ಬ್ರೇಕಿಂಗ್ ನ್ಯೂಸ್
17-10-26 12:25 pm HK News Staffer ಕರಾವಳಿ
ಮಂಗಳೂರು, ಅ.17: ಎಂಆರ್ ಪಿಎಲ್ ಮೂರನೇ ಹಂತದ ವಿಸ್ತರಣಾ ಘಟಕದಲ್ಲಿ ಸೆ.30ರಂದು ನಡೆದ ಸ್ಫೋಟ ಘಟನೆಯಲ್ಲಿ 118.76 ಕೋಟಿ ರೂ. ನಷ್ಟವಾಗಿರುವುದಾಗಿ ಕಂಪನಿ ತನ್ನ ತ್ರೈಮಾಸಿಕ ವರದಿಯಲ್ಲಿ ಉಲ್ಲೇಖಿಸಿದೆ.
ಬುಧವಾರ ನಡೆದ ನಿರ್ದೇಶಕ ಮಂಡಳಿ ಸಭೆಯ ನಂತರ ಈ ಕುರಿತು ಸ್ಟಾಕ್ ಎಕ್ಸ್ಚೇಂಜಸ್ಗೆ ವರದಿ ಸಲ್ಲಿಸಲಾಗಿದೆ. ರಿಫೈನರಿ ಸಂಕೀರ್ಣದ ಮೂರನೇ ಹಂತದ ಕಾಕರ್ ಹೈಡ್ರೋಟ್ರೀಟರ್ ಘಟಕದಲ್ಲಿ (ಸಿಎಚ್ಟಿಯು) ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಉತ್ಪಾದನಾ ಘಟಕ ಮತ್ತು ಯಂತ್ರೋಪಕರಣಗಳಿಗೆ ಆಗಿರುವ ಹಾನಿಯ ಆಧಾರದಲ್ಲಿ ನಷ್ಟದ ಪ್ರಮಾಣವನ್ನು ಲೆಕ್ಕ ಹಾಕಲಾಗಿದ್ದು ಇದೆಲ್ಲದರ ಮರುಸ್ಥಾಪನೆಗೆ ₹225 ಕೋಟಿ ವೆಚ್ಚವಾಗಬಹುದು ಎಂದು ತಿಳಿಸಿದೆ. ಹಾನಿಗೊಳಗಾದ ಎಲ್ಲ ಭಾಗಗಳಿಗೂ ವಿಮೆ ಮಾಡಿಸಲಾಗಿತ್ತು ಎಂದು ತಿಳಿಸಲಾಗಿದೆ.

ಸಿಎಚ್ಟಿಯುವಿನಲ್ಲಿ ಸ್ಫೋಟ ಸಂಭವಿಸಿತ್ತು ಎಂದು ಹೇಳಲಾಗಿತ್ತಾದರೂ ವರದಿಯಲ್ಲಿ ಬೆಂಕಿ ಅವಘಡ ಎಂದಷ್ಟೇ ಉಲ್ಲೇಖಿಸಲಾಗಿದೆ. ಕಂಪನಿಗೆ ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 1,881 ಕೋಟಿ ವರಮಾನ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿಗೆ 639 ಕೋಟಿ ವರಮಾನ ಬಂದಿತ್ತು. ಈ ವರ್ಷ ಶೇಕಡ 194ರಷ್ಟು ಏರಿಕೆ ಕಂಡಿದೆ.
ಅರ್ಧ ವಾರ್ಷಿಕ ಅವಧಿಯಲ್ಲಿ ರಫ್ತು ಮೂಲಕ ಬಂದಿರುವ ₹6,327 ಕೋಟಿ ಸೇರಿದಂತೆ ಒಟ್ಟು ₹35,590 ಕೋಟಿ ಆದಾಯ ಲಭಿಸಿದ್ದು ಕಳೆದ ವರ್ಷ ಈ ಅವಧಿಯ ವರಮಾನ ₹25,953 ಕೋಟಿ ಆಗಿತ್ತು. ಕಂಪನಿಯ ಒಟ್ಟು ಉತ್ಪಾದನೆ 4.18 ಮಿಲಿಯ ಟನ್ ಆಗಿದ್ದು ಕಳೆದ ಬಾರಿ ಇದರ ಪ್ರಮಾಣ 4.43 ಮಿಲಿಯನ್ ಟನ್ ಆಗಿತ್ತು ಎಂದು ತಿಳಿಸಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 12:25 pm
HK News Staffer
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am