ್ತಿಯಿಂದ ಗಮನಿಸಿದರು.
ಕಹಳೆ ಊದಿದ ಸಿಎಂ: ಚಂಡೆ, ದುಡಿ ಬಾರಿಸಿ ಸಂಭ್ರಮ
ಪ್ರದರ್ಶನದಲ್ಲಿದ್ದ ಪ್ರಾಚೀನ ಹಿತ್ತಾಳೆಯ ‘ಕಹಳೆ’ಯನ್ನು ಕೈಗೆತ್ತಿಕೊಂಡ ಸಿಎಂ ಡಿ.ಕೆ. ಶಿವಕುಮಾರ್ ಅದನ್ನು ಊದಿದರು. ಬಳಿಕ ಯಕ್ಷಗಾನದ ಪ್ರಮುಖ ವಾದ್ಯವಾದ ‘ಚಂಡೆ’ ಹಾಗೂ ತುಳುನಾಡಿನ ಸಾಂಪ್ರದಾಯಿಕ ವಾದ್ಯ ‘ದುಡಿ’ಯನ್ನು ಸ್ವತಃ ಬಾರಿಸಿ ಸಂಭ್ರಮಿಸಿದರು.







ಹಳೆಯ ಕಾಲದ ಕೃಷಿ, ಗೃಹಬಳಕೆಯ ವಸ್ತುಗಳ ವೀಕ್ಷಣೆ
ಹಿಂದಿನ ಕಾಲದಲ್ಲಿ ಕರಾವಳಿಯ ಗದ್ದೆಗಳಿಗೆ ನೀರು ಹಾಯಿಸಲು ಬಳಸುತ್ತಿದ್ದ ಪ್ರಾಚೀನ ನೀರೆತ್ತುವ ಸಾಧನ, ಮರದ ಅಳತೆ ಪಾತ್ರೆಗಳಾದ ಸೇರು ಹಾಗೂ ಪಾವು, ಕೆತ್ತನೆಯುಳ್ಳ ಬೃಹತ್ ಮರದ ಹೆಬ್ಬಾಗಿಲು ಮತ್ತು ಹಳೆಯ ಗ್ರಾಮಫೋನ್ ರೆಕಾರ್ಡರ್ ಸೇರಿದಂತೆ ಹಲವು ವಸ್ತುಗಳನ್ನು ಸಿಎಂ ವೀಕ್ಷಿಸಿದರು. ಈ ವಸ್ತುಗಳ ಮೂಲಕ ಕರಾವಳಿಯ ಹಿಂದಿನ ತಲೆಮಾರಿನ ಜೀವನಶೈಲಿ ಹಾಗೂ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಡಲ ತೀರದಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್: ಸಂಗೀತದ ಸೊಬಗು
ತಣ್ಣೀರುಬಾವಿ ಕಡಲತೀರದಲ್ಲಿ ಕರಾವಳಿ ಶೈಲಿಯ ರಾಜಾತಿಥ್ಯಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಔತಣಕೂಟದ ಆವರಣದಲ್ಲಿ ಸಿತಾರ್, ಕೊಳಲು ಹಾಗೂ ತಬಲಾ ವಾದಕರ ತಂಡದಿಂದ ಲೈವ್ ಶಾಸ್ತ್ರೀಯ ಸಂಗೀತ ಮೊಳಗುತ್ತಿತ್ತು. ಕಡಲತೀರದ ಮರಳಿನಲ್ಲಿ ಅಳವಡಿಸಿದ್ದ ಕ್ಯಾಂಡಲ್‌ಲೈಟ್ ಟೇಬಲ್‌ಗಳಲ್ಲಿ ಗಣ್ಯರು ಕುಳಿತು ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು ಹಾಗೂ ಸಮುದ್ರಾಹಾರ ಸೇರಿದಂತೆ ವಿಶೇಷ ಭೋಜನ ಸವಿದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಲವು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
‘ಕ್ಯಾಬಿನೆಟ್ ಮೀಟಿಂಗ್ ದಿನ ಸಮಯದ ಅಭಾವ’: ಖಾದರ್
ಔತಣಕೂಟದ ಕುರಿತು ಮಾತನಾಡಿದ ಸಚಿವ ಯು.ಟಿ. ಖಾದರ್, “ಕ್ಯಾಬಿನೆಟ್ ಮೀಟಿಂಗ್ ದಿನ ಎಲ್ಲ ಖಾದ್ಯ ತಿನ್ನುವಂತಹ ವ್ಯವಸ್ಥೆಗೆ ಸಮಯದ ಅಭಾವ ಇರುತ್ತದೆ. ಅದಕ್ಕಾಗಿ ಸಂಜೆ ತಣ್ಣೀರುಬಾವಿಯಲ್ಲಿ ಎಲ್ಲ ಸಚಿವರಿಗೆ ಕರಾವಳಿಯ ರುಚಿಕರ ಮತ್ತು ಆರೋಗ್ಯಕ್ಕೆ ಪೂರಕವಾದ ಎಲ್ಲಾ ಆಹಾರ ಪದಾರ್ಥಗಳನ್ನು ನೀಡುತ್ತಿದ್ದೇವೆ” ಎಂದು ತಿಳಿಸಿದರು.
ಸಿಎಂ ಜೊತೆ ಕಾಂಗ್ರೆಸ್ ಮುಖಂಡರ ಚರ್ಚೆ: ಕಸ್ತೂರಿ ರಂಗನ್ ವರದಿ ಪ್ರಸ್ತಾಪ
ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಮುಖಂಡರ ನಿಯೋಗ ಭೇಟಿ ಮಾಡಿ ಕರಾವಳಿ ಭಾಗದ ಪ್ರಮುಖ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು. ಸಭೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವ ಕಸ್ತೂರಿ ರಂಗನ್ ವರದಿ ಪ್ರಮುಖವಾಗಿ ಪ್ರಸ್ತಾಪವಾಯಿತು. ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರ ಕೃಷಿ, ಮನೆ, ಜೀವನೋಪಾಯ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ನಿಯೋಗ ಮನವಿ ಮಾಡಿತು.
ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಉಂಟಾಗಿರುವ ಗೊಂದಲಗಳಿಗೆ ಸ್ಪಷ್ಟತೆ ನೀಡಬೇಕು ಎಂದು ಮುಖಂಡರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಪರಿಸರ ಸಂರಕ್ಷಣೆಯ ಜತೆಗೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರ ಹಿತಾಸಕ್ತಿಯನ್ನೂ ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಂಟಿ ಸರ್ವೆ ವಿಚಾರವೂ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು. ಕಂದಾಯ ಮತ್ತು ಅರಣ್ಯ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದ ಜಮೀನುಗಳ ಗಡಿ, ಹಕ್ಕು ಹಾಗೂ ದಾಖಲೆಗಳ ಕುರಿತು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಂಟಿ ಸರ್ವೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವನ್ನು ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಜಮೀನು ದಾಖಲೆ, ಗಡಿ ಗುರುತು ಮತ್ತು ಹಕ್ಕು ವಿಚಾರಗಳಿಂದ ಹಲವು ಕುಟುಂಬಗಳು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿವೆ. ಜಂಟಿ ಸರ್ವೆ ಪೂರ್ಣಗೊಂಡಲ್ಲಿ ಇಂತಹ ಹಲವು ಗೊಂದಲಗಳಿಗೆ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ನಿಯೋಗ ತಿಳಿಸಿತು. ಕಸ್ತೂರಿ ರಂಗನ್ ವರದಿ ಹಾಗೂ ಜಂಟಿ ಸರ್ವೆ ಎರಡೂ ಜಿಲ್ಲೆಯ ಜನರೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ವಿಚಾರಗಳಾಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಂಡು ಬಾಕಿ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Mangaluru is all set to host the historic Karnataka Cabinet meeting, with several expectations surrounding the session. The Cabinet meeting will be held this morning on the second floor of the Dakshina Kannada Deputy Commissioner’s Office complex, ‘Prajasaudha’, in Padil. All arrangements, including the meeting hall and the wider complex, have been completed.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 10:35 am
HK News Staffer
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am