ಬ್ರೇಕಿಂಗ್ ನ್ಯೂಸ್
23-08-26 05:36 pm HK News Staffer ಕರಾವಳಿ
ಪುತ್ತೂರು, ಆ.23: ಪುತ್ತೂರು ದರ್ಬೆ ಎಂಬಲ್ಲಿನ ಅಂಗಡಿಯೊಂದರಲ್ಲಿ ಇತ್ತೀಚೆಗೆ ನಡೆದ ಗಲಾಟೆಗೆ ಸಂಬಂಧಿಸಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವಂತಹ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ಬಂದ್ ಗೆ ಕರೆಕೊಟ್ಟ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಿನೇಶ್ ಪಂಜಿಗ ಎಂಬ ವ್ಯಕ್ತಿ ವಾಟ್ಸಾಪ್ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟಾಗುವಂತಹ ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶವನ್ನು ಪ್ರಸಾರ ಮಾಡುವ ಮೂಲಕ, ಬಂದ್ ಗೆ ಕರೆಕೊಟ್ಟು, ಜನರು ಅಕ್ರಮಕೂಟ ಸೇರಿ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದ್ದು, ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ ದಿನೇಶ್ ಪಂಜಿಗ ಎಂಬ ವಾಟ್ಸಾಪ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ:100/2026, ಕಲಂ: 353(2),57,189 THE BHARATIYA NYAYA SANHITA (BNS), 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಮತ್ತೊಂದು ಪ್ರಕರಣದಲ್ಲಿ "Sanjeeva Matandoor" ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿ ಸಾಮಾಜಿಕ ಜಾಲತಾಣದ ಮೂಲಕ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕ ವಲಯದಲ್ಲಿ ಭಯವನ್ನುಂಟು ಮಾಡುವಂತಹ ಸಂದೇಶವನ್ನು ಪ್ರಸಾರ ಮಾಡುವ ಮೂಲಕ, ಬಂದ್ ಗೆ ಕರೆಕೊಟ್ಟು, ಜನರು ಅಕ್ರಮ ಕೂಟ ಸೇರಿ ಕಾನೂನುಬಾಹಿರ ಕೃತ್ಯವೆಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದ್ದು, ಸದ್ರಿ ಸಂದೇಶವನ್ನು ಪ್ರಸಾರ ಮಾಡಿದ "Sanjeeva Matandoor" ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ:102/2026, ಕಲಂ: 353(2),57,189 THE BHARATIYA NYAYA SANHITA (BNS), 2023 ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.
ಪ್ರತಿಯೊಬ್ಬರೂ ಪ್ರತಿಭಟನೆ ನಡೆಸುವ ಹಕ್ಕನ್ನು ಹೊಂದಿದ್ದು, ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ನೀಡಲಾಗುವುದು. ಆದರೆ ಪ್ರತಿಭಟನೆಯ ದಿನಾಂಕ ಮತ್ತು ಸಮಯವನ್ನು ಸಮಾಜದ ಸ್ವಾಸ್ತ್ಯಕ್ಕೆ ದಕ್ಕೆಯಾಗುವಂತಹ ಯಾವುದೇ ಅನ್ಯ ಉದ್ದೇಶದಿಂದ ನಿಗದಿಪಡಿಸಿರುವುದು ಕಂಡುಬಂದಲ್ಲಿ, ಅಂತಹವರುಗಳ ವಿರುದ್ದ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ಜರುಗಿಸಲಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am