B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶಪ್ರೇಮಿ ಹೇಳಿಕೆ ; ಬಿ.ಕೆ ಹರಿಪ್ರಸಾದ್ ವಿರುದ್ಧ ವಿಧಾನಸೌಧ ಠಾಣೆಗೆ ದೂರು

17-09-26 04:13 pm       HK News Staffer   ಕರ್ನಾಟಕ

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿರುವ ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಪರ ಹೋರಾಟಗಾರ ತೇಜಸ್ ಗೌಡ ದೂರು ನೀಡಿದ್ದು ಹರಿಪ್ರಸಾದ್ ಅವರು ಸಮಾಜದಲ್ಲಿ ದ್ವೇಷಭಾವನೆ ಮೂಡಿಸುತ್ತಿದ್ದು ಕೇಸ್‌ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು, ಸೆ.17: 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಜೈಲಿನಲ್ಲಿರುವ ಉಮರ್ ಖಾಲಿದ್ ರಾಷ್ಟ್ರೀಯವಾದಿ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಪರ ಹೋರಾಟಗಾರ ತೇಜಸ್ ಗೌಡ ದೂರು ನೀಡಿದ್ದು ಹರಿಪ್ರಸಾದ್ ಅವರು ಸಮಾಜದಲ್ಲಿ ದ್ವೇಷಭಾವನೆ ಮೂಡಿಸುತ್ತಿದ್ದು ಕೇಸ್‌ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ದೂರುದಾರ ತೇಜಸ್ ಗೌಡ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಉಮರ್ ಖಾಲಿದ್ ರಾಷ್ಟ್ರೀಯವಾದಿ ಅಂತ‌ ಹೇಳಿದ್ದಾರೆ. ಒಬ್ಬ ಭಯೋತ್ಪಾದಕನ ಬಗ್ಗೆ ವಿಧಾನಸೌಧದಲ್ಲಿ ನಿಂತು ಹೇಳಿಕೆ ಕೊಡುತ್ತಾರೆ, ರಾಷ್ಟ್ರೀಯವಾದಿ ಸಂಘಟನೆ ಎಬಿವಿಪಿ ಬಗ್ಗೆ ಮಾತನಾಡಿ, ಸಮಾಜದಲ್ಲಿ ದ್ವೇಷ ಮೂಡಿಸಲು ಯತ್ನಿಸಿದ್ದಾರೆ ಎಂದು ಹೇಳಿದರು. 
 
ಲಲಿತ್ ವಚಾನಿ ನಿರ್ದೇಶನದ ‘Prisoner No 626710 is Present’ ಎಂಬ ಡಾಕ್ಯುಮೆಂಟರಿಯನ್ನು ಸೆಪ್ಟೆಂಬರ್ 14ರಂದು ಸಂಜೆ 7 ಗಂಟೆಗೆ ಬೆಂಗ‌ಳೂರಿನ ನಾಗರಬಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಕಾನೂನು ಮತ್ತು ಸಮಾಜ ಸಮಿತಿಯಿಂದ ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಇದಕ್ಕೆ ಎಬಿವಿಪಿಯಿಂದ ವಿರೋಧ ವ್ಯಕ್ತವಾಗಿದ್ದಲ್ಲದೆ, ಭದ್ರತೆ ಹಾಗೂ ಆಡಳಿತಾತ್ಮಕ ಕಾರಣಗಳನ್ನು ಉಲ್ಲೇಖಿಸಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. 

ಇದೇ ವಿಚಾರದಲ್ಲಿ ಬಿ.ಕೆ. ಹರಿಪ್ರಸಾದ್, ‘ಉಮರ್ ಖಾಲಿದ್ ದೇಶಪ್ರೇಮಿ. ಅವರ ಬಗ್ಗೆ ಮಾತನಾಡುವ ಹಕ್ಕು ಎಬಿವಿಪಿಗೆ ಇಲ್ಲ. ಅವರು ನಾಥೂರಾಮ್ ಗೋಡ್ಸೆಯನ್ನು ಆರಾಧಿಸುತ್ತಾರೆ. ಗೋಡ್ಸೆ ದೇಶವಿರೋಧಿ ಹಾಗೂ ದೇಶದ ಮೊದಲ ಭಯೋತ್ಪಾದಕ. ಹೀಗಾಗಿ ಎಬಿವಿಪಿಗೆ ಪ್ರಶ್ನೆ ಮಾಡುವ ನೈತಿಕ ಹಕ್ಕಿಲ್ಲ’ ಎಂದು ಹೇಳಿದ್ದರು.

A complaint has been filed at the Vidhana Soudha Police Station against Karnataka Pradesh Congress Committee (KPCC) president B K Hariprasad over his recent remarks describing jailed activist Umar Khalid as a “nationalist”. Hindu activist Tejas Gowda filed the complaint, alleging that Hariprasad’s remarks could create animosity in society and seeking legal action.