ಬ್ರೇಕಿಂಗ್ ನ್ಯೂಸ್
27-02-26 09:23 pm Mangalore Correspondent ಕ್ರೈಂ
ಮಂಗಳೂರು, ಫೆ.27: ತನ್ನ ಬ್ಯಾಂಕ್ ಖಾತೆಯನ್ನು ಸ್ನೇಹಿತನೇ ದುರುಪಯೋಗ ಮಾಡಿದ್ದಾನೆಂಬ ವ್ಯಕ್ತಿಯೊಬ್ಬರ ದೂರಿನ ಬೆನ್ನತ್ತಿದ ಮಂಗಳೂರಿನ ಸೈಬರ್ ಠಾಣೆ ಪೊಲೀಸರು ಹೈದ್ರಾಬಾದ್ ನಲ್ಲಿ ಕುಳಿತು ಸೈಬರ್ ಅಪರಾಧಕ್ಕೆ ಬ್ಯಾಂಕ್ ಖಾತೆಗಳನ್ನು ಪೂರೈಸುತ್ತಿದ್ದ ಐವರು ಖದೀಮರನ್ನು ಸೆರೆಹಿಡಿದಿದ್ದಾರೆ.
ಮಂಗಳೂರು ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬವರು ತನ್ನ ಸ್ನೇಹಿತ ಮುಲ್ಕಿ ನಿವಾಸಿ ಇಬ್ರಾಹಿಂ ಎಂಬವರಿಗೆ ಎರಡು ವರ್ಷಗಳ ಹಿಂದೆ ತನ್ನ ಚಾಲ್ತಿ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ಬಿಟ್ಟುಕೊಟ್ಟಿದ್ದರು. ಬ್ಯಾಂಕ್ ಖಾತೆಯ ಪಾಸ್ ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ಟೆಲ್ ಕಂಪನಿಯ ಸಿಮ್ ಕಾರ್ಡನ್ನು ನೀಡಿದ್ದರು. ಆದರೆ ತನ್ನ ಖಾತೆಯನ್ನು ದುರುಪಯೋಗ ಮಾಡಿರುವ ಬಗ್ಗೆ ಬ್ಯಾಂಕಿನಿಂದ ತಿಳಿದ ಮೊಹಮ್ಮದ್ ಇಕ್ಬಾಲ್ ಪೊಲೀಸ್ ದೂರು ನೀಡಿದ್ದರು.

ಪೊಲೀಸರು ಇಬ್ರಾಹಿಂನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ, ಕಮಿಷನ್ ಆಸೆಗೆ ಹೈದ್ರಾಬಾದ್ ನಲ್ಲಿರುವ ತಂಡಕ್ಕೆ ಬ್ಯಾಂಕ್ ಖಾತೆ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದ. ಇದರಂತೆ, ಪೊಲೀಸರು ಅಲ್ಲಿಗೆ ತೆರಳಿ ಐದು ಜನರನ್ನು ಬಂಧಿಸಿದ್ದಾರೆ. ಆಂಧ್ರಪ್ರದೇಶ ನೆಲ್ಲೂರಿನ ಶೇಖ್ ಕರೀಮುಲ್ಲಾ ರಸೂಲ್ (27), ಕರ್ನೂಲ್ ಜಿಲ್ಲೆಯ ಬುಡಿದಿನ್ನೆ ವಂಶಿ ಅಲಿಯಾಸ್ ಗುರು(21), ಹೈದ್ರಾಬಾದ್ ನಗರದ ಪಂಡಿತಿ ಕ್ರಾಂತಿ ಕುಮಾರ್(36), ಅದೇ ಏರಿಯಾದ ಬಡೇ ಶ್ರೀನಿವಾಸ್ (35), ನೆಲ್ಲೂರಿನ ಉತ್ಪಲ ಸಂತೋಷ್ ಕೃಷ್ಣ (35) ಬಂಧಿತರು.
ಆರೋಪಿಗಳಿಂದ 18 ಮೊಬೈಲ್ ಫೋನ್, ಒಂದು ಲ್ಯಾಪ್ಟಾಪ್, ಸಿಮ್ ಕಾರ್ಡ್-12, ಚೆಕ್ ಬುಕ್ -15, ಬ್ಯಾಂಕ್ ಪಾಸ್ ಬುಕ್ -12, ಡೆಬಿಟ್ ಕಾರ್ಡ್ -18 ವಶಕ್ಕೆ ಪಡೆಯಲಾಗಿದೆ. ಸದ್ರಿ ಆರೋಪಿಗಳು ಸಾಮಾಜಿಕ ಮಾಧ್ಯಮದಲ್ಲಿ ಬ್ಯಾಂಕ್ ಖಾತೆಗಳನ್ನು ಬಾಡಿಗೆ ನೀಡಿದರೆ 4ರಿಂದ 6ರಷ್ಟು ಕಮಿಷನ್ ನೀಡುವುದಾಗಿ ಆಕರ್ಷಕ ಜಾಹೀರಾತುಗಳನ್ನು ನೀಡಿ, ಸಾರ್ವಜನಿಕರಿಂದ ಬ್ಯಾಂಕ್ ಮಾಹಿತಿ ಪಡೆದು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ ವಂಚನೆ ಎಸಗುತ್ತಿದ್ದರು. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ವಂಚಕರಿಂದ ಪಡೆಯುತ್ತಿದ್ದರು.
ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ಹೆಸರಿನಲ್ಲಿದ್ದ ಬ್ಯಾಂಕ್ ಖಾತೆಯ ಮೇಲೆ ಎನ್ ಸಿಆರ್ ಪಿ ಪೋರ್ಟಲ್ ನಲ್ಲಿ ದೇಶಾದ್ಯಂತ 5 ಪ್ರಕರಣ ದಾಖಲಾಗಿದೆ. ಆರೋಪಿತರ ಮೊಬೈಲ್ ಮತ್ತು ಲ್ಯಾಪ್ ಟಾಪ್ ಪರಿಶೀಲಿಸಿದಾಗ 72 ಖಾತೆಗಳ ವಿವರಗಳು ಲಭಿಸಿದ್ದು ಅದರಲ್ಲಿ 30 ಬ್ಯಾಂಕ್ ಖಾತೆಗಳ ವಿರುದ್ಧ ಎನ್ ಸಿಆರ್ ಪಿ ಪೋರ್ಟಲ್ ನಲ್ಲಿ 272ಕ್ಕೂ ಹೆಚ್ಚು ದೂರುಗಳು ದಾಖಲಾಗಿದ್ದು ಕಂಡುಬಂದಿದೆ. ಸದ್ರಿ ವಂಚಕರ ತಂಡವು ಫೆ.26ರಂದು ಒಂದೇ ದಿನ ಎರಡು ಕೋಟಿಗೂ ಹೆಚ್ಚಿನ ವಹಿವಾಟು ನಡೆಸಿರುವುದು ತನಿಖೆಯ ವೇಳೆ ಪತ್ತೆಯಾಗಿದೆ. ಪೊಲೀಸರು ಹಠಾತ್ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ವಿದೇಶದಲ್ಲಿದ್ದು ಸೈಬರ್ ವಂಚನೆ ಎಸಗುತ್ತಿರುವ ಜಾಲವನ್ನು ಭೇದಿಸಲು ಕ್ರಮ ಕೈಗೊಂಡಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am