ಬ್ರೇಕಿಂಗ್ ನ್ಯೂಸ್
01-10-26 03:04 pm HK News Staffer ಕರಾವಳಿ
ಮಂಗಳೂರು, ಅ.1: MRPL ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಮತ್ತು ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಲ್ಲಿ ಪೆರ್ಮುದೆಯ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವದ ನುಡಿ ಮತ್ತೆ ಚರ್ಚೆಗೆ ಬಂದಿದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೈವಸ್ಥಾನ ಹಾಗೂ MSEZ ವ್ಯಾಪ್ತಿಯ ಭೂ ವಿವಾದದ ಹಿನ್ನೆಲೆಯನ್ನು ಸ್ಥಳೀಯರು ಅಗ್ನಿ ಅವಘಡ ಘಟನೆಯೊಂದಿಗೆ ತಳಕು ಹಾಕುತ್ತಿದ್ದಾರೆ.
ಬಜಪೆ ಗ್ರಾಮದ ನೆಲ್ಲಿದಡಿ ಗುತ್ತು ತುಳುನಾಡಿನ ಪ್ರಮುಖ ದೈವಾರಾಧನಾ ಕ್ಷೇತ್ರಗಳಲ್ಲಿ ಒಂದಾಗಿದೆ. MSEZ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಸಂದರ್ಭದಲ್ಲಿ ಈ ಪ್ರದೇಶದ ಹಲವು ಗ್ರಾಮಗಳ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಈ ವೇಳೆ ಮನೆಗಳು, ಗದ್ದೆಗಳು, ಶಾಲೆಗಳು, ಧಾರ್ಮಿಕ ಕೇಂದ್ರಗಳು, ನಾಗಬನಗಳು ಹಾಗೂ ದೈವಸ್ಥಾನಗಳು ಆಪೋಶನಕ್ಕೆ ಒಳಗಾಗಿದ್ದವು.
800 ವರ್ಷಗಳ ಇತಿಹಾಸದ ನೆಲ್ಲಿದಡಿ ಗುತ್ತು
2006ರಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯದ ಅಭಿವೃದ್ಧಿಗಾಗಿ ಬಜಪೆ, ಬಾಳ, ಕುತ್ತೆತ್ತೂರು, ಪೆರ್ಮುದೆ ಹಾಗೂ ಕಳವಾರು ಸೇರಿದಂತೆ ಹಲವು ಗ್ರಾಮಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ ನೆಲ್ಲಿದಡಿ ಗುತ್ತುವಿನ ಕಾಂತೇರಿ ಜುಮಾದಿ ದೈವಸ್ಥಾನದ ವಿಚಾರದಲ್ಲಿ ವಿವಾದ ಮುಂದುವರಿದಿತ್ತು. ಸ್ಥಳೀಯರ ಪ್ರಕಾರ, ದೈವಸ್ಥಾನದ ಜಾಗವನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಹಲವು ಬಾರಿ ಪ್ರಯತ್ನಗಳು ನಡೆದಿದ್ದವು. 2016ರಲ್ಲಿ ಸ್ಥಳವನ್ನು ತೆರವುಗೊಳಿಸುವ ಪ್ರಯತ್ನ ನಡೆದಾಗಲೂ ವಿರೋಧ ವ್ಯಕ್ತವಾಗಿತ್ತು. ಬಳಿಕ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ದೈವಸ್ಥಾನವನ್ನು ಉಳಿಸಿಕೊಂಡು ನಿತ್ಯ ಪೂಜೆಗೆ ಅವಕಾಶ ಕಲ್ಪಿಸಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ದೈವಾರಾಧನೆಗೆ ನಿರ್ಬಂಧದ ಆರೋಪ
2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯಲ್ಲಿ ದೈವಾರಾಧನೆಗೆ ಸಂಬಂಧಿಸಿದಂತೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಹೂವು-ನೀರು ಅರ್ಪಿಸುವುದು ಹಾಗೂ ಸಂಕ್ರಮಣದ ಪೂಜೆಗೆ ಪ್ರವೇಶದ ವಿಚಾರದಲ್ಲಿ ಕಂಪನಿ ಕಡೆಯಿಂದ ಆಕ್ಷೇಪ ವ್ಯಕ್ತವಾಗಿತ್ತು. ಆನಂತರ, ‘ನೆಲ್ಲಿದಡಿ ಗುತ್ತು ಉಳಿಸಿ’ ಅಭಿಯಾನದ ಬಳಿಕ ಸೀಮಿತ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಕಾಂತೇರಿ ಜುಮಾದಿ ದೈವದ ನುಡಿಯಲ್ಲಿ ಕಂಪನಿ ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ದೈವವು ತನ್ನ ಸ್ಥಾನ ಹಾಗೂ ಮಣ್ಣನ್ನು ಉಳಿಸಿಕೊಳ್ಳುವ ಕುರಿತು ಎಚ್ಚರಿಕೆ ನೀಡಿತ್ತು. ನನ್ನ ಸ್ಥಾನ ಕೆಡವಿದರೆ ಬೆಂಕಿ ಉಗುಳುತ್ತೇನೆಂದು ದೈವದ ನುಡಿಯಾಗಿತ್ತೆಂದು ಚರ್ಚಿಸುತ್ತಿದ್ದಾರೆ. ಅಲ್ಲದೆ, ಒಂದು ವರ್ಷದೊಳಗೆ ತೀರ್ಮಾನ ನೀಡುವುದಾಗಿ ಹಾಗೂ ಜಾಗವನ್ನು ದೈವಸ್ಥಾನದ ಹೆಸರಿಗೆ ನೀಡದಿದ್ದರೆ ಪರಿಣಾಮ ಎದುರಾಗಲಿದೆ ಎಂಬ ರೀತಿಯಲ್ಲಿ ನುಡಿ ನೀಡಿತ್ತು ಎಂದು ದೈವಾರಾಧಕರು ಹೇಳುತ್ತಿದ್ದಾರೆ.
ಹಿಂದೆಯೂ ಅಗ್ನಿ ಅವಘಡದ ಚರ್ಚೆ
2021ರಲ್ಲಿ MSEZ ವ್ಯಾಪ್ತಿಯ ಕ್ಯಾಟಸಿಂಥ್ ಕಾರ್ಖಾನೆಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದನ್ನೂ ಸ್ಥಳೀಯರು ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ MRPLನಲ್ಲಿ ಸಂಭವಿಸಿದ ಸ್ಫೋಟದ ಬಳಿಕ ಹಿಂದಿನ ಘಟನೆಗಳನ್ನೂ ದೈವದ ನುಡಿಯೊಂದಿಗೆ ಜೋಡಿಸಿ ಚರ್ಚಿಸಲಾಗುತ್ತಿದೆ.
A major blast and fire at the Mangalore Refinery and Petrochemicals Limited (MRPL) facility has revived discussions in coastal Karnataka surrounding the Nellidadi Guthu shrine and the long-running land and worship-related dispute in the MSEZ area. Local residents and devotees are drawing a connection between the recent incident and statements they say were made during a daiva ritual at the historic shrine.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 08:10 pm
HK News Staffer
Manish Karkada, MRPL: ಎಂಆರ್ ಪಿಎಲ್ ಅಗ್ನಿ ಅವಘಡ...
01-10-26 06:19 pm
MRPL ಸ್ಫೋಟದ ಬೆನ್ನಲ್ಲೇ ನೆಲ್ಲಿದಡಿ ಗುತ್ತು ಚರ್ಚೆ...
01-10-26 03:04 pm
Sowjanya case, STI: ಸೌಜನ್ಯಾ ಪ್ರಕರಣ ಮರುತನಿಖೆ ;...
01-10-26 12:53 pm
Mrpl Fire, Mangalore, ut khadar: MRPL ಸ್ಫೋಟ ಪ...
01-10-26 10:25 am
01-10-26 02:31 pm
HK News Staffer
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am