ಬ್ರೇಕಿಂಗ್ ನ್ಯೂಸ್
25-06-26 09:40 pm HK News Staffer ಕ್ರೈಂ
ಬೆಂಗಳೂರು, ಜೂ 25: ಭಾರತೀಯ ನಗದನ್ನು ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸುವುದಾಗಿ ಟೆಕ್ಕಿಯನ್ನು ಕರೆಯಿಸಿಕೊಂಡು 17.64 ಲಕ್ಷ ಡಕಾಯಿತಿ ಮಾಡಿದ್ದ ಇಬ್ಬರು ಕಾಶ್ಮೀರದ ಪ್ರಜೆಗಳು ಸೇರಿ 12 ಮಂದಿ ಆರೋಪಿಗಳನ್ನು ಸಂಜಯನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್ ಎಂಬುವರು ಹಣ ಕಳೆದುಕೊಂಡಿದ್ದು, ಇವರು ನೀಡಿದ ದೂರಿನ ಮೇರೆಗೆ ಕಾಶ್ಮೀರ ಮೂಲದ ಮುಜಾಮಿಲ್ ಹಾಗೂ ಶೋಯೆಬ್ ಜಾವೀದ್, ಡಿ.ಜೆ.ಹಳ್ಳಿ ರೌಡಿಶೀಟರ್ ವಸೀಂಖಾನ್ ಸೇರಿದಂತೆ ಕಾವಲ್ ಬೈರಸಂದ್ರ ಹಾಗೂ ಆರ್.ಟಿ.ನಗರ ರೆಹಮತ್ ನಗರದ ಆರೋಪಿಗಳನ್ನು ಬಂಧಿಸಲಾಗಿದೆ.
ಡಕಾಯಿತರಿಂದ 13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್ಗಳನ್ನು ವಶಕ್ಕೆ ಪಡೆಯಲಾಗಿದೆ. 12 ಮಂದಿ ಆರೋಪಿಗಳ ಪೈಕಿ ಐವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಉಳಿದ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಕೊಡಿಗೇಹಳ್ಳಿಯ ದೇವಿನಗರದ ನಿವಾಸಿಯಾಗಿರುವ ದೂರುದಾರ ವಿಶ್ವಾಸ್, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ನಗರದಲ್ಲಿ ಕೆಫೆ ತೆರೆಯಲು ಮುಂದಾಗಿದ್ದರು. ಕಿಚನ್ಗೆ ಬೇಕಾದ ವಸ್ತುಗಳು ಚೀನಾ ಹಾಗೂ ಜಪಾನ್ನಲ್ಲಿ ಖರೀದಿಸಿದರೆ ಕಡಿಮೆಗೆ ಸಿಗಲಿದೆ ಎಂದು ಅರಿತುಕೊಂಡಿದ್ದರು. ಈ ವಸ್ತುಗಳನ್ನು ಕೊಂಡುಕೊಳ್ಳಲು ಕ್ರಿಪ್ಟೊ ಕರೆನ್ಸಿ ವ್ಯಾಲೆಟ್ ಮೂಲಕ ಸಂದಾಯ ಮಾಡಬೇಕಿರುವ ವಿಷಯವನ್ನು ಸ್ನೇಹಿತ ಉಮೇಶ್ ಬಳಿ ಹೇಳಿದ್ದರು. ಈ ಬಗ್ಗೆ ಕ್ರಿಪ್ಟೋ ಇಂಡಿಯಾ ಎಫ್ 2ಎಫ್ ವ್ಯಾಟ್ಸಾಪ್ ಗ್ರೂಪ್ನಲ್ಲಿ ಮಾಹಿತಿ ಸಿಗಲಿದೆ ಎಂದು ಉಮೇಶ್ ಹೇಳಿದ್ದರು.
ಒಂದು ತಿಂಗಳ ಹಿಂದೆ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿದ್ದ ವಿಶ್ವಾಸ್, ಕ್ರಿಪ್ಟೊ ಕರೆನ್ಸಿ ಎಕ್ಸ್ ಚೇಂಜ್ ಬಗ್ಗೆ ಗ್ರೂಪ್ನಲ್ಲಿ ವಿಚಾರಿಸಿದ್ದರು. ಜೂ.8ರಂದು ಆರೋಪಿ ಮುಜಾಮಿಲ್ ಕರೆ ಮಾಡಿ ಪರಿಚಯಿಸಿಕೊಂಡು ಭಾರತೀಯ ನಗದನ್ನು ಡಿಜಿಟಲ್ ಕ್ರಿಪ್ಟೊ ಕರೆನ್ಸಿಯಾಗಿ ಬದಲಾಯಿಸಿಕೊಡುವುದಾಗಿ ಹೇಳಿದ್ದ. ಇದರಂತೆ ಮನೆಗೆ ಬಂದ ಆರೋಪಿಯು ನಂಬಿಕೆ ಹುಟ್ಟಿಸಲು ಮೊದಲು 2.5 ಲಕ್ಷ ಹಣವನ್ನ ಕ್ರಿಪ್ಟೊ ಕರೆನ್ಸಿಯಾಗಿ ಪರಿವರ್ತಿಸಿ ವರ್ಗಾವಣೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ನಲ್ಲಿ ಬಂದಿದ್ದ ಮುಜಾಮಿಲ್, ಕಾರಿನಲ್ಲಿ ಕುಳಿತುಕೊಳ್ಳದೆ ಡೋರ್ ಓಪನ್ ಮಾಡಿ ನಿಂತುಕೊಂಡಿದ್ದ. ಕೆಲವೇ ಹೊತ್ತಿನಲ್ಲಿ ಐದಾರು ಬೈಕ್ನಲ್ಲಿ ಸುಮಾರು 12 ಮಂದಿ ಡಕಾಯಿತರು ಕಾರನ್ನು ಅಡ್ಡಗಟ್ಟಿ ತಮ್ಮ ಮೇಲೆ ಹಲ್ಲೆ ಮಾಡಿ ಹಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಂಜಯನಗರ, ಜೆ.ಸಿ.ನಗರ, ಆರ್.ಟಿನಗರ, ಹೆಬ್ಬಾಳ ಇನ್ಸ್ಪೆಕ್ಟರ್ ಒಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿವೆ ಎಂದು ಹಿರಿಯ ಪೊಲೀಸ್ ಆಧಿಕಾರಗಳು ತಿಳಿಸಿದ್ದಾರೆ.
ಕಾಶ್ಮೀರ ಮೂಲದ ಮುಜಾಮಿಲ್, ಶೋಯೆಬ್ ಜಾವೇದ್ ಶೈಕ್ಷಣಿಕ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಕ್ರಿಪ್ಟೊ ಕರೆನ್ಸಿ ವಾಟ್ಸಾಪ್ನಲ್ಲಿ ಸದಸ್ಯರಾಗಿದ್ದರು. ಈ ವೇಳೆ ಸ್ಥಳೀಯ ಆರೋಪಿಗಳನ್ನು ಪರಿಚಯಿಸಿಕೊಂಡಿದ್ದ. ಬಂಧಿತ ಆರೋಪಿಗಳ ಪೈಕಿ ವಸೀಂಖಾನ್ ಡಿ.ಜೆ.ಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ 13ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ರಿಯಾಕತ್ ಷರೀಫ್, ರಿಯಾನ್, ಕರೀಂ ಖಾನ್ ವಿರುದ್ಧ ನಗರ ಹಲವು ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 04:14 pm
HK News Staffer
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
24-08-26 02:35 pm
HK News Staffer
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm
ಬ್ರಹ್ಮಾವರದಲ್ಲಿ ಬೆಚ್ಚಿಬೀಳಿಸುವ ಕೃತ್ಯ ; ಹೆತ್ತ ತಂ...
24-08-26 12:06 pm
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am