ಬ್ರೇಕಿಂಗ್ ನ್ಯೂಸ್
21-08-26 03:42 pm HK News Staffer ಕರ್ನಾಟಕ
ನವದೆಹಲಿ, ಆ.21: ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಅಲ್ಲ ಎನ್ನುವ ಮಾತಿದೆ. ಒಂದು ಕಾಲದಲ್ಲಿ ಹಾವು ಮುಂಗುಸಿಯಂತಿದ್ದವರೂ ಒಂದಾಗಿದ್ದನ್ನು ನೋಡಿದ್ದೇವೆ. ಅಂತಹದ್ದೇ ವಿರುದ್ಧ ಧ್ರುವಗಳಂತಿದ್ದವರು ಯಾರೂ ನಿರೀಕ್ಷಿಸದ ರೀತಿ ಒಂದಾಗಲು ಹೊರಟಿದ್ದಾರೆ. ದೇಶದ ರಾಜಕಾರಣದಲ್ಲಿ ಬಹುದೊಡ್ಡ ಪರಿವರ್ತನೆಯ ಗಾಳಿ ಬೀಸತೊಡಗಿದ್ದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಶಾಕಿಂಗ್ ಸುದ್ದಿ ನೀಡಲು ಬಿಜೆಪಿ ಮುಂದಾಗಿದೆ. ಇಂಡಿಯಾ ಕೂಟದಲ್ಲಿದ್ದ ಎನ್ ಸಿಪಿ ಮತ್ತು ಡಿಎಂಕೆ ಪಕ್ಷಗಳು ಎನ್ ಡಿಎ ಕೂಟಕ್ಕೆ ಸೇರ್ಪಡೆಯಾಗಲು ಮಾತುಕತೆ ನಡೆದಿದ್ದು ಇದಕ್ಕಾಗಿ ಕೊಡು ಕೊಳ್ಳುವಿಕೆಯ ಭಾರೀ ಆಫರ್ ಕೂಡ ವಿನಿಯಮ ಆಗಿವೆಯಂತೆ.
ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ನಾಯಕರ ಜೊತೆಗೆ ಬಿಜೆಪಿ ಪ್ರಮುಖರು ಅಂತಿಮ ಸುತ್ತಿನ ಮಾತುಕತೆಯನ್ನು ಈಗಾಗಲೇ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಡಿಎಂಕೆ ಪಕ್ಷವು ಇತ್ತೀಚೆಗಿನ ತಮಿಳುನಾಡು ಚುನಾವಣೆಯಲ್ಲಿ ನೆಲಕಚ್ಚಿದ್ದು ಮತ್ತೆಂದೂ ಅಧಿಕಾರಕ್ಕೆ ಬರದಷ್ಟು ಸವೆದು ಹೋಗಿದೆ. ಇದಕ್ಕೆ ವಿಜಯ್ ನೇತೃತ್ವದಲ್ಲಿ ಟಿವಿಕ್ ಪಕ್ಷ ಅಧಿಕಾರಕ್ಕೇರಿದ್ದೇ ಕಾರಣ. ಡಿಎಂಕೆ ಜೊತೆಗಿದ್ದ ಜಾತ್ಯತೀತ ಶಕ್ತಿಗಳು ವಿಜಯ್ ಪರ ವಾಲಿದ್ದು ಹೀಗಾಗಿ ಮುಂದಿನ ಭವಿಷ್ಯದ ದೃಷ್ಟಿಯಿಂದ ಡಿಎಂಕೆ ಎನ್ ಡಿಎ ಮೈತ್ರಿಕೂಟಕ್ಕೆ ಸೇರಲು ಮುಂದಾಗಿದೆ. ದೇಶದಲ್ಲಿ ಕಾಂಗ್ರೆಸ್ ಪರ್ಯಾಯ ಶಕ್ತಿ ಆಗದೇ ಇರುವುದು ಮತ್ತು ಇಂಡಿಯಾ ಕೂಟದಲ್ಲಿ ಬಲವರ್ಧನೆ ಆಗದಿರುವುದು ಈ ಪಕ್ಷಗಳನ್ನು ಚಿಂತೆಗೀಡು ಮಾಡಿದ್ದು ಅಧಿಕಾರಕ್ಕಾಗಿ ಸಿದ್ಧಾಂತ ಬಿಟ್ಟು ಎದುರಾಳಿ ಜೊತೆಗೆ ಮೈತ್ರಿಗೆ ಮುಂದಾಗಿವೆ.
ಈ ಕುರಿತು ತಮಿಳುನಾಡು ರಾಜಕೀಯದಲ್ಲಿ ಮಾತುಗಳು ಕೇಳಿಬರುತ್ತಿದ್ದು ಜಾಲತಾಣದಲ್ಲಿ ಬಹಿರಂಗ ಚರ್ಚೆಗೀಡಾಗಿದೆ. ಡಿಎಂಕೆಯು ಅಧಿಕೃತವಾಗಿ ಬಿಜೆಪಿ ಮೈತ್ರಿಕೂಟದಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಡಿಎಂಕೆ ಸಂಸದ ತಿರುಚ್ಚಿ ಶಿವ ಶೀಘ್ರದಲ್ಲೇ ಕೇಂದ್ರ ಸಚಿವರಾಗಲಿದ್ದಾರೆ ಎಂಬ ಮಾತುಗಳು ರಾಜಕಾರಣಿಗಳ ಬಾಯಿಂದಲೇ ಹೊರಬಿದ್ದಿವೆ. ಇದೇ ವೇಳೆ, ಡಿಎಂಕೆ ಸಂಸದೆ ಕನಿಮೊಳಿ ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ ಎಂದು ಹೇಳಿರುವುದರಲ್ಲಿ ತುಂಬಾ ಅರ್ಥವಿದೆ ಎಂದು ತಮಿಳುನಾಡು ಸರ್ಕಾರದ ಸಚಿವ ಆರ್. ನಿರ್ಮಲ್ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಹಿಂದಿನಿಂದಲೂ ಡಿಎಂಕೆ - ಕಾಂಗ್ರೆಸ್ ಗಳಸ್ಯ ಕಂಠಸ್ಯ ರೀತಿಯಲ್ಲಿ ಮೈತ್ರಿಯಲ್ಲಿತ್ತು. ಡಿಎಂಕೆ ತನ್ನ ಸರ್ಕಾರದಲ್ಲಿ ಕಾಂಗ್ರೆಸಿಗರಿಗೆ ಸ್ಥಾನ ನೀಡದೇ ಇದ್ದರೂ, ಮೈತ್ರಿಗೆ ಕುಂದು ಬಂದಿರಲಿಲ್ಲ. ಆದರೆ ಎದುರಾಳಿ ವಿಜಯ್ ನೇತೃತ್ವದ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ನೀಡಿದ್ದು ಸ್ಟಾಲಿನ್ ಬಳಗವನ್ನು ಕೆರಳಿಸಿದೆ. ಹೀಗಾಗಿ ಕೈ ಪಕ್ಷದ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದು ತನ್ನ ರಾಜಕೀಯ ಭವಿಷ್ಯದ ಬಗ್ಗೆ ಚಿಂತೆನೆಯಲ್ಲಿದೆ. ಇದೇ ವೇಳೆ, ಕೇಂದ್ರ ಮಟ್ಟದ ವರಿಷ್ಠ ನಾಯಕ ಎನ್ ಸಿಪಿಯ ಶರದ್ ಪವಾರ್ ಬಿಜೆಪಿ ಕಡೆಗೆ ಹೊರಳಿದ್ದು ಅವರ ಮೂಲಕವೇ ಡಿಎಂಕೆಯನ್ನೂ ತನ್ನದೇ ಕೂಟಕ್ಕೆ ಸೆಳೆದುಕೊಳ್ಳಲು ಬಿಜೆಪಿ ವರಿಷ್ಠರು ತಂತ್ರಗಾರಿಕೆ ನಡೆಸಿದ್ದಾರೆ. ಈ ಕುರಿತ ಮಾತುಕತೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದ್ದು ಕೆಲವೇ ದಿನಗಳಲ್ಲಿ ಅಂತಿಮವಾಗಲಿದೆ ಎಂಬ ಮಾತು ಹರಿದಾಡುತ್ತಿದೆ.


ಶರದ್ ಪವಾರ್ ಮತ್ತು ಪ್ರಧಾನಿ ಮೋದಿ ಹಿಂದಿನಿಂದಲೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಎನ್‌ಸಿಪಿ ಈ ಹಿಂದೆಯೇ ಎನ್‌ಡಿಎ ಒಕ್ಕೂಟದ ಭಾಗವಾಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಶರದ್ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಈ ವರದಿಗಳನ್ನು ನಿರಾಕರಿಸಿದ್ದರು. ಮೂಲಗಳ ಪ್ರಕಾರ, ತಮ್ಮ ಪಾರ್ಟಿಯ ಜೊತೆಗೆ ಡಿಎಂಕೆಯನ್ನೂ ಎನ್‌ಡಿಎ ಮೈತ್ರಿಕೂಟದ ಭಾಗವನ್ನಾಗಿಸಲು ಖುದ್ದು ಶರದ್ ಪವಾರ್ ಅವರೇ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳಲು ಕೆಲವೊಂದು ಷರತ್ತನ್ನು ಶರದ್ ಪವಾರ್ ಹಾಕಿದ್ದಾರೆ. ಕೇಂದ್ರದಲ್ಲಿ ಒಂದು ಸಚಿವ ಸ್ಥಾನ ಎನ್‌ಸಿಪಿಗೆ , ಎರಡು ಸಚಿವ ಸ್ಥಾನ ಡಿಎಂಕೆಗೆ ಕೊಡಬೇಕೆಂದು ಷರತ್ತು ಹಾಕಿದ್ದಾರೆಂದು ಹೇಳಲಾಗುತ್ತಿದೆ.
ಎಲ್ಲವೂ ಓಕೆಯಾದರೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಮತ್ತು ಸ್ಟಾಲಿನ್ ಸಹೋದರಿ ಕನಿಮೋಳಿ, ಮೋದಿ ನೇತೃತ್ವದ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಇದಲ್ಲದೆ, ಎಂಕೆ ಸ್ಟಾಲಿನ್ ಸೂಚಿಸಿದರೆ ಇನ್ನೊಬ್ಬ ಡಿಎಂಕೆ ಸಂಸದ ತಿರುಚ್ಚಿ ಶಿವ ಕೂಡ ಸಚಿವ ಸ್ಥಾನಕ್ಕೇರಬಹುದು ಎಂದು ಹೇಳಲಾಗುತ್ತಿದೆ. ಎರಡು ತಿಂಗಳ ಹಿಂದೆಯೇ ಕೇಂದ್ರ ಸಂಪುಟ ಪುನಾರಚನೆಯ ಮಾತು ಕೇಳಿಬಂದಿದ್ದರೂ, ಮುಂದಕ್ಕೆ ಹೋಗಿದ್ದು ಇದೇ ಕಾರಣಕ್ಕೆ ಎನ್ನುವ ಮಾತುಗಳೂ ಹರಿದಾಡುತ್ತಿವೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm