ಬ್ರೇಕಿಂಗ್ ನ್ಯೂಸ್
15-06-26 11:18 am HK News Staffer ದೇಶ - ವಿದೇಶ
ಮಸ್ಕತ್, ಜೂನ್ 15: ಕೊಲ್ಲಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ತೈಲ ಹಡಗುಗಳ ಮೇಲಿನ ದಾಳಿ ನಡುವೆಯೇ ತಾಂತ್ರಿಕ ದೋಷದಿಂದ ಭಾರತದ ಧ್ವಜವನ್ನು ಹೊಂದಿದ್ದ ನೌಕೆಯೊಂದು ಒಮಾನ್ ಕರಾವಳಿಯಲ್ಲಿ ಮುಳುಗಡೆಯಾಗಿದೆ. ಅದರಲ್ಲಿದ್ದ ಎಲ್ಲಾ 14 ಸಿಬ್ಬಂದಿಯನ್ನು ಭಾನುವಾರ ರಕ್ಷಿಸಲಾಗಿದೆ ಎಂದು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ರಾಯಭಾರ ಕಚೇರಿ, ವಾಣಿಜ್ಯ ನೌಕೆಯಾದ ವಿರಾಟ್ 1ರ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಸಮುದ್ರದಲ್ಲಿ ಮುಳುಗಡೆಯಾಗುತಿತ್ತು. ಈ ವೇಳೆ, ಒಮಾನ್ ಅಧಿಕಾರಿಗಳ ಸಹಕಾರದೊಂದಿಗೆ ಇತರೇ ಹಡಗುಗಳ ಮೂಲಕ ಅದರಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದೆ. ಎಲ್ಲಾ 14 ಮಂದಿ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅವರನ್ನು ಮುಂಬೈಗೆ ಪ್ರಯಾಣಿಸುತ್ತಿದ್ದ 'ಎಂವಿ ಜಬಲ್ ಅಲಿ' ಎಂಬ ಮತ್ತೊಂದು ಸರಕು ಸಾಗಣೆ ನೌಕೆಗೆ ಸ್ಥಳಾಂತರಿಸಲಾಗಿದೆ ಎಂದೂ ಹೇಳಿದೆ. ಕಳೆದ ವಾರ ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿಯನ್ನು ಹೊಂದಿದ್ದ ಮೂರು ಹಡಗುಗಳ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದರು.
ಹೊರ್ಮುಜ್ ನಲ್ಲಿ ಸಿಕ್ಕಿಬಿದ್ದ 13 ಹಡಗು, 563 ಸಿಬಂದಿ
ಇರಾನ್ ಭಾಗದಲ್ಲಿ ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಭಾರತಕ್ಕೆ ಸೇರಿದ 13 ಹಡಗುಗಳು 107 ದಿನಗಳಿಂದ ಸಮುದ್ರದಲ್ಲಿ ಸಿಲುಕಿದ್ದು, 563 ನಾವಿಕರ ಸ್ಥಿತಿ ಅತಂತ್ರವಾಗಿದೆ. ಅನಿಶ್ಚಿತತೆ ಮುಂದುವರಿದಿದ್ದು ಅದರ ಸಿಬಂದಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಫೆ.28ರಂದು ಇರಾನ್ ಮೇಲೆ ಅಮೆರಿಕ ಮೊದಲ ಬಾರಿಗೆ ದಾಳಿ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಹೊರ್ಮುಜ್ ಜಲಸಂಧಿಯನ್ನು ಆಂಶಿಕವಾಗಿ ಇರಾನ್ ಮುಚ್ಚಿದೆ. ಹಾಗಾಗಿ ಭಾರತದ ಒಟ್ಟು 13 ಹಡಗುಗಳು ಅಲ್ಲಿಂದ ಬರಲಾಗದೇ ಸಿಲುಕಿವೆ. ಹೊರ್ಮುಜ್ ಎಡಬದಿಯ ದಂಡೆಯಲ್ಲಿ ಲಂಗರು ಹಾಕಿರುವ ಹಡಗುಗಳಲ್ಲಿ ಸುಮಾರು 329 ನಾವಿಕರು, ದಕ್ಷಿಣದ ಒಮಾನ್ ಬಲಬದಿಯಲ್ಲಿ ಹಡಗುಗಳಲ್ಲಿ 233 ನಾವಿಕರು, ಕಳೆದ 107 ದಿನಗಳಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಸಿಬಂದಿಗೆ ಮಾನಸಿಕ ಸಮಸ್ಯೆ ಸಾಧ್ಯತೆ
ಜಲಸಂಧಿ ಮುಚ್ಚಿರುವುದರಿಂದ 20000 ಕ್ಕೂ ಹೆಚ್ಚು ಸಿಬಂದಿ ಸಮಸ್ಯೆಗೆ ತುತ್ತಾಗಿದ್ದಾರೆ. ದೀರ್ಘ ಕಾಲದಿಂದ ಇವರೆಲ್ಲರೂ ಸಮುದ್ರದಲ್ಲೇ ಸಿಲುಕಿದ್ದರಿಂದ ಮಾನಸಿಕ ಒತ್ತಡಕ್ಕೆ ತುತ್ತಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am