ಬ್ರೇಕಿಂಗ್ ನ್ಯೂಸ್
01-08-20 02:12 pm Headline Karnataka News Network ಕ್ರೀಡೆ
ಮುಂಬಯಿ: ಐಪಿಎಲ್ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ. ಸೆ. 19ರಿಂದ ನ. 8ರ ವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ. ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಹಾಗೆಯೇ ಬಿಸಿಸಿಐ ಕೂಡ ಕೆಲವು ವಿಷಯಗಳಲ್ಲಿ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಲಿದೆ. ಸಭೆಯಲ್ಲಿ ಚರ್ಚೆಗೊಳಗಾಗುವ ಕೆಲವು ಮಹತ್ವದ ಸಂಗತಿಗಳು ಹೀಗಿವೆ…
ವೇಳಾಪಟ್ಟಿ
ಕೂಟದ ದಿನಾಂಕ ಈಗಾಗಲೇ ಅಂತಿಮಗೊಂಡಿದೆ. ಆದರೆ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕು. ಇದು ಖಚಿತಗೊಂಡರೆ ಫ್ರಾಂಚೈಸಿಗಳಿಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಲು ಅನುಕೂಲವಾಗುತ್ತದೆ. ಯುಎಇಯಲ್ಲಿರುವ 3 ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಫ್ರಾಂಚೈಸಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯ.
ನೀತಿ, ನಿಯಮಗಳು
ಎಲ್ಲ ಫ್ರಾಂಚೈಸಿಗಳಿಗೆ ಹಾಗೂ ಬಿಸಿಸಿಐಗೆ ಇರುವ ದೊಡ್ಡ ತಲೆನೋವು ಕೊರೊನಾ. ಸಾಮಾನ್ಯವಾಗಿ ಐಪಿಎಲ್ ನಡೆಸಲು ಬಿಸಿಸಿಐ ತನ್ನದೇ ಆದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಹೊಂದಿರುತ್ತದೆ. ಈಗ ಕೊರೊನಾ ಇರುವುದರಿಂದ ಅದಕ್ಕೆ ತಕ್ಕಂತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಜೈವಿಕ ಸುರಕ್ಷಾ ವಲಯ, ಯುಎಇಯ ಏಕಾಂತವಾಸದ ನಿಯಮ, ಅಭ್ಯಾಸ ಹಾಗೂ ಪಂದ್ಯದ ವೇಳೆ ಎಷ್ಟು ಜನರಿಗೆ ಒಟ್ಟಿಗೆ ಇರಬಹುದು, ಕೂಟದ ವೇಳೆ ಬಿಸಿಸಿಐನ ವೈದ್ಯರ ಮಾತೇ ಅಂತಿಮವೇ ಅಥವಾ ಫ್ರಾಂಚೈಸಿಗಳ ಪ್ರತ್ಯೇಕ ವೈದ್ಯರಿಗೆ ಅಧಿಕಾರವಿರುತ್ತದೆಯೇ… ಇಂತಹ ಹಲವು ಪ್ರಶ್ನೆಗಳು ಫ್ರಾಂಚೈಸಿಗಳ ಮುಂದಿವೆ.
ವಿದೇಶಿ ಆಟಗಾರರ ಲಭ್ಯತೆ?
ಟಿ20 ವಿಶ್ವಕಪ್ ರದ್ದಾಗುತ್ತಿದ್ದಂತೆಯೆ ಎಲ್ಲ ದೇಶಗಳಲ್ಲಿ ಟಿ20 ಲೀಗ್ ದಿಢೀರನೆ ಆರಂಭವಾಗಿವೆ. ಆದ್ದರಿಂದ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಸಮಯಕ್ಕೆ ಸರಿಯಾಗಿ ಲಭ್ಯರಾಗುವುದು, ಅವರು ಯುಎಇಯ ಕೊರೊನಾ ನಿಯಮಗಳನ್ನು ದಾಟಿ ಆಟಕ್ಕೆ ಲಭ್ಯವಾಗುವುದು… ಇವೆಲ್ಲ ವಿಮರ್ಶಿಸಬೇಕಾದ ಸಂಗತಿಗಳಾಗಿವೆ.
ವಿಂಡೀಸ್ ಆಟಗಾರರು ಸೆ. 10ಕ್ಕೆ ಸಿಪಿಎಲ್ ಮುಗಿಸಿ ಐಪಿಎಲ್‌ಗೆ ಬರಬೇಕು. ಹಾಗೆಯೇ ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್ ಇದೆ. ಆಸ್ಟ್ರೇಲಿಯ-ಇಂಗ್ಲೆಂಡ್ ನಡುವೆ ಸೀಮಿತ ಓವರ್‌ಗಳ ಸರಣಿ ಮುಗಿಯುವುದೇ ಸೆ. 15ಕ್ಕೆ. ಅವರು ಅದೇ ದಿನ ಯುಇಎಗೆ ಬಂದರೂ ಕನಿಷ್ಠ ಒಂದು ವಾರ ಕೂಟಕ್ಕೆ ಲಭ್ಯರಿರುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೆಚ್ಚಿರುವುದರಿಂದ ಅಲ್ಲಿ ವಿಮಾನಗಳನ್ನು ನಿಷೇಧಿಸಲಾಗಿದೆ. ಆಫ್ರಿಕಾ ಆಟಗಾರರನ್ನು ಕರೆಸಿಕೊಳ್ಳಲು ಏನು ದಾರಿ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕಾಗಿದೆ.
ಕುಟುಂಬಕ್ಕೆ ಅವಕಾಶ ನೀಡಬೇಕೇ?
ಬಹುಮುಖ್ಯವಾಗಿರುವ ಇನ್ನೊಂದು ಪ್ರಶ್ನೆಯೆಂದರೆ, ಆಟಗಾರರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಒಯ್ಯಲು ಅವಕಾಶವಿದೆಯೇ ಎನ್ನುವುದು. ಕೋವಿಡ್ ನಿಂದಾಗಿ ಈ ಪ್ರಶ್ನೆ ಉದ್ಭವಿಸಿದೆ. ಕುಟುಂಬದವರನ್ನು ಒಯ್ಯದಿದ್ದರೆ 2 ತಿಂಗಳಿಗೂ ದೀರ್ಘ ಕಾಲ ಆಟಗಾರರು ಪರಿವಾರದ ಸದಸ್ಯರಿಂದ ದೂರವಿರಬೇಕಾಗುತ್ತದೆ ಎನ್ನುವುದು ಒಂದು ಸಮಸ್ಯೆ. ಒಯ್ದರೆ ಕುಟುಂಬ ಸದಸ್ಯರು ಯುಎಇಯ ಹೊಟೇಲ್ ಕೊಠಡಿಗಳಲ್ಲಿ ಬಂಧಿಗಳಾಗಬೇಕಾಗುತ್ತದೆ ಎನ್ನುವ ಇಕ್ಕಟ್ಟು! ಈ ಬಗ್ಗೆ ರವಿವಾರದ ಸಭೆಯಲ್ಲಿ ಬಿಸಿಸಿಐ ಖಚಿತ ಉತ್ತರ ಕಂಡುಕೊಳ್ಳಬೇಕಾಗಿದೆ.
16-10-25 04:44 pm
HK News Desk
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
ರಘು ದೀಕ್ಷಿತ್ ಜೀವನದಲ್ಲಿ ಎರಡನೇ ಇನ್ನಿಂಗ್ಸ್ ; 50ರ...
15-10-25 03:32 pm
15-10-25 11:02 pm
HK News Desk
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
ಕರೂರು ಕಾಲ್ತುಳಿತ ಪ್ರಕರಣ ; ಸಿಬಿಐ ತನಿಖೆಗೆ ಒಪ್ಪಿಸ...
14-10-25 11:11 am
16-10-25 01:11 pm
Mangalore Correspondent
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
ಬೈಂದೂರಿನಲ್ಲಿ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು ;...
15-10-25 12:12 pm
ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಹೈಕೋರ್ಟ್...
14-10-25 10:36 pm
ಸುಳ್ಯ ಮೂಲದ ಯುವಕ ಮಾರಿಷಸ್ ನಲ್ಲಿ ಜಲಪಾತಕ್ಕೆ ಬಿದ್ದ...
14-10-25 10:13 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm