ಬ್ರೇಕಿಂಗ್ ನ್ಯೂಸ್
08-02-22 06:56 pm Source: Vijayakarnataka ಕ್ರೀಡೆ
ಹೊಸದಿಲ್ಲಿ: ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯ ಆಟಗಾರರ ಮೆಗಾ ಹರಾಜಿಗೆ ಬರುವಂತೆ ಬೇರೊಂದು ಫ್ರಾಂಚೈಸಿ ತಮ್ಮನ್ನು ಹಲವು ಬಾರಿ ಕೇಳಿಕೊಂಡಿತ್ತು ಎಂಬ ಅಂಶವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ನಾಯಕ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ.
ಕಳೆದ 2008ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ತಂಡ ಸೇರಿದ್ದ ವಿರಾಟ್ ಕೊಹ್ಲಿ 2013ರಲ್ಲಿ ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಕೊಹ್ಲಿ 2021ರ ಟೂರ್ನಿಯ ಬಳಿಕ ನಾಯಕತ್ವವನ್ನು ತ್ಯಜಿಸಿದ್ದರು.
ಅಂದಹಾಗೆ 2022ರ ಐಪಿಎಲ್ ಟೂರ್ನಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ಆರ್‌ಸಿಬಿ ತಂಡದ ತವರು ನಗರಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ನಾಯಕನ ಹುಡುಕಾಟದಲ್ಲಿರುವ ಬೆಂಗಳೂರು ಫ್ರಾಂಚೈಸಿಗೆ ಮೆಗಾ ಹರಾಜು ಅತ್ಯಂತ ಪ್ರಮುಖ ಘಟ್ಟವಾಗಿದೆ.
'ನನ್ನ ಐಪಿಎಲ್ ವೃತ್ತಿಬದುಕು 2019ರಲ್ಲೇ ಅಂತ್ಯಗೊಳ್ಳುತ್ತಿತ್ತು', ಎಂದ ಸಿರಾಜ್!
ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಇತ್ತೀಚೆಗೆ ಮಾತನಾಡಿದ್ದ ಕಿಂಗ್ ಕೊಹ್ಲಿ, ಐಪಿಎಲ್ ಟ್ರೋಫಿ ಗೆಲ್ಲುವುದಕ್ಕಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ರಾಮಾಣಿಕನಾಗಿ ಇರುವುದು ನನ್ನ ಪಾಲಿಗೆ ದೊಡ್ಡ ಸಂಗತಿ. ಆದ್ದರಿಂದ ಬೇರೆ ಫ್ರಾಂಚೈಸಿಯಿಂದ ಬಂದಿದ್ದ ಆಫರ್ ಅನ್ನು ನಿರಾಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
"ಮೆಗಾ ಹರಾಜಿಗೆ ಬನ್ನಿ ಎಂದು ಬೇರೆ ಫ್ರಾಂಚೈಸಿವೊಂದು ನನ್ನನ್ನು ಹಲವು ಬಾರಿ ಸಂಪರ್ಕಿಸಿತ್ತು. ಆದರೆ ಆರ್‌ಸಿಬಿಗೆ ನಾನು ಪ್ರಾಮಾಣಿಕನಾಗಿದ್ದೇನೆ, ನನ್ನ ಜೀವನದಲ್ಲಿ ನನಗೆ ಇಷ್ಟವಾಗಿರುವುದನ್ನು ನಾನು ಹಿಂಬಾಲಿಸುತ್ತೇನೆ. ಬೇರೆ ಯಾವುದೇ ಫ್ರಾಂಚೈಸಿಯೊಂದಿಗೆ ಐಪಿಎಲ್ ಗೆದ್ದಿದ್ದೀರಿ ಎಂದು ಜನರು ಹೇಳಿದಾಗ ಐದು ನಿಮಿಷ ಕೇಳಲು ಚೆನ್ನಾಗಿರುತ್ತದೆ. ಆದರೆ ಆರನೇ ನಿಮಿಷಕ್ಕೆ ಜೀವನದಲ್ಲಿ ಏನೋ ಕಳೆದುಕೊಂಡಿದ್ದೇನೆಂಬ ಭಾವನೆ ಉಂಟಾಗುತ್ತದೆ," ಎಂದರು.
ಆಲ್‌ರೌಂಡರ್ ಖರೀದಿಗೆ ಹಣದ ಹೊಳೆ ಹರಿಸಲು ಸಜ್ಜಾದ ಆರ್‌ಸಿಬಿ!
"ಬೆಂಗಳೂರು ಫ್ರಾಂಚೈಸಿ ತನ್ನ ಆರಂಭಿಕ ಮೂರು ವರ್ಷಗಳಲ್ಲಿ ನನಗೆ ಸಾಕಷ್ಟು ನೀಡಿದೆ ಹಾಗೂ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿತ್ತು. ಇದು ನನ್ನ ಪಾಲಿಗೆ ಅತ್ಯಂತ ವಿಶೇಷ ಸಂಗತಿ. ಹಲವು ತಂಡಗಳಿಗೆ ನನ್ನನ್ನು ಆಡಿಸುವ ಅವಕಾಶ ಸಿಕ್ಕಿತ್ತು. ಆದರೆ ಅವರು ನನ್ನ ಮೇಲೆ ನಂಬಿಕೆ ಇಟ್ಟಿರಲಿಲ್ಲ ಹಾಗೂ ಬೆಂಬಲಿಸಿರಲಿಲ್ಲ," ಎಂದರು.
2022ರ ಐಪಿಎಲ್ ಟೂರ್ನಿಯ ಮೂಲಕ ವಿರಾಟ್ ಕೊಹ್ಲಿ ಆರ್‌ಸಿಬಿಗೆ 15ನೇ ಆವೃತ್ತಿಯನ್ನು ಪೂರ್ಣಗೊಳಿಸಿದ ಸಾಧನೆಗೆ ಭಾಜನರಾಗಲಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿಯೇ ಒಂದೇ ಒಂದು ಫ್ರಾಂಚೈಸಿ ಪ್ರತಿನಿಧಿಸಿದ ಆಟಗಾರನಾಗಿ ಕೊಹ್ಲಿ ಉಳಿದುಕೊಳ್ಳಲಿದ್ದಾರೆ.
ಆರ್‌ಸಿಬಿ ತಂಡದ ನಾಯಕತ್ವಕ್ಕೆ ಕೊಹ್ಲಿ ಮರಳಬೇಕೆಂದ ಅಗರ್ಕರ್!
ಇಲ್ಲಿಯವರೆಗೂ 207 ಐಪಿಎಲ್ ಪಂದ್ಯಗಳಾಡಿರುವ ವಿರಾಟ್ ಕೊಹ್ಲಿ 37.39ರ ಸರಾಸರಿಯಲ್ಲಿ 6283 ರನ್ ಗಳಿಸಿದ್ದಾರೆ. ಆ ಮೂಲಕ ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಇದರಲ್ಲಿ ಐದು ಶತಕ ಸಿಡಿಸಿರುವ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತದ ಮೊದಲನೇ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ.
ಶತಕಗಳ ಪಟ್ಟಿಯಲ್ಲಿ ಕ್ರಿಸ್ ಗೇಲ್(6 ಶತಕ) ಅಗ್ರ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ(49) ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಸಾಲಿನಲ್ಲಿ ಡೇವಿಡ್ ವಾರ್ನರ್ 54 ಅರ್ಧಶತಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.
ಸುದ್ದಿ ಆರ್‌ಸಿಬಿಗೆ ಈ ಇಬ್ಬರು ಬದ್ದಿದ್ದರಿಂದ ನನ್ನ ಆಟ ಬದಲಾಯಿತೆಂದ ಕೊಹ್ಲಿ!
Ipl 2022 Auction, I ve Been Approached A Few Times As Well, Kohli Recalls Being Approached By Other Franchises To Put Name In Ipl Auction
08-05-25 12:23 pm
HK News Desk
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
08-05-25 12:47 pm
HK News Desk
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
Operation Sindoor: ಸೇನಾ ದಾಳಿಗೆ ‘ಆಪರೇಶನ್ ಸಿಂಧೂ...
07-05-25 10:28 pm
Gunfire at Border; ಗಡಿಯಲ್ಲಿ ಗುಂಡಿನ ಮೊರೆತ ; ಕಾ...
07-05-25 06:14 pm
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
07-05-25 10:30 pm
Mangalore Correspondent
Operation Sindhoor, MP Brijesh Chowta, Manga...
07-05-25 03:36 pm
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm