ಬ್ರೇಕಿಂಗ್ ನ್ಯೂಸ್
01-10-26 08:10 pm HK News Staffer ಕರಾವಳಿ
ಮಂಗಳೂರು, ಅ.1: ಮಂಗಳೂರಿನ ಹೆಮ್ಮೆಯ ಕುವರಿ ಎಂ.ಆರ್ ಪೂವಮ್ಮ ಏಶ್ಯನ್ ಗೇಮ್ಸ್ 4-400 ಮೀಟರ್ಸ್ ವುಮನ್ಸ್ ರಿಲೇಯಲ್ಲಿ ಚಿನ್ನದ ಪದಕ ಪಡೆದಿದ್ದು ಇಡೀ ರಾಜ್ಯಕ್ಕೆ ಹೆಮ್ಮೆ ತರುವಂತೆ ಮಾಡಿದ್ದಾರೆ. ಏಶ್ಯನ್ ಗೇಮ್ಸ್ ಅತ್ಲೆಟಿಕ್ಸ್ ನಲ್ಲಿ ಈ ಬಾರಿ ಇವರಿಗೆ ಮಾತ್ರ ಚಿನ್ನ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಪೂವಮ್ಮ ಸಾಧನೆಯನ್ನು ನಗಣ್ಯವಾಗಿಸಿದ್ದು ಒಂದು ಪ್ರಶಂಸೆಯ ಮಾತನ್ನೂ ಆಡಿಲ್ಲ.
ಈ ಬಗ್ಗೆ ಸ್ವತಃ ಪೂವಮ್ಮ ಹೆತ್ತವರು ಬೇಸರ ವ್ಯಕ್ತಪಡಿಸಿದ್ದಾರೆ. ಪೂವಮ್ಮ ತಾಯಿ ಜಾಜಿ ಮಾಧ್ಯಮದ ಮುಂದೆ ಬೇಸರ ವ್ಯಕ್ತಪಡಿಸಿದ್ದು, ಆಕೆಗೀಗ 36 ವರ್ಷ. ಕಳೆದ 20 ವರ್ಷಗಳಿಂದ ಅತ್ಲೆಟಿಕ್ಸ್ ನಲ್ಲಿ ಶ್ರಮ ಹಾಕುತ್ತಿದ್ದಾಳೆ. ಆದರೆ ರಾಜ್ಯ ಸರ್ಕಾರದಿಂದ ಸರಿಯಾದ ಪ್ರೋತ್ಸಾಹ ಸಿಕ್ಕಿಲ್ಲ. ಬೇರೆ ರಾಜ್ಯಗಳಲ್ಲಿ ಅತ್ಲೀಟ್ ಗಳಿಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಆಕೆ ಇದನ್ನು ಹೇಳಿ ತುಂಬ ಬೇಜಾರು ಮಾಡಿದ್ಲು. ನನ್ನೊಂದಿಗೆ ಇರುವವರಿಗೆ ಸಚಿವರು ಕರೆ ಮಾಡಿದ್ದಾರೆ. ಆದರೆ ನನಗೆ ಯಾರು ಕೂಡ ಫೋನ್ ಮಾಡಿಲ್ಲ ಎಂದು ಬೇಸರ ಹೇಳಿಕೊಂಡಿದ್ದಾಳೆಂದು ಜಾಜಿ ಬೇಜಾರು ಹೇಳಿಕೊಂಡರು.
ಕ್ಯಾಶ್ ಪ್ರೈಸ್ ಕೊಡುವುದು ಒಂದು ಸೈಡ್ ಇರಲಿ, ಈ ಬಾರಿ ಇವರಿಗೆ ಮಾತ್ರ ದೇಶದಲ್ಲಿ ಚಿನ್ನ ಸಿಕ್ಕಿದೆ. ಆದರೆ ರಾಜ್ಯ ಸರಕಾರದಿಂದ ಇದಕ್ಕಾಗಲೀ ಒಂದು ವಿಶಸ್ ಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿನವರೇ ಆಗಿದ್ದರೂ ಒಂದು ಕರೆ ಮಾಡಿಲ್ಲ. ಉತ್ತರ ಪ್ರದೇಶ, ಕೇರಳದಲ್ಲಿ ಹೆಚ್ಚು ಪ್ರೋತ್ಸಾಹ ಕೊಡುತ್ತಾರೆ, ದೊಡ್ಡ ಮೊತ್ತದ ಬಹುಮಾನ ಪ್ರಕಟಿಸಿದ್ದಾರೆ. ನಮ್ಮಲ್ಲಿ ಒಂದು ಕರೆ ಮಾಡಲು ಪುರುಸೊತ್ತು ಸಿಕ್ಕಿಲ್ಲ.
ಪೂವಮ್ಮ ಕಠಿಣ ತರಬೇತಿಯಿಂದ ಈ ಸಾಧನೆ ಮಾಡಿದ್ದಾಳೆಂಬ ಹೆಮ್ಮೆ ನಮಗಿದೆ. ಅತ್ಲೆಟಿಕ್ಸ್ ಅನ್ನುವುದು ಆಕೆಗೆ ಫ್ಯಾಶನ್ ಆಗಿಬಿಟ್ಟಿದೆ. 3-4 ವರ್ಷಗಳಿಂದ ಮಾಡಿದ ಶ್ರಮಕ್ಕೆ ಈಗ ಫಲ ಸಿಕ್ಕಿದೆ. ನಾವು ಮಧ್ಯಮ ವರ್ಗದವರಾಗಿದ್ದು, ತರಬೇತಿಗಾಗಿ ಬಹಳಷ್ಟು ಖರ್ಚು ಆಗುತ್ತದೆ. ಸರಕಾರದಿಂದ ಬೆಂಬಲ ಸಿಕ್ಕಿದರೆ ಸಾಧನೆಗೆ ಸ್ಫೂರ್ತಿಯಾಗುತ್ತದೆ. ಆದರೆ ರಾಜ್ಯ ಸರಕಾರದಿಂದ ಕನಿಷ್ಠ ಗುರುತಿಸುವ ಕೆಲಸವೂ ಆಗಿಲ್ಲ ಎನ್ನುವುದಷ್ಟೇ ಬೇಜಾರು ಎಂದು ಜಾಜಿ ಅಳಲು ಹೇಳಿಕೊಂಡಿದ್ದಾರೆ.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 08:10 pm
HK News Staffer
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
MRPL ಸ್ಫೋಟದ ಬೆನ್ನಲ್ಲೇ ನೆಲ್ಲಿದಡಿ ಗುತ್ತು ಚರ್ಚೆ...
01-10-26 03:04 pm
Sowjanya case, STI: ಸೌಜನ್ಯಾ ಪ್ರಕರಣ ಮರುತನಿಖೆ ;...
01-10-26 12:53 pm
Mrpl Fire, Mangalore, ut khadar: MRPL ಸ್ಫೋಟ ಪ...
01-10-26 10:25 am
01-10-26 02:31 pm
HK News Staffer
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am