ಬ್ರೇಕಿಂಗ್ ನ್ಯೂಸ್
15-10-26 02:30 pm HK News Staffer ಕರ್ನಾಟಕ
ಬೆಂಗಳೂರು, ಅ 15: ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ 'ಸ್ಟಿಂಗ್ ಆಪರೇಷನ್' ಕೋಲಾಹಲದ ಬಗ್ಗೆ ಹಾಲಿ ನ್ಯಾಯಾಧೀಶ ನೇತೃತ್ವದಲ್ಲಿ ತನಿಖೆ ಮಾಡಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ಅವರು, ಪೊಲೀಸರನ್ನು ಇಟ್ಟುಕೊಂಡು ಸಿನಿಮಾ ತರ ಬೆದರಿಕೆ ಹಾಕ್ತಿರಾ? ನಾನೇ ಬರ್ತಿನಿ, ನನ್ನನ್ನೇ ಬಂಧಿಸಿ, ನನ್ನನ್ನು ತನಿಖೆಗೆ ಒಳಪಡಿಸಿ. ನನ್ನ ಬದಲಾಗಿ ಪಕ್ಷದ ಕಾರ್ಯಕರ್ತರ ಮೇಲೆ ಯಾಕೆ ತನಿಖೆ ಮಾಡುತ್ತೀರಾ? ಎಂದು ಎಚ್ಡಿಕೆ ಅವರು ಸರಕಾರಕ್ಕೆ ಸವಾಲು ಹಾಕಿದರು.
ಈ ರಾಜ್ಯದಲ್ಲಿ ಅನಾಗರಿಕ ಸರ್ಕಾರ ಇದೆ. ತಮಗೆ ಬೇಕಾದಂತೆ ಆಟ ಆಡ್ತಿದ್ದಾರೆ, ಇದರಿಂದಾಗಿ ಕೆಲವು ಅಧಿಕಾರಿಗಳು ಯಾತನೆ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡೋ ಪರಿಸ್ಥಿತಿ ಬಂತಾ ಅಂತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುವ ಯುವಕನನ್ನು ಪೊಲೀಸರು ಬೆಳಿಗ್ಗೆ 6.30ಕ್ಕೆ ಕರೆದುಕೊಂಡು, ರಾತ್ರಿ 8 ಗಂಟೆವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು. ಅದ್ಯಾವುದೋ ಸ್ಥಳದಲ್ಲಿ ಕರೆದುಕೊಂಡು, ಧೂಳಿನಲ್ಲಿ ಕೂರಿಸಿಕೊಂಡು ಹೇಳಿಕೆ ಕೊಡುವಂತೆ ಒತ್ತಾಯಿಸಿದ್ದರು. ಅದಲ್ಲದೆ, ನಮ್ಮ ವಾರ್ ರೂಮ್ ನಲ್ಲಿ ಕೆಲಸ ಮಾಡೋನಿಗೆ ಫೋನ್ ಮಾಡಿ ಹೇಳಿಕೆ ನೀಡುವಂತೆ ಕಿರುಕುಳ ಕೊಟ್ಟಿದ್ದಾರೆ. ನಿಮ್ಮ ಸಿಎಂ ಕಚೇರಿಯಲ್ಲಿ ಇದ್ದಾರಲ್ಲಾ ಅಧಿಕಾರಿಗಳು, ಅವರ ಪೋನ್ ಟ್ಯಾಪ್ ಮಾಡಿ ತನಿಖೆ ಮಾಡಿ, ಎಲ್ಲಾ ಹೊರಗಡೆ ಬರುತ್ತದೆ ಎಂದು ಕಿಡಿ ಕಾರಿದರು.
ಸ್ಟಿಂಗ್ ಆಪರೇಷನ್ ವಿಚಾರ ಆರಂಭಿಸಿದ್ದು ನಾನಾ? ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿತ್ತು. ಸಂಪುಟದ ಚರ್ಚೆಗಳು ರಹಸ್ಯವಾಗಿರಬೇಕಾದ ಸಂದರ್ಭದಲ್ಲಿ ಅದರ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ? ಮುಖ್ಯಮಂತ್ರಿಗಳು ಸ್ಟಿಂಗ್ ಆಪರೇಷನ್ ಫೈಲ್ನ ಸಂಪುಟಕ್ಕೆ ತೆಗೆದುಕೊಂಡು ಹೋಗಿದ್ದೇಕೆ? ಈ ಬೆಳವಣಿಗೆಯಿಂದಲೇ ವಿವಾದ ಶುರುವಾಯ್ತು ಎಂದು ಆರೋಪಿಸಿದ್ರು.
ನಾನು ನೈಸ್ ಅಕ್ರಮಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲು ಸುದ್ದಿಗೋಷ್ಠಿ ಕರೆದಿದ್ದೆ. ಆ ಟೈಮಲ್ಲಿ ಸ್ಟಿಂಗ್ ಆಪರೇಷನ್ ಕುರಿತ ಸುದ್ದಿ ಹೊರಬಂದಿದ್ದೇಕೆ? ನೈಸ್ ಅಕ್ರಮದ ವಿಚಾರ ಜನರ ಮುಂದೆ ಹೋಗಬಾರದು ಎಂಬ ಉದ್ದೇಶದಿಂದಲೇ ಸ್ಟಿಂಗ್ ಆಪರೇಷನ್ ಕುರಿತ ಸುದ್ದಿ ಹರಿಬಿಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರ ನೀಡಬೇಕು. ಸ್ಟಿಂಗ್ ಆಪರೇಷನ್ ವಿಚಾರವಾಗಿ ನಾನು ಈಗಾಗಲೇ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದೇನೆ. ನೈಸ್ ವಿಚಾರದಲ್ಲಿ ನಡೆದ ಬೆಳವಣಿಗೆಗಳ ಕುರಿತು ಸಾರ್ವಜನಿಕರಿಗೆ ಸ್ಪಷ್ಟನೆ ಸಿಗಬೇಕು ಎಂದು ಒತ್ತಾಯಿಸಿದರು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm