ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್ ಟಿಪ್ಪು ಕಟೌಟ್ ಹಾಕಿ ಪಾಕಿಸ್ತಾನ ಪರ ಮುಜಾಹಿದ್ ಹಾಡು ಬಳಕೆ, ವಿಡಿಯೋ ವೈರಲ್ ಬೆನ್ನಲ್ಲೇ ಎಫ್ಐಆರ್

24-08-26 02:35 pm       HK News Staffer   ಕ್ರೈಂ

ಆಗಸ್ಟ್ 26 ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿದ್ದಲ್ಲದೆ, ಪಾಕಿಸ್ತಾನ ಪರವಾದ ಮುಜಾಹಿದ್ ಗುಣಗಾನದ ವಿಡಿಯೋ ಹಾಕಿ ಯುವಕರು ಕುಣಿದಿದ್ದು ರೀಲ್ಸ್ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕ್ಕಮಗಳೂರು, ಆ.24: ಆಗಸ್ಟ್ 26 ರಂದು ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಅಳವಡಿಸಿದ್ದಲ್ಲದೆ, ಪಾಕಿಸ್ತಾನ ಪರವಾದ ಮುಜಾಹಿದ್ ಗುಣಗಾನದ ವಿಡಿಯೋ ಹಾಕಿ ಯುವಕರು ಕುಣಿದಿದ್ದು ರೀಲ್ಸ್ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 

ಟಿಪ್ಪು ರೀತಿಯ ಕಟೌಟ್‌ ಹಾಕಿ ಪಾಕ್‌ ಸೇನೆಯ ಮುಜಾಹಿದ್‌ ಹಾಡು ಬಳಸಿ ರೀಲ್ಸ್‌ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಮುಸ್ಲಿಂ ಯುವಕರು ವಿಡಿಯೋ ಹಂಚಿಕೊಂಡಿದ್ದು ಇನ್ನೊಂದು ಕೋಮನ್ನು ಅಣಕಿಸುವ ಯತ್ನ ಮಾಡಿದ್ದಾರೆ.‌

ಟಿಪ್ಪು ಚಿತ್ರದ ಜೊತೆಗೆ ಪಾಕಿಸ್ತಾನದ ಮುಜಾಹಿದ್‌ ಸಂಬಂಧಿಸಿದ ಹಾಡನ್ನು ಬಳಸಿರೋದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಚಿಕ್ಕಮಗಳೂರು ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಧನರಾಜ್ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಸ್ವಯಂ ದೂರು ದಾಖಲಿಸಿದ್ದಾರೆ.

ಕೋಮು ಸೌಹಾರ್ದ ಕದಡುವ ರೀತಿ ಹಾಡು ಬಳಕೆ ಮಾಡಿ, ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಲು ಯತ್ನಿಸಿದ್ದಾರೆ. ಪಾಕಿಸ್ತಾನದ ಸೈನಿಕರು ಎಂದು ಇರುವ ಹಾಡನ್ನ ಬಳಸಿದ್ದು ಉದ್ದೇಶಪೂರ್ವಕ ದ್ವೇಷ ಹರಡುವ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪಿಎಸ್ಐ ದೂರಿನಂತೆ ಪ್ರಕರಣ ದಾಖಲಾಗಿದೆ. 

ಕೋಮು ಪ್ರಚೋದಕ ಕೃತ್ಯ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಇನ್ಸ್ಟಾ ಪೇಜ್ ವಿರುದ್ಧ ದೇಶ ವಿರೋಧಿ ಕೃತ್ಯ ಹಾಗೂ ಕೋಮು ಪ್ರಚೋದನೆ (BNS 196, 299) ಅಡಿಯಲ್ಲಿ ಸುಮೋಟೋ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆಯೂ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಇಂತಹದ್ದೇ ಕೃತ್ಯ ಕೋಮು ದ್ವೇಷದ ಅಹಿತಕರ ಘಟನೆಗಳಿಗೆ ಕಾರಣವಾಗಿದ್ದವು.