ಬ್ರೇಕಿಂಗ್ ನ್ಯೂಸ್
01-08-26 05:17 pm HK News Staffer ದೇಶ - ವಿದೇಶ
ನವದೆಹಲಿ, ಆಗಸ್ಟ್ 1: ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಕ್ಯಾನ್ಸರ್ಗೆ ಕಾರಣವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಕಂಪನಿಯು ಸುಮಾರು 53 ಸಾವಿರ ಕೋಟಿ ರೂ. (5.5 ಬಿಲಿಯನ್ ಡಾಲರ್) ಪರಿಹಾರ ನೀಡಲು ಒಪ್ಪಿಕೊಂಡಿದೆ. ಈ ಉತ್ಪನ್ನಗಳಿಂದಾಗಿ ಅಮೆರಿಕ ಒಂದರಲ್ಲೇ 76 ಸಾವಿರ ಮಕ್ಕಳು ಮತ್ತು ವಯಸ್ಕರು ಕ್ಯಾನ್ಸರ್ಗೆ ತುತ್ತಾಗಿದ್ದಾಗಿ ಪ್ರಕರಣ ದಾಖಲಾಗಿದ್ದು ಸುದೀರ್ಘ ವ್ಯಾಜ್ಯದ ಬಳಿಕ ಕಂಪನಿ ಸಂತ್ರಸ್ತರಿಗೆ ಪರಿಹಾರ ನೀಡಲು ಮುಂದಾಗಿದೆ.
ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯ ಟಾಲ್ಕಂ ಪೌಡರ್ ಚಿಕ್ಕ ಮಕ್ಕಳಿಗೆ ಬಳಸುವುದಕ್ಕೆ ಇಡೀ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಕಂಪನಿಯ ಪೌಡರ್ ಬಗ್ಗೆ ಆರೋಪ ಕೇಳಿಬಂದಿದ್ದು ಕ್ಯಾನ್ಸರ್ ಗೆ ಕಾರಣವಾಗುತ್ತಿದೆ ಎನ್ನುವ ಗಂಭೀರ ಆರೋಪ ಅಮೆರಿಕದಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಹಲವು ವರ್ಷಗಳ ವ್ಯಾಜ್ಯದ ಬಳಿಕ ಕಂಪನಿಯು ತನ್ನ ಮೇಲಿನ ಆರೋಪ ನಿರಾಕರಿಸುತ್ತಲೇ ಪರಿಹಾರಕ್ಕಾಗಿ ದೂರು ಸಲ್ಲಿಸಿರುವವರಿಗೆ ಪರಿಹಾರದ ಮೊತ್ತ ನೀಡಲು ಒಪ್ಪಿಗೆ ನೀಡಿರುವುದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.
5.5 ಬಿಲಿಯನ್ ಡಾಲರ್ ಮೊತ್ತವನ್ನು 76 ಸಾವಿರ ಪ್ರಕರಣದಲ್ಲಿ ಸಂತ್ರಸ್ತರಿಗೆ ಹಂಚುವಂತೆ ಕಂಪನಿಯು ಕೋರ್ಟಿನಲ್ಲಿ ಕೇಳಿಕೊಂಡಿದೆ. ಆದಾಗ್ಯೂ ಕಂಪನಿಯ ಉಪಾಧ್ಯಕ್ಷ ಎರಿಕ್ ಹಾಸ್, ಆರೋಪಗಳೆಲ್ಲ ಆಧಾರ ರಹಿತ. ದೀರ್ಘ ಕಾಲದ ವ್ಯಾಜ್ಯವನ್ನು ಮುಗಿಸುವುದಕ್ಕಾಗಿ ಪರಿಹಾರ ಮೊತ್ತವನ್ನು ನೀಡಲು ಬಯಸಿದ್ದೇವೆ ಎಂದಿದ್ದಾರೆ. ಅಲ್ಲದೆ, ಇನ್ನೆರಡು ವರ್ಷದಲ್ಲಿ ಅಂದರೆ 2028ರ ಒಳಗೆ ಇನ್ನೂ ಮೂರು ಬಿಲಿಯನ್ ಡಾಲರ್ ನೀಡುವ ಮೂಲಕ ಎಲ್ಲ ವ್ಯಾಜ್ಯವನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಜಾನ್ಸನ್ ಬೇಬಿ ಪೌಡರ್ ವಿರುದ್ಧ 2009ರಿಂದ ಹಲವು ಕಡೆ ದೂರುಗಳು ದಾಖಲಾಗತೊಡಗಿದ್ದು 2022ರ ವೇಳೆಗೆ ಅಮೆರಿಕ ಸೇರಿದಂತೆ ಜಾಗತಿಕವಾಗಿ ಮಾರಾಟ ಮತ್ತು ಉತ್ಪಾದನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿತ್ತು. ಒವೇರಿಯನ್ ಕ್ಯಾನ್ಸರ್ ಗೆ ಕಾರಣವಾಗುತ್ತಿರುವ ಬಗ್ಗೆ ಪ್ರಬಲ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ 2022ರಲ್ಲಿ ಕಂಪನಿಯ ವಿರುದ್ಧ ಕೋರ್ಟ್ ಚಾಟಿ ಬೀಸಿತ್ತು. ಇದಾಗಿ ಎರಡು ವರ್ಷಗಳ ಬಳಿಕ ದೊಡ್ಡ ಮೊತ್ತದ ಪರಿಹಾರ ನೀಡಿ ಆರೋಪದಿಂದ ಬಚಾವಾಗಲು ಮುಂದಾಗಿದೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm