ಬ್ರೇಕಿಂಗ್ ನ್ಯೂಸ್
03-10-26 03:41 pm HK News Staffer ಕ್ರೈಂ
ಬೆಂಗಳೂರು, ಅ.3 : ಬೆಂಗಳೂರಿನಲ್ಲಿ ಫ್ಲಾಟ್ ಗಳನ್ನು ನೀಡುತ್ತೇನೆಂದು ಹೇಳಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಸೂಕ್ತ ಸಮಯಕ್ಕೆ ಫ್ಲಾಟ್ಗಳನ್ನು ನೀಡಲು ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಓಜೋನ್ ಅರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಪ್ರವರ್ತಕ ಎಸ್. ವಾಸುದೇವನ್ ಅವರನ್ನು ಬಂಧಿಸಿದ್ದಾರೆ.
ಬೆಂಗಳೂರು ವಲಯ ಕಚೇರಿಯು ವಾಸುದೇವನ್ ಅವರನ್ನು ಬೆಂಗಳೂರಿನ ವಿಶೇಷ PMLA ಕೋರ್ಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರನ್ನು ವಿಚಾರಣೆಗಾಗಿ 14 ದಿನಗಳ ED ಕಸ್ಟಡಿಗೆ ನೀಡಿದೆ.
ED ಪ್ರಕಾರ, ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ, ನಕಲಿ ಮತ್ತು ಪಿತೂರಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಹಲವಾರು FIR ಗಳನ್ನು ದಾಖಲಿಸಲಾಗಿದೆ. ಇದಲ್ಲದೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ದೆಹಲಿಯ CBI ಆರ್ಥಿಕ ಅಪರಾಧಗಳ ವಿಭಾಗವು ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ FIR ದಾಖಲಿಸಿದೆ. ಮನೆ ಖರೀದಿದಾರರಿಗೆ ಫ್ಲಾಟ್ಗಳನ್ನು ಪಡೆಯಲು ಆಕರ್ಷಕ ಕೊಡುಗೆಗಳನ್ನು ನೀಡಿರುವ ಬಗ್ಗೆ ಉಲ್ಲೇಖಿಸಿದೆ. ಫ್ಲಾಟ್ ಸ್ವಾಧೀನ ಪಡೆಯುವ ವರೆಗೆ ನಿರ್ಮಾಣ ಪೂರ್ವದ ಇಎಂಐಗಳನ್ನು ಪಾವತಿಸುವ ಭರವಸೆಯನ್ನು ನೀಡಿದ್ದರು. ಇವರನ್ನು ನಂಬಿ, ಗ್ರಾಹಕರು ಫ್ಲಾಟ್ಗಳನ್ನು ಬುಕ್ ಮಾಡಿ ದೊಡ್ಡ ಮೊತ್ತವನ್ನು ಠೇವಣಿ ಇಟ್ಟಿದ್ದರು. ಆದರೆ ಕಂಪನಿಯು ಯೋಜನೆಯನ್ನು ಸಮಯಕ್ಕೆ ಪೂರ್ಣಗೊಳಿಸಲು ವಿಫಲವಾಗಿತ್ತು.
ಗ್ರಾಹಕರಿಗೆ ಫ್ಲಾಟ್ಗಳನ್ನು ನೀಡಲಾಗಿರಲಿಲ್ಲ. ಅಲ್ಲದೆ, ಅವರ ಠೇವಣಿಗಳನ್ನೂ ಹಿಂತಿರುಗಿಸಲಾಗಿಲ್ಲ ಎಂದು ಇಡಿ ಆರೋಪಿಸಿದೆ. ಕಂಪನಿ ಮತ್ತು ಅದರ ಪ್ರವರ್ತಕರು ಮನೆ ಖರೀದಿದಾರರಿಂದ ಸುಮಾರು 927.22 ಕೋಟಿ ರೂ. ಸಂಗ್ರಹಿಸಿದ್ದು, ಆದರೆ ಈ ಹಣವನ್ನು ವಿವಿಧ ಮೂಲಗಳಿಗೆ ತಿರುಗಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದಲ್ಲಿ ಇಡಿ ಈ ಹಿಂದೆ ಕ್ರಮ ಕೈಗೊಂಡಿತ್ತು. 2025ರ ಆಗಸ್ಟ್ 1ರಂದು, ಬೆಂಗಳೂರು ವಲಯ ಕಚೇರಿ PMLA ಅಡಿಯಲ್ಲಿ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ, ತನಿಖೆಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2025ರ ಅಕ್ಟೋಬರ್ 4ರಂದು ED ತಾತ್ಕಾಲಿಕವಾಗಿ ಸುಮಾರು 423.378 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ಪ್ರಕರಣದಲ್ಲಿ ED ಇತರ ಓಝೋನ್ ಗ್ರೂಪ್ ಕಂಪನಿಗಳ ಮೇಲೂ ತನಿಖೆ ನಡೆಸುತ್ತಿದೆ. ಓಝೋನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್, ಓಝೋನ್ ರಿಯಾಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಝೋನ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧವೂ ಸಿಬಿಐ ಮೂರು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸಿದೆ. ಎಸ್. ವಾಸುದೇವನ್ ಈ ಮೂರು ಕಂಪನಿಗಳ ಸಾಮಾನ್ಯ ನಿರ್ದೇಶಕರು. ಮನೆ ಖರೀದಿದಾರರಿಂದ ಪಡೆದ ಹಣವನ್ನು ಯಾವ ಕಂಪನಿಗಳು ಅಥವಾ ವ್ಯಕ್ತಿಗಳ ಮೂಲಕ ವಿವಿಧ ಹಂತಗಳಲ್ಲಿ ತಿರುಗಿಸಲಾಯಿತು. ನಂತರ ಅದನ್ನು ಎಲ್ಲಿಗೆ ಬಳಸಲಾಯಿತು ಎಂಬುದರ ಕುರಿತು ED ತನಿಖೆ ನಡೆಸುತ್ತಿದೆ.
The Enforcement Directorate (ED) has arrested S. Vasudevan, chairman, managing director and promoter of Ozone Urbana Infra Developers Pvt. Ltd., in connection with a money-laundering investigation into alleged fraud involving homebuyers. Vasudevan was arrested on September 30 under Section 19 of the Prevention of Money Laundering Act (PMLA).
08-10-26 08:00 pm
HK News Staffer
B.Y. Vijayendra: ಸ್ಟಿಂಗ್, ಡಿಂಗ್ ಆಪರೇಷನ್ ಮಾ...
08-10-26 04:38 pm
ಜನಸಾಮಾನ್ಯರು ಅಪಘಾತದಲ್ಲಿ ಸತ್ತರೆ 5 ಲಕ್ಷ ಕೊಡಕ್ಕಾಗ...
07-10-26 10:45 pm
HD Kumaraswamy, DK Shivakumar: ಡಿಕೆಶಿ ಸಿಎಂ ಆಗ...
07-10-26 09:16 pm
ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚ...
06-10-26 10:46 pm
08-10-26 08:03 pm
HK News Staffer
ಭಾರತೀಯ ಪೈಲಟ್ ಸಾಹಸಕ್ಕೆ ಅಮೆರಿಕ ಸಂಸತ್ ಗೌರವ ; 17...
07-10-26 01:10 pm
ದೆಹಲಿಯಲ್ಲಿ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ;...
06-10-26 11:04 pm
London Flight, Chicago Flight: ದುಬೈ ವಿಮಾನ ಅಪಹ...
06-10-26 02:46 pm
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
08-10-26 04:30 pm
HK News Staffer
Santhosh laad, Araga jnanendra ಕಾರ್ಮಿಕ ಇಲಾಖೆಯ...
08-10-26 04:27 pm
ಆಟೋದಲ್ಲಿ 48 ಗ್ರಾಂ ಚಿನ್ನ ಬಿಟ್ಟುಹೋದ ಮಹಿಳೆ ; ‘ಚಿ...
08-10-26 12:06 pm
Kural Tulu Touch, Tulu lipi: ತುಳು ಲಿಪಿಗೆ ಡಿಜಿ...
07-10-26 02:39 pm
ಸಿಲಿಂಡರ್ ಸ್ಫೋಟಕ್ಕೆ ತಾಯಿ, 3 ವರ್ಷದ ಮಗು ಬಲಿ ; ಮೂ...
07-10-26 02:21 pm
08-10-26 08:44 pm
HK News Staffer
ಹೆದ್ದಾರಿ ದಾಟುತ್ತಿದ್ದ ಕುರಿ-ಮೇಕೆಗಳ ಹಿಂಡಿಗೆ ಲಾರಿ...
08-10-26 08:07 pm
Online game, Death: ಆನ್ಲೈನ್ ಗೇಮ್ಗಾಗಿ 4 ಲಕ್ಷ...
08-10-26 04:56 pm
CBI ಹೆಸರಲ್ಲಿ ಬೆದರಿಕೆ, ‘ಡಿಜಿಟಲ್ ಅರೆಸ್ಟ್’ ನಾಟಕ...
08-10-26 11:08 am
ಮಂಗಳೂರು ರೈಲಿನಲ್ಲಿ ಲ್ಯಾಪ್ಟಾಪ್, ಚಿನ್ನದ ಸರ ಕಳವು...
08-10-26 10:59 am