ಬ್ರೇಕಿಂಗ್ ನ್ಯೂಸ್
20-10-26 11:04 am HK News Staffer ಕರ್ನಾಟಕ
ಮೈಸೂರು, ಅ.20 : ನಾಡಹಬ್ಬ ಮೈಸೂರು ದಸರಾದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ವಿಜಯ ದಶಮಿ ಜೋಡುಕರೆ ಕಂಬಳ’ ಸೋಮವಾರ ರಾತ್ರಿ ರೋಚಕ ಓಟಗಳೊಂದಿಗೆ ಸಂಪನ್ನಗೊಂಡಿತು. ಕಂಬಳದ ಕ್ವಾರ್ಟರ್‌ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಹಂತದ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಆಗಮಿಸಿದ್ದರು. ಕೋಣಗಳನ್ನು ಓಡಿಸಲು ಸಮಯ ಮಿತಿ ನಿಗದಿಪಡಿಸಿದ್ದರೂ, ನಿಗದಿತ ಸಮಯಕ್ಕಿಂತ ಸುಮಾರು ಐದು ಗಂಟೆ ತಡವಾಗಿ ಕಂಬಳ ಮುಕ್ತಾಯಗೊಂಡಿತು.
ಕಂಬಳದ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬಹುಮಾನ ವಿತರಿಸಿದರು. ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನ, ದ್ವಿತೀಯ ಬಹುಮಾನವಾಗಿ 8 ಗ್ರಾಂ ಚಿನ್ನ ಹಾಗೂ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದವರಿಗೆ ನಗದು ಬಹುಮಾನ ನೀಡಲಾಯಿತು.
ವಿವಿಧ ವಿಭಾಗಗಳ ವಿಜೇತರ ವಿವರ
ನೇಗಿಲು ಕಿರಿಯ ವಿಭಾಗ
- ಪ್ರಥಮ: ಉಡುಪಿ ಕಕ್ಕುಂಜೆ ರಾಧಾ ನಿಲಯದ ಸಂತೋಷ್ ಶಿವರಾಜ್ ಪೂಜಾರಿಯವರ ಕೋಣ ( ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ)
- ದ್ವಿತೀಯ: ಮುನಿಯಾಲ್ ಉದಯಕುಮಾರ್ ಶೆಟ್ಟಿ (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)
- ತೃತೀಯ: ಉಳೆಪಾಡಿ ಪುಲ್ಲೊಟ್ಟು ಬೀಡಿನ ಉದಯ ಶೆಟ್ಟಿ ‘ಬಿ’ (ಪಣಪೀಲು ಪ್ರವೀಣ್ ಕೋಟ್ಯಾನ್)
- ಚತುರ್ಥ: ಉಳೆಪಾಡಿ ಪುಲ್ಲೊಟ್ಟು ಬೀಡಿನ ಉದಯ ಶೆಟ್ಟಿ ‘ಎ’ (ಪುತ್ತಿಲ ಹೊಸಮನೆ ಚರಣ್ ಪೂಜಾರಿ)
ನೇಗಿಲು ಹಿರಿಯ ವಿಭಾಗ
- ಪ್ರಥಮ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕಾ ಸುದೀಪ್ ಶೆಟ್ಟಿಯವರ ಕೋಣಗಳು (ಕುಂದಬಾರಂದ ಮಾಸ್ತಿಕಟ್ಟೆ ಸ್ವರೂಪ್)
- ದ್ವಿತೀಯ: ಕಕ್ಕೆಪದವು ಪೆಂರ್ಗಾಲಿನ ಬಾಬು ತನಿಯಪ್ಪ ಗೌಡ (ಕಕ್ಕೆಪದವು ಹೃತಿಕ್ ಗೌಡ)
- ತೃತೀಯ: ಮಾಣಿಯ ನಾಗರಾಜ್ ಶೆಟ್ಟಿ (ಬಜೆಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
- ಚತುರ್ಥ: ಹೊಸ್ಮಾರು ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ (ಬಂಬ್ರಾಣಬೈಲು ವಂದಿತ್ ಶೆಟ್ಟಿ)
ಹಗ್ಗ ಕಿರಿಯ ವಿಭಾಗ
- ಪ್ರಥಮ: ಪದವು ಕಾನಡ್ಕದ ಪ್ಲೇವಿ ಡಿಸೋಜ ‘ಬಿ’ (ಕಾವೂರು ದೋಟ ಸುದರ್ಶನ್)
- ದ್ವಿತೀಯ: ಎರ್ಮಾಳ್ ರೋಹಿತ್ ಹೆಗ್ಡೆ (ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ)
- ತೃತೀಯ: ಶಿಬರೂರು ಮುಟ್ಟಿಕಲ್ಲಿನ ಕೀರ್ತನ ರಾಜೇಶ್ ಪಾಣಾರ (ಕಡಂದಲೆ ಮೂಡಾಯಿಬೆಟ್ಟು ರೋಹಿತ್ ಪಾಣಾರ)
- ಚತುರ್ಥ: ಸುರತ್ಕಲ್ ಪಾಂಜಚನ್ಯದ ಯೋಗೀಶ್ ಕರಿಯ ಪೂಜಾರಿ (ಭಟ್ಕಳ ಶಂಕರ)
ಹಗ್ಗ ಹಿರಿಯ ವಿಭಾಗ
- ಪ್ರಥಮ: ಕೊಳಕೆ ಇರ್ವತ್ತೂರಿನ ಭಾಸ್ಕರ ಸುಬ್ಬಯ್ಯ ಕೋಟ್ಯಾನ್ (ಕಕ್ಕೆಪದವು ಪೆಂರ್ಗಾಲಿನ ಕೃತಿಕ್ ಗೌಡ)
- ದ್ವಿತೀಯ: ಎರ್ಮಾಳ್ ಪುಚೊಟ್ಟು ಬೀಡಿನ ಬಾಲಚಂದ್ರ ಲೋಕಯ್ಯ ಶೆಟ್ಟಿ (ಪಡು ಸಾಂತೂರಿನ ಪೃಥ್ವಿರಾಜ್ ಪೂಜಾರಿ)
- ತೃತೀಯ: ಮಾಳ ಆನಂದ ನಿಲಯದ ಶೇಖರ ಎ. ಶೆಟ್ಟಿ (ಉಜಿರೆಯ ಸ್ಪಂದನ್ ಶೆಟ್ಟಿ)
- ಚತುರ್ಥ: ನಂದಳಿಕೆಯ ಶ್ರೀಕಾಂತ್ ಭಟ್ (ಬಂಬ್ರಾಣ ಬೈಲಿನ ವಂದಿತ್)
ಅಡ್ಡಹಲಗೆ ವಿಭಾಗ
- ಪ್ರಥಮ: ಇರುವೈಲು ದೊಡ್ಡಗುತ್ತಿನ ಜಗದೀಶ್ ಎಂ. ಶೆಟ್ಟಿ ‘ಎ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)
- ದ್ವಿತೀಯ: ವಿಟ್ಲ ಕುಂಡಡ್ಕ ಮರುವಾಲದ ಜಯಂತದಾಸ್ (ಉಲ್ಲೂರು ಕಂದಾವರ ಗಣೇಶ್)
- ತೃತೀಯ: ಬೋಳಾರದ ತ್ರಿಶಾಲ್ ಕೆ. ಪೂಜಾರಿ (ಭಟ್ಕಳ ಹರೀಶ್ ನಾಯಕ್)
- ಚತುರ್ಥ: ಇರುವೈಲು ದೊಡ್ಡಗುತ್ತಿನ ಜಗದೀಶ್ ಎಂ. ಶೆಟ್ಟಿ ‘ಬಿ’ (ತೆಕ್ಕಟ್ಟೆ ಸುಧೀರ್ ದೇವಾಡಿಗ)
ಕನೆಹಲಗೆ ವಿಭಾಗ
ಬೈಂದೂರು ಸಸಿಹಿತ್ಲಿನ ವೆಂಕಟ ಪೂಜಾರಿ (ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ) ಹಾಗೂ ವಾಮಂಜೂರು ತಿರುವೈಲುಗುತ್ತಿನ ನವೀನ್‌ಚಂದ್ರ ಆಳ್ವ (ಬೈಂದೂರು ಭಾಸ್ಕರ ದೇವಾಡಿಗ) ಅವರ ಕೋಣಗಳು ಆರೂವರೆ ಕೋಲು ನಿಶಾನೆಗೆ ನೀರು ಹಾಯಿಸಿ ಪ್ರಥಮ ಸ್ಥಾನ ಗಳಿಸಿದವು.
20-10-26 11:04 am
HK News Staffer
ಸಂಪುಟದಲ್ಲಿ ಮಹಿಳೆಗೆ ಸಿಗದ ಸ್ಥಾನ ; ಮಹಿಳಾ ಕಾಂಗ್ರ...
17-10-26 07:30 pm
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
19-10-26 08:41 pm
HK News Staffer
ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನ 10 ವರ್ಷಕ್ಕೆ ಮಿತ...
19-10-26 07:10 pm
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
20-10-26 10:56 am
HK News Staffer
ಉಪ್ಪಿನಂಗಡಿಯಲ್ಲಿ ತಲವಾರು ಝಳಪಿಸಿದ ಗ್ಯಾಂಗ್ ; ಕುಡಿ...
19-10-26 04:20 pm
Actor Tiger Shroff Shot: ಬಾಲಿವುಡ್ ನಟ ಟೈಗರ್ ಶ್...
19-10-26 12:40 am
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm