ಬ್ರೇಕಿಂಗ್ ನ್ಯೂಸ್
15-10-26 03:30 pm HK News Staffer ಕರಾವಳಿ
ಮಂಗಳೂರು, ಅ.15: ನವರಾತ್ರಿ ಸಂಭ್ರಮಕ್ಕೆ ಕಡಲ ನಗರಿ ಮಂಗಳೂರು ಸಿಂಗಾರಗೊಂಡಿರುವಾಗಲೇ ನಗರದ ನಾನಾ ಕಡೆಗಳಲ್ಲಿ ಅನಧಿಕೃತ ಫ್ಲೆಕ್ಸ್, ಕಟೌಟ್ಗಳು ಎದ್ದಿದ್ದು ಇಡೀ ನಗರದ ಸೌಂದರ್ಯವನ್ನೇ ಹಾಳುಗೆಡವಿದೆ. ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲೇ ಫ್ಲೆಕ್ಸ್ಗಳು ಸಾಲಾಗಿ ಹಾಕಿರುವುದು ಅಧಿಕಾರಿಗಳ ಕರ್ತವ್ಯ ನಿಷ್ಠೆಯನ್ನೇ ಪ್ರಶ್ನೆ ಮಾಡುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಅವರ ಹುಟ್ಟುಹಬ್ಬದ ನೆಪದಲ್ಲಿ ನಗರ ಪ್ರವೇಶದ ಪಂಪ್ವೆಲ್, ಕೆಪಿಟಿ ವೃತ್ತದ ಬಳಿ ಬೃಹತ್ ಕಟೌಟ್ ಹಾಕಿರುವುದು ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ.
ಫ್ಲೆಕ್ಸ್ ಅಳವಡಿಸುವುದಕ್ಕೆ ವಿರೋಧ ವ್ಯಕ್ತಪಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಭಕೋರುವ ನೆಪದಲ್ಲಿ ನಾನಾ ಕಡೆ ಫ್ಲೆಕ್ಸ್ ಹಾಕಲಾಗಿದೆ. ಬ್ರಹ್ಮಶ್ರೀ ಶ್ರೀ ನಾರಾಯಣಗುರು ವೃತ್ತದಿಂದ ಕುದ್ರೋಳಿ ರಸ್ತೆಯ ಅಲ್ಲಲ್ಲಿ ಸಿಎಂ ಕಟೌಟ್ ರಾರಾಜಿಸುತ್ತಿವೆ. ಮಣ್ಣಗುಡ್ಡೆ ಜಂಕ್ಷನ್, ಕುದ್ರೋಳಿ ಸಹಿತ ಹಲವು ಕಡೆಗಳಲ್ಲಿ ಸಿಎಂ ಆಗಮನಕ್ಕೆ ಸ್ವಾಗತ ಕೋರಿ ಕಾಂಗ್ರೆಸ್ ಮುಖಂಡರು ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ಫ್ಲೆಕ್ಸ್ ನಿಷೇಧ ಇರುವಾಗ ನಿಯಮ ಪಾಲಿಸಬೇಕಾದ ಪಾಲಿಕೆ ಅಧಿಕಾರಿಗಳೇ ಇದೀಗ ಮೌನ ವಹಿಸಿದ್ದಾರೆ.



ಸಚಿವರ ಹುಟ್ಟುಹಬ್ಬಕ್ಕೂ ಫ್ಲೆಕ್ಸ್ !
ಉಸ್ತುವಾರಿ ಸಚಿವ ಯುಟಿ ಖಾದರ್ ಹುಟ್ಟುಹಬ್ಬದ ನೆಪದಲ್ಲಿ ಈ ಬಾರಿ ನವರಾತ್ರಿ ಸಡಗರದ ನಡುವೆಯೇ ತೊಕ್ಕೊಟ್ಟು, ಪಂಪ್ ವೆಲ್, ಕಂಕನಾಡಿ ಸಹಿತ ಹಲವು ಕಡೆಗಳಲ್ಲಿ ಬೃಹತ್ ಫ್ಲೆಕ್ಸ್, ಕಟೌಟ್ ಗಳನ್ನು ಅನಧಿಕೃತವಾಗಿ ಅಳವಡಿಸಲಾಗಿದೆ. ಸಾರ್ವಜನಿಕರು ಫ್ಲೆಕ್ಸ್ ಹಾಕಿದರೆ ದಂಡ ಮತ್ತು ಕಾನೂನಿನ ಬಗ್ಗೆ ಮಾತನಾಡುವ ಪಾಲಿಕೆ ಅಧಿಕಾರಿಗಳು ಈ್ಮಗ ಜಾಣ ಮೌನ ವಹಿಸಿರುವುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಫುಟ್ಪಾತ್ ನುಂಗಿದ ಫ್ಲೆಕ್ಸ್
ನಗರದಲ್ಲಿ ಸಾರ್ವಜನಿಕರು ನಡೆದಾಡಲೆಂದು ಫುಟ್ಪಾತ್ ಇದ್ದರೂ, ಸದ್ಯ ಇಡೀ ಜಾಗವನ್ನು ಫ್ಲೆಕ್ಸ್ ನುಂಗಿದೆ. ನಗರದ ಪಿವಿಎಸ್ ಜಂಕ್ಷನ್, ಬಿ.ಆರ್. ಅಂಬೇಡ್ಕರ್ ವೃತ್ತ, ಲಾಲ್ ಬಾಗ್, ಉರ್ವಸ್ಟೋರ್, ಕುದ್ರೋಳಿ, ಚಿಲಿಂಬಿ, ಮಲ್ಲಿಕಟ್ಟೆ ಸಹಿತ ವಿವಿಧ ಕಡೆಗಳಲ್ಲಿ ಕುದ್ರೋಳಿ ನವರಾತ್ರಿ ಉತ್ಸವಕ್ಕೆ ಶುಭಕೋರುವ ನೆಪದಲ್ಲಿ ಎಲ್ಲೆಂದರಲ್ಲಿ ಫುಟ್ಪಾತ್ನಲ್ಲೇ ಫ್ಲೆಕ್ಸ್ ಅಳವಡಿಸಲಾಗಿದ್ದು, ಸಾರ್ವಜನಿಕರಿಗೆ ಅಪಾಯ ಉಂಟಾಗುವಂತಿದೆ. ಕೆಲವೊಂದು ವಾಹನ ಸವಾರರಿಗೆ ತಾಗಿ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.
ತ್ಯಾಜ್ಯ ವಿಂಗಡಣೆ ಮಾಡದೆ ನಿಯಮ ಉಲ್ಲಂಘನೆ, ಅಲ್ಲಲ್ಲಿ ತ್ಯಾಜ್ಯ ಎಸೆಯುವವರ ವಿರುದ್ದ ಮಂಗಳೂರು ಮಹಾನಗರ ಪಾಲಿಕೆ ಕಳೆದ ಕೆಲವು ದಿನಗಳಿಂದ ಭಾರೀ ದಂಡ ವಿಧಿಸುತ್ತಿದೆ. ಆದರೆ, ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ದ ಪಾಲಿಕೆಯ ಮೌನ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಪಾಲಿಕೆಯ ಎದುರೇ ಕಟೌಟ್, ಫ್ಲೆಕ್ಸ್ ಗಳು ರಾರಾಜಿಸುತ್ತಿದ್ದರೂ, ಏಕೆ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ಗಳನ್ನು ಹಾಕಿದಾಗ ಅದನ್ನು ತೆರವು ಮಾಡಿ ದಂಡ ಹಾಕುತ್ತಿದ್ದ ಪಾಲಿಕೆಯ ಅಧಿಕಾರಿಗಳು ಈಗ ಮೌನವೇ ಆಭರಣ ಎಂಬಂತಿದ್ದಾರೆ. ಜನಪ್ರತಿನಿಧಿಗಳು ಫ್ಲೆಕ್ಸ್ಗಳನ್ನು ಹಾಕಿದಾಗ ಪರೋಕ್ಷ ರೀತಿಯಲ್ಲಿ ಬೆಂಬಲ ನೀಡುತ್ತಿರುವುದು, ಸಾರ್ವಜನಿಕರು ಹಾಕಿದಾಗ ಮಾತ್ರ ಕಿತ್ತು ಹಾಕುತ್ತಿರುವುದು ಕಾನೂನಿನ ಅಂಕುಶ ಉಳ್ಳವರಿಗಲ್ಲ, ಬಡವರಿಗೆ ಮಾತ್ರ ಎಂಬಂತಾಗಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 03:30 pm
HK News Staffer
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
UT Khader, News, Mangalore: ನವರಾತ್ರಿ ನೆಪದಲ್ಲಿ...
14-10-26 08:40 pm
Kollur Temple News: ಕೊಲ್ಲೂರು ದೇವಸ್ಥಾನದ ಬಳಿ ಅವ...
14-10-26 04:36 pm
14-10-26 09:09 pm
Mangaluru Staffer
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm