ಬ್ರೇಕಿಂಗ್ ನ್ಯೂಸ್
01-10-26 11:46 am HK News Staffer ದೇಶ - ವಿದೇಶ
ಟೆಲ್ ಅವೀವ್, ಅ.1: ವಿಮಾನ ಅಪಘಾತಗಳ ತನಿಖೆ ಕುರಿತ ಟಿವಿ ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ ಪ್ರಯಾಣಿಕನೊಬ್ಬ, ಫ್ಲೈದುಬೈ ವಿಮಾನ ತುರ್ತು ಪರಿಸ್ಥಿತಿಗೆ ಸಿಲುಕಿದಾಗ ಅದೇ ಕಾರ್ಯಕ್ರಮದಿಂದ ಪಡೆದ ಜ್ಞಾನವನ್ನು ಬಳಸಿಕೊಂಡು ವಿಮಾನವನ್ನು ನಿಯಂತ್ರಣಕ್ಕೆ ತರಲು ನೆರವಾಗಿದ್ದಾನೆ.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಗೆ ಚಾಕುವಿನಿಂದ ಇರಿದ ಬಳಿಕ ವಿಮಾನ ಹಠಾತ್ತನೆ ಕೆಳಮುಖವಾಗಿ ಚಲಿಸತೊಡಗಿತ್ತು. ಸುಮಾರು ಒಂದು ನಿಮಿಷದಲ್ಲಿ ವಿಮಾನವು ಹಾರಾಟದ ಎತ್ತರದ ಅರ್ಧದಷ್ಟು ಭಾಗವನ್ನು ಕಳೆದುಕೊಂಡಿತ್ತು.
ಘಟನೆಯ ವೇಳೆ ಕಾಕ್‌ಪಿಟ್ ಗೆ ನುಗ್ಗಿದ ಪ್ರಯಾಣಿಕರು ಹಾಗೂ ಸಿಬ್ಬಂದಿಯೊಬ್ಬರು ಆರೋಪಿಯನ್ನು ಹತೋಟಿಗೆ ತಂದರು. ಇದೇ ವೇಳೆ ಇತರ ಸಿಬ್ಬಂದಿ ವಿಮಾನದ ನಿಯಂತ್ರಣವನ್ನು ಮರಳಿ ಪಡೆದರು. ಬಳಿಕ ವಿಮಾನದ ಮಾರ್ಗವನ್ನು ಬದಲಿಸಿ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.
ಈ ಘಟನೆಯಲ್ಲಿ ಮಧ್ಯಪ್ರವೇಶಿಸಿದ್ದ ಪ್ರಯಾಣಿಕ ಯಾನೀವ್ ಹಯೂನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಪ್ರಧಾನಿ, ಹಯೂನ್ ಅವರನ್ನು ತಬ್ಬಿಕೊಂಡು ‘ಹೀರೋ’ ಎಂದು ಕರೆದಿದ್ದಾರೆ.






ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಚಾಕುವಿನಿಂದ ಇರಿದ ಬಳಿಕ ತಾನು ಹಾಗೂ ಇತರ ಪ್ರಯಾಣಿಕರು ಕಾಕ್‌ಪಿಟ್ ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾಗಿ ಹಯೂನ್ ತಿಳಿಸಿದ್ದಾರೆ. ಗಾಯಗೊಂಡ ಪೈಲಟ್ ಕಾಕ್‌ಪಿಟ್ ಬಾಗಿಲಿಗೆ ಬಿದ್ದಿದ್ದರಿಂದ ಒಳಗೆ ಪ್ರವೇಶಿಸಲು ಕಷ್ಟವಾಗಿತ್ತು. ಕಾಕ್‌ಪಿಟ್ ಪ್ರವೇಶಿಸಿದಾಗ, ಪೈಲಟ್ ಸೀಟಿನಲ್ಲಿ ಯಾವುದೇ ಪೈಲಟ್‌ಗಳು ಇರಲಿಲ್ಲ. ಒಬ್ಬರು ನೆಲದ ಮೇಲೆ ಇದ್ದರು. ಮತ್ತೊಬ್ಬರು ಫಲಕದ ಬಳಿ ಇದ್ದರು. ದಾಳಿಕೋರ ವಿಮಾನವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿರುವಂತೆ ಕಂಡುಬಂದ” ಎಂದು ಅವರು ಹೇಳಿದರು.
ಘರ್ಷಣೆ ಕೆಲವೇ ಸೆಕೆಂಡುಗಳಲ್ಲಿ ನಡೆದಿತ್ತು. ದಾಳಿಕೋರನನ್ನು ಹಿಡಿದು ಕಾಕ್ ಪಿಟ್ ನಿಂದ ಹೊರಗೆ ಎಳೆದುಕೊಂಡು ಹೋದ ಬಳಿಕ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತೆ ಕಾಕ್‌ಪಿಟ್‌ಗೆ ತೆರಳಿದ್ದಾಗಿ ಹಯೂನ್ ಹೇಳಿದರು.
ಒಳಹೋದ ಕೂಡಲೇ ದಾಳಿಕೋರನನ್ನು ನೋಡಿದ್ದು ಆತನನ್ನು ಹಿಡಿದು, ಉಸಿರುಗಟ್ಟಿಸಿ ಅಲ್ಲಿಂದ ಹೊರಗೆ ಎಳೆದಿದ್ದೇನೆ. ಅಷ್ಟರಲ್ಲಿ ವಿಮಾನದ ಮುಂಭಾಗ ಕೆಳಮುಖವಾಗಿತ್ತು. ವಿಮಾನ ನಿಷ್ಕ್ರಿಯಗೊಳಿಸಲು ಆತ ನಿಯಂತ್ರಣ ಸಾಧನಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದ. ನಾವು ಇಸ್ರೇಲ್ ವಾಯುಪ್ರದೇಶವನ್ನು ಪ್ರವೇಶಿಸಿದ್ದರೆ, ಪರಿಸ್ಥಿತಿ ದುರಂತದಲ್ಲಿ ಅಂತ್ಯಗೊಳ್ಳುತ್ತಿತ್ತು ಎಂದು ನನಗೆ ಅನ್ನಿಸುತ್ತದೆ” ಎಂದು ಹಯೂನ್ ಹೇಳಿದರು.
ವಿಮಾನವನ್ನು ಮತ್ತೆ ನಿಯಂತ್ರಣಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ತಮಗೆ ತಿಳಿದಿತ್ತು. ನಾನು ‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಹಾಗಾಗಿ ಹ್ಯಾಂಡಲಿಂಗ್ ಬಗ್ಗೆ ತಿಳಿದಿತ್ತು. ವಿಮಾನ ಅಪಘಾತಗಳಿಗೆ ಕಾರಣವಾಗುವ ಅಂಶಗಳು ಹಾಗೂ ತುರ್ತು ಸಂದರ್ಭಗಳಲ್ಲಿ ವಿಮಾನದ ನಿಯಂತ್ರಣ ಹೇಗೆ ಮರಳಿ ಪಡೆಯಲಾಗುತ್ತದೆ ಎಂಬುದನ್ನು ಕಾರ್ಯಕ್ರಮದಲ್ಲಿ ವಿವರಿಸುತ್ತಾರೆ. ಅದರಿಂದ ತನಗೆ ದೊರೆತಿದ್ದ ಅರಿವು ಈ ತುರ್ತು ಸಂದರ್ಭದಲ್ಲಿ ನೆರವಾಯಿತು ಎಂದು ಹಯೂನ್ ಹೇಳಿದ್ದಾರೆ.
ನೀವು ಮಹಾನ್ ವೀರರು - ನೆತನ್ಯಾಹು
ನೆತನ್ಯಾಹು ಅವರನ್ನು ಭೇಟಿಯಾಗುವ ವೇಳೆ ಹಯೂನ್ ಅವರ ಬಟ್ಟೆಗಳಲ್ಲಿ ಇನ್ನೂ ರಕ್ತದ ಕಲೆಗಳಿದ್ದವು. ರಕ್ತದ ಕಲೆಗಳಿಗಾಗಿ ಅವರು ಕ್ಷಮೆ ಯಾಚಿಸಿದಾಗ, ನೆತನ್ಯಾಹು ಅದನ್ನು ಲೆಕ್ಕಿಸದೆ ಅವರ ಕಾರ್ಯವನ್ನು ಶ್ಲಾಘಿಸಿದರು. “ನಿಮ್ಮನ್ನು ನೋಡಿದಾಗ ನನಗೆ ಸಿಂಹವೊಂದು ಕಾಣುತ್ತದೆ. ನೀವು ಒಬ್ಬ ಮಹಾನ್ ವೀರರು. ನೀವು ಮಾಡಿದ ಕೆಲಸ ನಿಜಕ್ಕೂ ನಂಬಲಸಾಧ್ಯವಾದುದು. ನೀವು ವಿಮಾನದ ಪ್ರಯಾಣಿಕರನ್ನು ಮಾತ್ರವಲ್ಲದೆ, ಇನ್ನೂ ಅನೇಕರ ಪ್ರಾಣವನ್ನು ಉಳಿಸಿದ್ದೀರಿ” ಎಂದು ನೆತನ್ಯಾಹು ಮೆಚ್ಚುಗೆ ತೋರಿದರು.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 10:25 am
HK News Staffer
Mrpl fire accident, Church Damage: ಎಂಆರ್ ಪಿಎಲ...
30-09-26 10:24 pm
ಅನುದಾನ ಮಂಜೂರು ವಿಚಾರದಲ್ಲಿ ಮೊಂಡಾಟ! ಕೋಟೆಕಾರು ಪ....
30-09-26 09:44 pm
suresh kumar, ut khadar, urdhu habba: ವಿಧಾನಸೌ...
30-09-26 09:41 pm
Mrpl fire, One dead: ಎಂಆರ್ ಪಿಎಲ್ ತೈಲ ಸ್ಥಾವರದಲ...
30-09-26 05:33 pm
01-10-26 11:10 am
HK News Staffer
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am