ಬ್ರೇಕಿಂಗ್ ನ್ಯೂಸ್
03-10-26 01:27 pm HK News Staffer ಕರಾವಳಿ
ಮಂಗಳೂರು, ಅ.3: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲು ಉದ್ದೇಶಿಸಿರುವ ‘ದಸರಾ ಕಂಬಳ’ಕ್ಕೆ ಕರಾವಳಿಯ ಪ್ರಸಿದ್ಧ ದೈವಾರಾಧಕ ತಮ್ಮಣ್ಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ತುಳುನಾಡಿನ ದೈವಾರಾಧನೆ ಹಾಗೂ ಸಾಂಪ್ರದಾಯಿಕ ಕಟ್ಟುಪಾಡುಗಳಿಗೆ ವಿರುದ್ಧವಾಗಿದೆ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದು, ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಕಂಬಳಕ್ಕೂ ದೈವಾರಾಧನೆಗೂ ನಂಟು
ಕರಾವಳಿಯ ಕಂಬಳ ಕ್ರೀಡೆಗೂ ದೈವಾರಾಧನೆಗೂ ಅವಿನಾಭಾವ ಸಂಬಂಧವಿದೆ ಎಂಬುದು ತಮ್ಮಣ್ಣ ಶೆಟ್ಟಿ ಅವರ ಅಭಿಪ್ರಾಯ. ಕಂಬಳದ ಗದ್ದೆಗೂ ದೈವ ಸಾನಿಧ್ಯದಷ್ಟೇ ಪವಿತ್ರ ಮಹತ್ವ ನೀಡಲಾಗುತ್ತದೆ. ತುಳುನಾಡಿನಲ್ಲಿ ನವರಾತ್ರಿಯ ಅವಧಿಯನ್ನು ‘ಮಾರ್ನೆಮಿ’ ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೈವಗಳಿಗೆ ವಿಶೇಷ ಪೂಜೆ ಹಾಗೂ ತಂಬಿಲ ಸೇವೆಗಳು ನಡೆಯುತ್ತವೆ ಎಂದು ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಕಂಬಳದ ಕೋಣಗಳನ್ನು ಬೇರೆ ಊರುಗಳಿಗೆ ಕೊಂಡೊಯ್ಯುವುದು ಸಾಂಪ್ರದಾಯಿಕ ದೈವ ನಿಯಮಗಳಿಗೆ ವಿರುದ್ಧವಾಗುತ್ತದೆ ಎಂಬ ನಂಬಿಕೆ ಇದೆ ಎಂದು ತಮ್ಮಣ್ಣ ಶೆಟ್ಟಿ ಹೇಳಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಕಂಬಳ ನಡೆದಿಲ್ಲ
ತುಳುನಾಡಿನ ದೈವಾರಾಧನೆಯ ಸಾಂಪ್ರದಾಯಿಕ ನಿಯಮಗಳ ಪ್ರಕಾರ 12 ಸಂಕ್ರಮಣ, ಚೌತಿ, ಪರ್ಬ ಹಾಗೂ ಬಿಸು ಸೇರಿದಂತೆ ಹಲವು ಸಂದರ್ಭಗಳಲ್ಲಿ ನಿರ್ದಿಷ್ಟ ಕಟ್ಟುಪಾಡುಗಳನ್ನು ಪಾಲಿಸಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಕೋಣಗಳ ಯಜಮಾನರು ತಮ್ಮ ಕುಟುಂಬ ಹಾಗೂ ಗ್ರಾಮ ದೈವಗಳ ನಂಟನ್ನು ಗೌರವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ, ನವರಾತ್ರಿ ಅವಧಿಯಲ್ಲಿ ಕರಾವಳಿಯ ಬಹುತೇಕ ಗದ್ದೆಗಳಲ್ಲಿ ಭತ್ತದ ಬೆಳೆ ಇರುವುದರಿಂದ ಈ ಸಂದರ್ಭದಲ್ಲಿ ಕಂಬಳ ಆಯೋಜಿಸಿದ ಇತಿಹಾಸ ಇಲ್ಲ ಎಂಬ ವಾದವನ್ನೂ ತಮ್ಮಣ್ಣ ಶೆಟ್ಟಿ ಮುಂದಿಟ್ಟಿದ್ದಾರೆ.
‘ಸಂಪ್ರದಾಯವನ್ನು ಮೀರಿ ಕಂಬಳ ನಡೆಸಬಾರದು’
“ಲಾಭಕ್ಕಾಗಿ ಅಥವಾ ಪ್ರಚಾರಕ್ಕಾಗಿ ತುಳುನಾಡಿನ ಸಂಸ್ಕೃತಿ ಮತ್ತು ನಂಬಿಕೆಗಳನ್ನು ಮಾರಾಟ ಮಾಡಬಾರದು. ಸಂಪ್ರದಾಯವನ್ನು ಮೀರಿ ಮೈಸೂರಿನಲ್ಲಿ ಕಂಬಳ ನಡೆಸಿದರೆ ದೈವಕೋಪ ಎದುರಿಸಬೇಕಾಗುತ್ತದೆ” ಎಂದು ತಮ್ಮಣ್ಣ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
ಮೂಲ ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಗೌರವಿಸಿಕೊಂಡೇ ಕಂಬಳ ಆಯೋಜಿಸಬೇಕು ಎಂಬುದು ತಮ್ಮಣ್ಣ ಶೆಟ್ಟಿ ಅವರ ಆಗ್ರಹವಾಗಿದೆ.
The proposed ‘Dasara Kambala’ as part of the Mysuru Dasara celebrations has drawn objections from noted coastal Daivaradhaka Thammanna Shetty, who has argued that organising the traditional buffalo race during Navaratri goes against the customs associated with Daivaradhane and Kambala in Tulunadu.
01-10-26 10:50 pm
HK News Staffer
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
03-10-26 01:00 pm
HK News Staffer
ಹನುಮಾನ್ ಚಾಲೀಸಾ ಜಪಿಸುತ್ತಲೇ ಕಾಕ್ಪಿಟ್ ಬಾಗಿಲು ತೆ...
02-10-26 05:28 pm
ಇಸ್ರೇಲ್ ತೆರಳುತ್ತಿದ್ದ ವಿಮಾನ ಹೈಜಾಕ್ ಯತ್ನ ? ಒಮಾ...
02-10-26 10:23 am
ವಿಮಾನ ಅಪಘಾತದ ತನಿಖಾ ವರದಿಗಳೇ ನೆರವಾಯ್ತು..! ದುಬೈ...
01-10-26 11:46 am
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
03-10-26 01:27 pm
HK News Staffer
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
Sowjanya case, Lokesh Jagalsar: ಸೌಜನ್ಯ ಪ್ರಕರಣ...
02-10-26 10:25 am
Madoor Yusuf Murder Case: ಜೈಲಿನಲ್ಲಿ ಮಾಡೂರು ಯೂ...
01-10-26 10:45 pm
ಏಶ್ಯನ್ ಗೇಮ್ಸ್ ನಲ್ಲಿ ಪೂವಮ್ಮಗೆ ಚಿನ್ನ ; ರಾಜ್ಯ ಸರ...
01-10-26 08:10 pm
03-10-26 03:41 pm
HK News Staffer
Mumbai police, gold chain: ಚಿನ್ನದ ಸರ ನುಂಗಿದ ಕ...
02-10-26 10:19 pm
ಕೊಲ್ಲೂರು ; ಬೀಡಾಡಿ ದನವನ್ನು ಕಾರಿನಲ್ಲಿ ತುಂಬಿಸಿಕೊ...
02-10-26 05:24 pm
113 ಕೆಜಿ ಚಿನ್ನ ಕಳ್ಳಸಾಗಣೆ ಕೇಸ್ ; ರನ್ಯಾ ರಾವ್ಗೆ...
01-10-26 02:31 pm
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am