ಬ್ರೇಕಿಂಗ್ ನ್ಯೂಸ್
01-03-26 09:20 pm HK News Staffer ಕರ್ನಾಟಕ
ಬೆಂಗಳೂರು, ಮಾ.1: ಬಳ್ಳಾರಿಯಿಂದ ಕುಟುಂಬದ ಜೊತೆಗೆ ಟೂರ್ ತೆರಳಿದ್ದ 54 ಮಂದಿ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಬಳ್ಳಾರಿ ಗ್ರಾಮಾಂತರ ಮತ್ತು ಚಿತ್ರದುರ್ಗ ಮೂಲದವರು ಟೂರ್ ವೀಸಾದಲ್ಲಿ ದುಬೈ ತೆರಳಿದ್ದರು. ತಂಡದಲ್ಲಿ 24 ಮಹಿಳೆಯರು ಸೇರಿದಂತೆ ಹಿರಿಯ ನಾಗರಿಕರೂ ಇದ್ದಾರೆ. ಶಾರ್ಜಾ ಸಿಟಿಯಿಂದ ದುಬೈ ಏರ್ಪೋರ್ಟ್ ಬಂದಿದ್ದು, ಅಷ್ಟರಲ್ಲಿ ಏರ್ ಸ್ಟ್ರೈಕ್ ಆಗಿ ವಿಮಾನ ಸಂಚಾರ ರದ್ದುಗೊಂಡಿದೆ.
ಇದರಿಂದಾಗಿ ಪ್ರವಾಸ ತೆರಳಿದ್ದವರು ಅಲ್ಲಿಯೇ ಸಿಕ್ಕಿಬಿದ್ದಿದ್ದು, ಹೊಟೇಲಿನಲ್ಲಿ ದಿನವೊಂದಕ್ಕೆ ಎರಡು ಲಕ್ಷ ರೂ. ನೀಡಿ ಉಳಿದುಕೊಂಡಿದ್ದಾರೆ. ತೆಗೆದುಕೊಂಡು ಹೋಗಿದ್ದ ಹಣ ಮುಗಿದಿದ್ದು, ನಮ್ಮ ಸಹಾಯಕ್ಕೆ ಬರಬೇಕು ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಅವರಲ್ಲಿ ಕೇಳಿಕೊಂಡಿದ್ದಾರೆ. ನಾಗೇಂದ್ರ ಅವರು ಸಿಎಂ ಸಿದ್ದರಾಮಯ್ಯ ಮೂಲಕ ನೆರವು ಕೇಳಿದ್ದು, ದುಬೈನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 2ರ ವರೆಗೆ ವಿಮಾನ ಹಾರಾಟ ನಿರ್ಬಂಧ ಹಾಕಿದ್ದು ಅಲ್ಲಿಯವರೆಗೆ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತನ್ನ ಕುಟುಂಬದ ಜೊತೆಗೆ ದುಬೈ ಟ್ರಿಪ್ ಹೋಗಿದ್ದು, ಮಿಸೈಲ್ ದಾಳಿ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅವರೂ ದುಬೈನಲ್ಲಿ ಪ್ರವಾಸದಲ್ಲಿದ್ದು, ಶನಿವಾರ ವಿಮಾನದಲ್ಲಿ ಬರುವವರಿದ್ದರು. ಹಠಾತ್ ವಿಮಾನ ಸಂಚಾರ ರದ್ದಾಗಿದ್ದರಿಂದ ಅಲ್ಲಿಯೇ ಸಿಲುಕಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನ ಮಕ್ಕಳ ವೈದ್ಯ ಡಾ.ಶಿವರಾಜ್ ದುಬೈನಲ್ಲಿ ಸಿಲುಕಿದ್ದು ತಾವಿರುವ ಹೊಟೇಲ್ ನಲ್ಲಿ ರಾಜ್ಯದ 75 ಜನ ಕನ್ನಡಿಗರು ಇದ್ದಾರೆಂದು ಮಾಹಿತಿ ನೀಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿ ನಿವಾಸಿಗಳಾದ ಪಂಜು, ಜಮುನಾ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ಬೆಹ್ರೈನ್ ರಾಜಧಾನಿ ಮನಾಮಕ್ಕೆ ತೆರಳಿದ್ದವರು ಹಿಂತಿರುಗಿ ಬರಲಾಗದೆ ಸಿಲುಕಿಕೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ಪ್ಯಾರಿಸ್ ತೆರಳುತ್ತಿದ್ದ ಬಾಗಲಕೋಟ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಗಿರೀಶ್ ದುಬೈ ಏರ್ಪೋರ್ಟ್ ನಲ್ಲಿ ಸಿಲುಕಿದ್ದಾರೆ. ಇವರು ದುಬೈ ತೆರಳಿ ಅಲ್ಲಿಂದ ಪ್ಯಾರಿಸ್ ವಿಮಾನದಲ್ಲಿ ಹೋಗಬೇಕಿತ್ತು. ಅಷ್ಟರಲ್ಲಿ ಎಲ್ಲ ವಿಮಾನಗಳ ಸಂಚಾರ ರದ್ದಾಗಿದ್ದರಿಂದ ಅಲ್ಲಿಯೇ ರೂಮ್ ಮಾಡಿ ಉಳಿದುಕೊಂಡಿದ್ದಾರೆ. ಇವರು ಫೆ.28ರಂದೇ ದುಬೈಗೆ ತೆರಳಿದ್ದರು. ಇದಲ್ಲದೆ, ತುರ್ತು ಕೆಲಸ, ಪ್ರವಾಸ ಕಾರಣಕ್ಕೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳಿಗೆ ತೆರಳಿರುವ ಸಾವಿರಾರು ಕನ್ನಡಿಗರಿದ್ದು ವಿಮಾನ ಸಂಚಾರ ರದ್ದಾಗಿದ್ದರಿಂದ ಸಿಕ್ಕಿಬಿದ್ದಿದ್ದಾರೆ.
ಆಯಾ ರಾಷ್ಟ್ರಗಳಿಗೆ ಪ್ರತ್ಯೇಕ ಸಹಾಯವಾಣಿ:
ಇದೇ ವೇಳೆ, ಗಲ್ಫ್ ರಾಷ್ಟ್ರಗಳಲ್ಲಿ ಸಿಕ್ಕಿಬಿದ್ದಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿಗಳನ್ನು ಸ್ಥಾಪಿಸಿದ್ದು, ತುರ್ತು ನಿಗಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಮಾರ್ಚ್ 2ರ ವರೆಗೆ ಗಲ್ಫ್ ರಾಷ್ಟ್ರಗಳು ತಮ್ಮ ವಾಯು ಪ್ರದೇಶವನ್ನು ನಿರ್ಬಂಧಿಸಿದ್ದು, ಕನ್ನಡಿಗರು ಆಯಾ ರಾಷ್ಟ್ರಗಳ ಸ್ಥಳೀಯಾಡಳಿತದ ಮಾರ್ಗದರ್ಶಿಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ. ಸಹಾಯ ಅಗತ್ಯವಿದ್ದವರು ಕರ್ನಾಟಕದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ರಾಜ್ಯದ ಕಂದಾಯ ಇಲಾಖೆಯಿಂದ ಕೋರಲಾಗಿದೆ. ಆಯಾ ರಾಷ್ಟ್ರಗಳಿಗೆ ಪ್ರತ್ಯೇಕ ಸಹಾಯವಾಣಿ ನಂಬರ್ ಮತ್ತು ಜಿಲ್ಲಾ ಕೇಂದ್ರಗಳಿಗೂ ನಂಬರನ್ನು ನೀಡಲಾಗಿದೆ.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm