ಬ್ರೇಕಿಂಗ್ ನ್ಯೂಸ್
12-11-24 11:41 am Mangalore Correspondent ಕ್ರೈಂ
ಉಳ್ಳಾಲ, ನ.12: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಮುಖಂಡನಿಗೆ ಹಲ್ಲೆಗೈದು ಜೈಲು ಸೇರಿದ್ದ ಮಂಜೇಶ್ವರ ಕಡಂಬಾರು ನಿವಾಸಿ ಮಹಮ್ಮದ್ ಆಸಿಫ್ ಗೆ ಜಾಮೀನು ಸಿಕ್ಕಿದೆ. ಜೈಲಿನಿಂದ ತೆರಳುತ್ತಿದ್ದಾಗ ಆತನ ಮೇಲೆ ದಾಳಿಗೆ ಯತ್ನಿಸಲಾಗಿದೆ ಎನ್ನಲಾಗುತ್ತಿದ್ದು ಘಟನೆ ಸಂಬಂಧ ಉಳ್ಳಾಲ ಪೊಲೀಸರು ಓರ್ವ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಇಡ್ಯಾ ಈಶ್ವರ ನಗರದ ಅಣ್ಣಪ್ಪ ಸ್ವಾಮಿ ಯಾನೆ ಮನು (24), ಪಡೀಲ್ ನಾರ್ಲದ ಸಚಿನ್ (24), ಪಜೀರು ಪಾದಲ್ ಕೋಡಿಯ ಕುಶಿತ್(18) ಮತ್ತು ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಅ.16ರ ರಾತ್ರಿ ಕುಂಪಲದ ಶರತ್, ಕೇರಳದ ಇಬ್ರಾಹಿಂ ಖಲೀಲ್ ಎಂಬವರ ಕಾರುಗಳ ಮಧ್ಯೆ ನಡೆದಿದ್ದ ಸಣ್ಣ ಅಪಘಾತ ವಿಚಾರದಲ್ಲಿ ಖಲೀಲ್ ಮತ್ತು ಆತನ ಸಹೋದರ ಆಸಿಫ್ ಸೇರಿ ಶರತ್ ಅವರಿಗೆ ಕೈಯಲ್ಲಿ ಹಲ್ಲೆಗೈದಿದ್ದಾರೆಂದು ಆರೋಪಿಸಲಾಗಿತ್ತು. ಪ್ರಕರಣವು ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಮಧ್ಯರಾತ್ರಿ ಶರತ್ ಅವರ ಸ್ನೇಹಿತ ಬಜರಂಗದಳ ಮುಖಂಡ ಅರ್ಜುನ್ ಮಾಡೂರು ಅವರು ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾಗ ಇನ್ಸ್ ಪೆಕ್ಟರ್ ಕೊಠಡಿಯೊಳಗೆ ಆಸಿಫ್, ಏಕಾಏಕಿ ಹಲ್ಲೆ ನಡೆಸಿದ್ದ.
ಹಲ್ಲೆ ಖಂಡಿಸಿ ಮಧ್ಯರಾತ್ರಿಯೇ ಹಿಂದೂ ಸಂಘಟನೆ ಕಾರ್ಯಕರ್ತರು ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಪೊಲೀಸರು ಆರೋಪಿ ಆಸಿಫ್ ನನ್ನ ವಶಕ್ಕೆ ಪಡೆದು ಜೈಲಿಗೆ ತಳ್ಳಿದ್ದರು. ಇದೀಗ ನ.8ರಂದು ಆರೋಪಿ ಮಹಮ್ಮದ್ ಆಸಿಫ್ ಗೆ ಜಾಮೀನು ದೊರೆತಿದೆ. ಆಸಿಫ್ ತನ್ನ ಕುಟುಂಬದ ಜೊತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ತಲಪಾಡಿ ಬಳಿಯ ಕೆ.ಸಿ ರೋಡ್ ನಿಂದ ಆಗಂತುಕರು ಮಾರಕಾಯುಧಗಳಿಂದ ಬೆನ್ನಟ್ಟಿದ್ದಾರೆಂದು ಆರೋಪಿಸಿ ಉಳ್ಳಾಲ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣ ದಾಖಲಿಸಿದ ಉಳ್ಳಾಲ ಪೊಲೀಸರು ತನಿಖೆ ನಡೆಸಿ ಇದೀಗ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಆಸಿಫ್ ಕಾರಿನಲ್ಲಿ ತೆರಳುತ್ತಿದ್ದಾಗ ಭಯದಿಂದ ತಲಪಾಡಿ ಟೋಲ್ ಬ್ರೇಕ್ ಮಾಡಿ ಓಡಿದ್ದು, ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದು ಉಳ್ಳಾಲ ಠಾಣೆಗೆ ಹಸ್ತಾಂತರವಾಗಿತ್ತು. ಪೊಲೀಸರು ಸಿಸಿಟಿವಿ ದಾಖಲೆ ಪರಿಶೀಲಿಸಿ ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ.
Attempt to murder on Accused at KC road, three arrested by Mangalore police. In connection with an attempted murder case reported on November 8 near the K C Road-Uchila stretch on National Highway 66 in Talapady village, the Ullal police have arrested four individuals. The incident occurred around 7:40 pm when Mohammad Asif (33), son of Ismail and resident of Fatima Manzil, near Kadambar School, Badaje, Kasargod district, Kerala, was attacked while traveling home with his family from Mangaluru to Kerala. The assailants reportedly launched an assault intending to kill him.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 11:30 am
HK News Staffer
SDPI Protest, CM DK Shivakumar, Mangalore: ರಹ...
18-09-26 10:35 am
Mangalore, Karnataka Cabinet Meeting, DK Shiv...
18-09-26 09:49 am
ಕಸ್ತೂರಿ ರಂಗನ್ ವರದಿ ; 43 ಗ್ರಾಮಗಳ ಆತಂಕ ನಿವಾರಣೆಗ...
17-09-26 08:48 pm
Mangalore, DK Shivakumar, Coastal Karnataka,...
17-09-26 08:02 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am