Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ದಿನ ಬರಲಿದೆ, ಹೊಸ ಸಾಲ ಪಡೆಯಬೇಡಿ, ಎಮರ್ಜೆನ್ಸಿ ಫಂಡ್ ಎತ್ತಿಟ್ಟುಟ್ಟುಕೊಳ್ಳಿ ; ಆರ್ಥಿಕ ಸಲಹೆಗಾರ ಮುತ್ತುಕೃಷ್ಣನ್

05-10-26 08:56 pm       HK News Staffer   ದೇಶ - ವಿದೇಶ

ಜಗತ್ತಿನಲ್ಲಿ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುವ ದಿನಗಳು ಬರಲಿವೆ. ಹೀಗಾಗಿ ಸದ್ಯಕ್ಕೆ ಜನರು ಹೊಸ ಸಾಲ ಪಡೆಯುವುದು, ದೀರ್ಘಾವಧಿಯ ಆರ್ಥಿಕ ಯೋಜನೆಗಳನ್ನು ಮಾಡದಿರುವುದೇ ಉತ್ತಮ. ಯಾವುದಕ್ಕೂ ಮೂರು ವರ್ಷಗಳ ಅವಧಿಗೆ ಒಂದಷ್ಟು ಹಣವನ್ನು ಎಮರ್ಜೆನ್ಸಿಗೆ ಅಂತ ತೆಗೆದಿಡುವುದು ಒಳ್ಳೆಯದು ಎಂದು ಚೆನ್ನೈ ಮೂಲದ ಮ್ಯೂಚ್ವಲ್ ಫಂಡ್ ಡಿಸ್ಟ್ರಿಬ್ಯೂಟರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರ್ಥಿಕ ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದಾರೆ.

ಚೆನ್ನೈ, ಅ.5: ಜಗತ್ತಿನಲ್ಲಿ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡುವ ದಿನಗಳು ಬರಲಿವೆ. ಹೀಗಾಗಿ ಸದ್ಯಕ್ಕೆ ಜನರು ಹೊಸ ಸಾಲ ಪಡೆಯುವುದು, ದೀರ್ಘಾವಧಿಯ ಆರ್ಥಿಕ ಯೋಜನೆಗಳನ್ನು ಮಾಡದಿರುವುದೇ ಉತ್ತಮ. ಯಾವುದಕ್ಕೂ ಮೂರು ವರ್ಷಗಳ ಅವಧಿಗೆ ಒಂದಷ್ಟು ಹಣವನ್ನು ಎಮರ್ಜೆನ್ಸಿಗೆ ಅಂತ ತೆಗೆದಿಡುವುದು ಒಳ್ಳೆಯದು ಎಂದು ಚೆನ್ನೈ ಮೂಲದ ಮ್ಯೂಚ್ವಲ್ ಫಂಡ್ ಡಿಸ್ಟ್ರಿಬ್ಯೂಟರ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರ್ಥಿಕ ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದಾರೆ.

ಈ ಬಗ್ಗೆ ಪೋಸ್ಟ್ ಮಾಡಿರುವ ದಂಡಪಾಣಿ, ನಾನೇನು ಭವಿಷ್ಯ. ನುಡಿಯುವುದಕ್ಕೆ ನಾಸ್ಟ್ರಾಡಾಮಸ್ ಅಲ್ಲ. ಆದರೆ ಕಳೆದ ಎರಡು ವರ್ಷಗಳಿಂದ ನಾನೇನು ಹೇಳುತ್ತ ಬಂದಿದ್ದೆನೋ ಅದು ನಿಜವಾಗುತ್ತಿದೆ. ಈಗ 9ನೇ ಬಾರಿಗೆ ಅದನ್ನೇ ಹೇಳುತ್ತಿದ್ದೇನೆ. ಮೂರು ವರ್ಷಗಳಿಗೆ ನಿಮ್ಮ ಜೀವನದ ಸಂಪೂರ್ಣ ವೆಚ್ಚಕ್ಕೆ ಆಗುವಷ್ಟು ದುಡ್ಡನ್ನು ಪ್ರತ್ಯೇಕ ಎತ್ತಿಡುವುದಕ್ಕೆ ಸಲಹೆ ನೀಡುತ್ತೇನೆ. ಯಾವುದೇ ಹೊಸ ಸಾಲ ಮಾಡಬೇಡಿ. ರಿಯಲ್ ಎಸ್ಟೇಟ್ ಅಥವಾ ಮನೆ ಖರೀದಿಸುವುದಕ್ಕೆಂದು ಸಾಲ ಮಾಡಿಕೊಳ್ಳುವುದು ಬೇಡ ಎಂದು ಹೇಳಿದ್ದಾರೆ.

ಇರುವ ಕೆಲಸ, ಹುದ್ದೆಗಳನ್ನು ಉಳಿಸಿಕೊಂಡು ನಿಗದಿತ ಆದಾಯ ಬರುವಂತೆ ನೋಡಿಕೊಳ್ಳಿ. ಆರ್ಥಿಕ ನಷ್ಟದಿಂದಾಗಿ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದ್ದು ಇದರಿಂದ ಆದಾಯಕ್ಕೆ ತೊಂದರೆಯಾಗಲಿದೆ. ಹಾಗಾಗಿ ಆದಷ್ಟು ನಿಶ್ಚಿತ ಆದಾಯ ಇರುವಂತೆ ನೋಡಿಕೊಳ್ಳಲು ಆದ್ಯತೆ ಕೊಡಿ. ಹಾಗಂತ, ಆಕಾಶ ಕೆಳಗೆ ಬೀಳುತ್ತೆ ಅಂತ ಹೇಳಕ್ಕೆ ಹೊರಟಿಲ್ಲ. ಆದರೆ ಆ ರೀತಿಯ ಕ್ರೈಸಿಸ್ ಇಡೀ ಜಗತ್ತಿನಲ್ಲಿ ಆಗತೊಡಗಿದೆ. ಭವಿಷ್ಯದಲ್ಲೂ ಈ ರೀತಿಯ ಆರ್ಥಿಕ ಕುಸಿತ ಮುಂದುವರಿಯಲಿದೆ. ಹೀಗಾಗಿ ಕಷ್ಟದ ದಿನಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಭವಿಷ್ಯದಲ್ಲಿ ಒಳ್ಳೆಯ ದಿನಗಳೂ ಬರಲಿದ್ದು, ಈ ರೀತಿಯ ಆರ್ಥಿಕ ಕುಸಿತ ಸಾಮಾನ್ಯ ಸೈಕಲ್ ಇದ್ದಂತೆ ಎಂದು ಮುತ್ತುಕೃಷ್ಣನ್ ದಂಡಪಾಣಿ ಹೇಳಿದ್ದಾರೆ.

ಜಾಲತಾಣದಲ್ಲಿ ಇವರ ಹೇಳಿಕೆಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ಮಧ್ಯಮ ವರ್ಗದ ಜನರು ಮೂರು ವರ್ಷಕ್ಕೆ ಸಾಕಾಗುವಷ್ಟು ಎಮರ್ಜೆನ್ಸಿ ಫಂಡ್ ಎತ್ತಿಡುವುದು ಕಷ್ಟ. ಮೂರು ತಿಂಗಳಿಗೆ ಮಾಡುವುದೇ ಕಷ್ಟ ಇರುವಾಗ ಮೂರು ವರ್ಷದ ಮಾತನಾಡುವುದು ಮೂರ್ಖತನ. ಇದು ಜನಸಾಮಾನ್ಯರಿಗೆ ದೊಡ್ಡ ಟಾರ್ಗೆಟ್ ಎಂದು ಕೆಲವರು ಟೀಕಿಸಿದ್ದಾರೆ.

Chennai-based mutual fund distributor and Congress leader Rahul Gandhi’s economic adviser Muthakrishnan Dhandapani has advised people to exercise caution amid what he describes as a worsening global economic situation. He has suggested avoiding new loans and setting aside enough money to cover living expenses for up to three years as an emergency reserve.