ಬ್ರೇಕಿಂಗ್ ನ್ಯೂಸ್
01-03-26 09:52 am HK News Staffer ದೇಶ - ವಿದೇಶ
ಟೆಹ್ರಾನ್, ಮಾ.1: ಅಮೆರಿಕ- ಇಸ್ರೇಲ್ ಏರ್ ಸ್ಟ್ರೈಕ್ ನಲ್ಲಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ಅವರು ಹತ್ಯೆಗೀಡಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಹತ್ಯೆ ಮಾಡಿದ್ದಾಗಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಯತೊಲ್ಲಾ ಖಮೇನಿ ಜೊತೆಗೆ ಅವರ ಪುತ್ರಿ, ಮೊಮ್ಮಗು, ಅಳಿಯ, ಸೊಸೆಯೂ ಹತ್ಯೆಗೀಡಾಗಿದ್ದಾರೆ. ಖಮೇನಿ ಅವರು ಆಡಳಿತವನ್ನು ಪ್ರಧಾನಿಗೆ ಒಪ್ಪಿಸಿ ಒಂದು ವಾರದಿಂದ ಅಡಗು ತಾಣಕ್ಕೆ ತೆರಳಿದ್ದರು. ಆದರೆ ಇಸ್ರೇಲಿನ ಗುಪ್ತಚರ ಪಡೆ ಮೊಸಾದ್, ಖಮೇನಿ ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಗುರಿಯಿಟ್ಟು ಬಾಂಬ್ ಹಾಕಿ ಇಡೀ ಕುಟುಂಬವನ್ನು ಹತ್ಯೆ ಮಾಡಿದೆ. ಖಮೇನಿ ಶನಿವಾರ ಬೆಳಗ್ಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮ ಐಆರ್ ಎನ್ ನ್ಯೂಸ್ ವರದಿ ಮಾಡಿದೆ.
ಖಮೇನಿ ಗೌರವಾರ್ಥ ಇರಾನ್ ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೆ, ಏಳು ದಿನಗಳ ರಾಷ್ಟ್ರ ವ್ಯಾಪಿ ಸರ್ಕಾರಿ ರಜಾ ದಿನ ಘೋಷಣೆ ಮಾಡಲಾಗಿದೆ. ಖಮೇನಿ ಹತ್ಯೆಯ ಬಗ್ಗೆ ವಿಶ್ವಸಂಸ್ಥೆ ಯಾವುದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿಲ್ಲ. 86 ವರ್ಷದ ಖಮೇನಿ ಇರಾನ್ ದೇಶವನ್ನು 1989ರಿಂದ ಆಡಳಿತದಲ್ಲಿದ್ದರು. ರೆವೊಲ್ಯುಶನರಿ ಗಾರ್ಡ್ ಎನ್ನುವ ಪ್ರಭಾವಿ ಪಡೆಯನ್ನು ಕಟ್ಟಿದ್ದರು. ಅಮೆರಿಕದ ಬೆದರಿಕೆ ನಡುವೆಯೂ ಅಣು ಬಾಂಬ್ ತಯಾರಿಸುತ್ತಿದ್ದಾರೆ ಎನ್ನುವುದು ಖಮೇನಿ ಮೇಲಿನ ಆರೋಪವಾಗಿತ್ತು. ಅಣು ಶಸ್ತ್ರ ಹೊಂದಬಾರದು ಎಂಬ ನಿರಂತರ ಬೆದರಿಕೆ ಬಳಿಕ ಇಸ್ರೇಲ್- ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದು ಹತ್ಯೆ ಮಾಡಿದೆ.
ತನ್ನ ಮೇಲಿನ ದಾಳಿಗೆದುರಾಗಿ ಇರಾನ್ ಪಡೆಗಳು ಅಮೆರಿಕದ ಮಿಲಿಟರಿ ಬೇಸ್ ಇರುವ ಯುಎಇ, ಕತಾರ್, ಬೆಹ್ರೈನ್ ಮೇಲೆ ದಾಳಿ ನಡೆಸಿತ್ತು.

ಜಾಗತಿಕ ಭಯೋತ್ಪಾದನೆಯ ಸೂತ್ರಧಾರನ ಸಾವು :
ಜಾಗತಿಕ ಭಯೋತ್ಪಾದನೆಯ ಅತಿದೊಡ್ಡ ಪ್ರತಿಪಾದಕ, ಸೂತ್ರಧಾರ ಕಡೆಗೂ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಹೇಳಿಕೆ ಬಿಡುಗಡೆ ಮಾಡಿದೆ. ಎಕ್ಸ್ ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕಡೆಯಿಂದ ಹೇಳಿಕೆ ನೀಡಲಾಗಿದ್ದು ದಶಕಗಳ ಕಾಲದಿಂದ ನಡೆಸುತ್ತಿದ್ದ ಭಯೋತ್ಪಾದನಾ ಯುಗದ ಅಂತ್ಯವಾಗಿದೆ. ಅಲಿ ಖಮೇನಿ ಹತ್ಯೆಯಿಂದ ಜಗತ್ತು ಸುರಕ್ಷತೆಯತ್ತ ಮರಳಿದೆ ಎಂದು ಹೇಳಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am