ಬ್ರೇಕಿಂಗ್ ನ್ಯೂಸ್
14-10-26 12:54 pm HK News Staffer ದೇಶ - ವಿದೇಶ
ಮುಂಬೈ, ಅ.14: ಟೈರ್ ಪಂಕ್ಚರ್ ಆದ ಬಿಎಂಡಬ್ಲ್ಯು ಕಾರಿನ ವಿಮೆ ಪಡೆಯಲು 14 ವರ್ಷಗಳ ಕಾನೂನು ಹೋರಾಟ ನಡೆಸಿದ ವ್ಯಕ್ತಿಯೊಬ್ಬರು ಕೊನೆಗೂ ಜಯ ದಕ್ಕಿಸಿಕೊಂಡಿದ್ದು, 70 ಲಕ್ಷ ರೂ. ಪರಿಹಾರ ಪಡೆದಿದ್ದಾರೆ.
2012ರ ಮಾರ್ಚ್ 8ರಂದು ಕಾರು ಮಾಲೀಕ ರವಿಕಾಂತ್ ಪಾಟೀಲ್ ಮಹಾರಾಷ್ಟçದ ಧುಲ್ಖೇಡ್ನ ಹೆದ್ದಾರಿಯಲ್ಲಿ ರಾತ್ರಿ ತೆರಳುವಾಗ ಕಾರು ಪಂಕ್ಚರ್ ಆಗಿತ್ತು. ಅಗತ್ಯಕ್ಕೆ ಮೆಕ್ಯಾನಿಕ್ ಸಿಗದ ಕಾರಣ ರಸ್ತೆ ಬದಿಯ ಡಾಬಾ ಬಳಿ ಕಾರು ನಿಲ್ಲಿಸಿ ಲಾಕ್ ಮಾಡಿ ಬೆಳಗ್ಗೆ ಬಂದು ಪಂಕ್ಚರ್ ಹಾಕಿಸೋಣ ಎಂದು ಬೇರೆ ಕಾರಿನಲ್ಲಿ ಮನೆಗೆ ತೆರಳಿದ್ದರು. ಬೆಳಗ್ಗೆ ಸ್ಥಳಕ್ಕೆ ಬಂದಾಗ ಕಾರು ಸಂಪೂರ್ಣ ಸುಟ್ಟು ಕರಕಲಾಗಿತ್ತು. ಘಟನೆಯನ್ನು ಪ್ರಶ್ನಿಸಿ ಗ್ರಾಹಕರ ಆಯೋಗಕ್ಕೆ ರವಿಕಾಂತ್ ದೂರು ಕೊಟ್ಟಿದ್ದರು.
ಕಾರು ಮಾಲೀಕ ಪಂಕ್ಚರ್ ಆದ ಕಾರನ್ನು ರಸ್ತೆ ಬದಿ ಬಿಟ್ಟು ಹೋಗಬಾರದಿತ್ತು ಎಂದು ತಿಳಿಸಿ, ಇನ್ಶೂರೆನ್ಸ್ ನೀಡಲು ನಿರಾಕರಿಸಿತ್ತು. ಇದಕ್ಕೆ ಗ್ರಾಹಕ ಆಯೋಗವು ಕೆಟ್ಟುಹೋದ ವಾಹನವನ್ನು ನಿರ್ಜನ ಪ್ರದೇಶದಲ್ಲಿ ಬಿಡುವುದರ ಬಗ್ಗೆ ಪಾಲಿಸಿಯು ಯಾವುದೇ ನಿಷೇಧ ವಿಧಿಸಿರಲಿಲ್ಲ. ರಾತ್ರಿ ವೇಳೆ ಹೈವೇನಲ್ಲಿ ವಾಹನ ಕೆಟ್ಟು ನಿಂತಾಗ ಅಥವಾ ಪಂಕ್ಚರ್ ಆದಾಗ ಮಾಲೀಕರು ತಮ್ಮ ವೈಯಕ್ತಿಕ ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಬೇಕಾಗುತ್ತದೆ ಎಂದು ಆಯೋಗ ಹೇಳಿದೆ.
ಇದೇ ವೇಳೆ, ಮಾಲೀಕರು ಕಾರನ್ನು ಲಾಕ್ ಮಾಡಿ ಸಮಂಜಸವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ವಿಮಾ ಪರಿಹಾರ 70 ಲಕ್ಷ ರೂ. ಜೊತೆಗೆ ಬಡ್ಡಿ, ಮಾನಸಿಕ ವೇದನೆ ಮತ್ತು ಕಿರುಕುಳಕ್ಕಾಗಿ ಹೆಚ್ಚುವರಿ ಹಣವನ್ನು ಪಾವತಿಸುವಂತೆ ಇನ್ಶೂರೆನ್ಸ್ ಕಂಪನಿಗೆ ಆದೇಶಿಸಿದೆ. ಬರೋಬ್ಬರಿ 14 ವರ್ಷಗಳ ದೀರ್ಘ ಕಾನೂನು ಹೋರಾಟದ ಬಳಿಕ, ವಿಮಾ ಮೊತ್ತ 70 ಲಕ್ಷ ರೂ., ಮಾನಸಿಕ ವೇದನೆಗೆ ಪರಿಹಾರವಾಗಿ 50,000 ರೂ. ಹಾಗೂ ದಾವೆ ವೆಚ್ಚಕ್ಕಾಗಿ 25,000 ರೂ. ಸೇರಿ ಒಟ್ಟು 70.75 ಲಕ್ಷ ರೂ. ಹಾಗೂ ಬಡ್ಡಿಯನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm