ಬ್ರೇಕಿಂಗ್ ನ್ಯೂಸ್
28-02-26 05:28 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಬಹುಕಾಲದ ಉದ್ವಿಗ್ನತೆಯ ಬಳಿಕ ಅಮೆರಿಕ- ಇಸ್ರೇಲ್ ಸೇನೆಯು ಇರಾನ್ ಮೇಲೆ ಹಠಾತ್ ದಾಳಿ ಆರಂಭಿಸಿದೆ. ಶನಿವಾರ ಬೆಳಗ್ಗಿನಿಂದಲೇ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಯಾಗಿದೆ. ಇದರ ಬೆನ್ನಲ್ಲೇ ಇರಾನ್ ಕಡೆಯಿಂದ ಅಮೆರಿಕದ ಮಿಲಿಟರಿ ಬೇಸ್ ಇರುವ ಕತಾರ್, ಕುವೈತ್, ಯುಎಇ ಮೇಲೆ ಮಿಸೈಲ್ ದಾಳಿಯಾಗಿದೆ.
ದಕ್ಷಿಣ ಇರಾನ್ ಭಾಗದ ಮಿನಾಬ್ ನಗರದಲ್ಲಿ ಮಿಸೈಲ್ ದಾಳಿಗೆ ಐದು ಬಾಲಕಿಯರು ಸಾವನ್ನಪ್ಪಿದ್ದಾರೆಂದು ಇರಾನ್ ಮಾಧ್ಯಮ ಐಆರ್ ಎನ್ಎ ನ್ಯೂಸ್ ವರದಿ ಮಾಡಿದೆ. ಮಿನಾಬ್ ಸಿಟಿಯಲ್ಲಿ ಇರಾನ್ ಪ್ಯಾರಾ ಮಿಲಿಟರಿ ರೆವೊಲ್ಯುಶನರಿ ಗಾರ್ಡ್ ಬೇಸ್ ಇದ್ದು, ಅದನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿರುವ ಸಾಧ್ಯತೆಯಿದೆ. ಇದೇ ವೇಳೆ, ಇರಾನ್ ಭಾಗದಲ್ಲಿ ಹಲವಾರು ರೆವೊಲ್ಯುಶನರಿ ಗಾರ್ಡ್ ಯೋಧರು ಮೃತಪಟ್ಟಿದ್ದಾರೆ, ದಾಳಿಯಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಇಸ್ರೇಲ್ ಹೇಳಿದೆ.


ಕತಾರ್, ಯುಎಇ ಮೇಲೆ ದಾಳಿಯಾಗಿರುವುದರಿಂದ ಕತಾರಿ ಏರ್ವೇಸ್ ಸೇರಿದಂತೆ ತಮ್ಮ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿದೆ. ಇದೇ ವೇಳೆ, ಇರಾನ್ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ, ತವರು ನೆಲವನ್ನು ರಕ್ಷಿಸಿಕೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ದಾಳಿಗೆ ಪ್ರತಿಯಾಗಿ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮಿಲಿಟರಿಯು, ತಿಂಗಳ ಕಾಲದ ಜಂಟಿ ಯೋಜನೆಯ ಬಳಿಕ ಇರಾನ್ ದೇಶದ ಡಜನ್ನಷ್ಟು ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದಿದೆ.
ಯುಎಇ, ಬೆಹ್ರೈನ್ ಮೇಲೆಯೂ ಇರಾನ್ ಕಡೆಯಿಂದ ಕ್ಷಿಪಣಿ ದಾಳಿಯಾಗಿದ್ದು, ದುಬೈನಲ್ಲಿ ಒಬ್ಬ ಪ್ರಜೆ ಸಾವಿಗೀಡಾಗಿದ್ದಾನೆ. ಹೀಗಾಗಿ ಯುಎಇ ಮತ್ತು ಬೆಹ್ರೈನ್ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿವೆ. ಕತಾರಿನಲ್ಲಿ ಎಲ್ಲ ಪ್ರಜೆಗಳು ತಮ್ಮ ಮನೆ ಅಥವಾ ಕಟ್ಟಡಗಳ ಒಳಗಡೆಯಲ್ಲೇ ಇರುವಂತೆ ಮತ್ತು ಮಿಲಿಟರಿ ಬೇಸ್ ಹತ್ತಿರ ಬರದಂತೆ ಸಲಹೆ ನೀಡಲಾಗಿದೆ. ಇರಾನ್ ಮೇಲೆ ದಾಳಿಯಾಗುತ್ತಿರುವುದರಿಂದ ಅಲ್ಲಿ ಮೊಬೈಲ್ ಇಂಟರ್ನೆಟ್ ಬ್ಯಾನ್ ಮಾಡಲಾಗಿದೆ. ರಾಜಧಾನಿ ಟೆಹ್ರಾನ್ ನಲ್ಲಿ ಹೆಚ್ಚುವರಿ ಭದ್ರತೆ ಏರ್ಪಡಿಸಿದ್ದು, ಖಮೇನಿ ನಿವಾಸಕ್ಕೆ ತೆರಳುವ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ.
ದಾಳಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ನಾವು ಫಿನಿಷ್ ಮಾಡಿದ ಕೂಡಲೇ ನೀವು ಅಧಿಕಾರಕ್ಕೇರಲು ಸಜ್ಜಾಗಿ. ನಿಮ್ಮ ಸರಕಾರವನ್ನು ನೀವೇ ಮಾಡಿಕೊಳ್ಳಿ. ಈಗಿನ ಜನರೇಶನ್ನಿಗೆ ಇದೊಂದು ಅಪೂರ್ವ ಅವಕಾಶ ಎಂದು ಹೇಳಿಕೊಂಡಿದ್ದಾರೆ. ಅಮೆರಿಕವು ಇರಾನ್ ಸುತ್ತಮುತ್ತ ಇರುವ ಕತಾರ್, ಕುವೈತ್, ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿ ತನ್ನ ಮಿಲಿಟರಿ ಬೇಸ್ ಮಾಡಿಕೊಂಡಿದ್ದು, ಇರಾನ್ ಈಗ ಅದನ್ನು ಗುರಿಯಾಗಿಸಿ ದಾಳಿ ಮಾಡತೊಡಗಿದೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am