ಬ್ರೇಕಿಂಗ್ ನ್ಯೂಸ್
11-07-24 12:17 pm HK News Desk ಕ್ರೀಡೆ
ಮ್ಯೂನಿಕ್, ಜುಲೈ.11: ಯಂಗ್ ಸೆನ್ಸೇಶನ್ 16ರ ಹರೆಯದ ಲ್ಯಾಮಿನ್ ಯಮಾಳ್ ದಾಖಲಿಸಿದ ಅದ್ಭುತ ಗೋಲು ಹಾಗೂ ಡ್ಯಾನಿ ಒಲ್ಮೊ ಮೊದಲಾರ್ಧದಲ್ಲೇ ಬಾರಿಸಿದ ಗೋಲಿನ ನೆರವಿನಿಂದ ಸ್ಪೇನ್ ತಂಡ 2-1 ಗೋಲಿನ ಅಂತರದಿಂದ ಬಲಿಷ್ಠ ಫ್ರಾನ್ಸ್ ತಂಡವನ್ನು ಸೋಲಿಸಿ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಇನ್ನೊಂದು ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೇರಿದೆ.
ಜಿದ್ದಾಜಿದ್ದಿನ ಎರಡನೇ ಸೆಮಿಫೈನಲ್ ನಲ್ಲಿ ಸ್ಪೇನ್ ತಂಡದ ವಿರುದ್ಧ ಫ್ರಾನ್ಸ್ ಗೆ ರ್ಯಾಂಡಲ್ ಕೊಲೊ ಮುವಾನಿ ಆರಂಭದಲ್ಲೇ ಮುನ್ನಡೆ ತಂದಿತ್ತರು. ಎಂಟನೇ ನಿಮಿಷದಲ್ಲಿ ಒಸ್ಮಾನ್ ಡಾಂಬೆಲೆ ನೀಡಿದ ಪಾಸ್ ಅನ್ನು ಕೈಲಿಯಾನ್ ಎಂಬಾಪೆ ಗೋಲ್ ಪೋಸ್ಟ್ ನತ್ತ ಕೊಂಡೊಯ್ದಿದ್ದು ಅದನ್ನು ಮುವಾನಿ ಗೋಲಾಗಿಸಿ ಮುನ್ನಡೆ ತಂದರು. 20ನೇ ನಿಮಿಷದಲ್ಲಿ ಲ್ಯಾಮಿನ್ ಯಮಾಳ್ 25 ಯಾರ್ಡ್ ದೂರದಿಂದ ಒದ್ದ ಚೆಂಡು ಗೋಲು ಪೆಟ್ಟಿಗೆ ಸೇರುವುದರೊಂದಿಗೆ ಸ್ಪೇನ್ ತಂಡ ಸಮಬಲ ಸಾಧಿಸಿತು. ಈ ಮೂಲಕ ಯೂರೋ ಕಪ್ ಇತಿಹಾಸದಲ್ಲಿ ಗೋಲು ಬಾರಿಸಿದ ಅತಿ ಕಿರಿಯ ಆಟಗಾರನೆಂಬ ದಾಖಲೆಯನ್ನು ಯಮಾಳ್ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ನಾಲ್ಕೇ ನಿಮಿಷಗಳ ಅಂತರದಲ್ಲಿ ಸ್ಪೇನ್ ತಂಡಕ್ಕೆ ಡ್ಯಾನಿ ಒಲ್ಮೊ ಎರಡನೇ ಗೋಲು ದಾಖಲಿಸಿ ಮುನ್ನಡೆ ಒದಗಿಸಿದರು. ಇದಾದ ಬಳಿಕ ಫ್ರಾನ್ಸ್ ತಂಡ ಸಾಕಷ್ಟು ಪ್ರತಿರೋಧ ತೋರಿದರೂ ಗೋಲು ಸಮಬಲಗೊಳಿಸಲು ಎದುರಾಳಿ ತಂಡ ಅವಕಾಶ ನೀಡಲಿಲ್ಲ. ಇದರಿಂದ ಎಂಬಾಪೆ ಪಡೆ ಯುರೋ ಕಪ್ ಫೈನಲ್ ಗೇರದೆ ನಿರ್ಗಮಿಸುವಂತಾಯಿತು.
ಇನ್ನೊಂದು ಸೆಮಿಫೈನಲ್ ಹೋರಾಟದಲ್ಲಿ ಇಂಗ್ಲೆಂಡ್ ತಂಡ 2-1ರಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತು. ಬದಲಿ ಆಟಗಾರ ಒಲೀ ವಾಟ್ಕಿನ್ಸ್ 91ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್ ಗೆಲುವಿನ ನಗೆ ಬೀರಿತು. ಪಂದ್ಯದ ಏಳನೇ ನಿಮಿಷದಲ್ಲೇ ನೆದರ್ಲೆಂಡ್ಸ್ ಗೆ ಕ್ಸಾವಿ ಸೈಮನ್ಸ್ ಮುನ್ನಡೆ ಒದಗಿಸಿದರು. ಕೆಲವೇ ನಿಮಿಷಗಳಲ್ಲಿ ಇಂಗ್ಲೆಂಡ್ ನಾಯಕ ಹ್ಯಾರಿ ಕೇನ್ ಇದನ್ನು ಸರಿಗಟ್ಟಿದ್ದರು.
The Euro 2024 final is set and Spain is the favorite heading into Sunday’s meeting with England. The Spaniards emerged as the tournament favorite after beating Germany in a quarterfinal and remain the favorite after getting by France in a semifinal.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm