ಬ್ರೇಕಿಂಗ್ ನ್ಯೂಸ್
26-02-26 10:26 am HK News Staffer ಕರ್ನಾಟಕ
ಮಂಗಳೂರು, ಫೆ.26: ನಗರದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಬಳಿ ಕುಳಿತುಕೊಂಡಿದ್ದ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯ ವಿಡಿಯೋ ಮಾಡಿ, ಹುಡುಗನಿಗೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದ್ದು ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಾಂಡೇಶ್ವರ ಠಾಣೆ ವ್ಯಾಪ್ತಿಯ ಅತ್ತಾವರದ ನಿವಾಸಿಗಳಾದ ಸ್ಟೀವನ್ ಮೊಂತೇರೊ ಮತ್ತು ಆತನ ಮಗ ಅವಿಲ್ ಬಂಧಿತ ಆರೋಪಿಗಳು. ಫೆ.23ರಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ರೈಲ್ವೇ ಟ್ರಾಕ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸ್ಟೀವನ್ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದು ಅದನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.
ವಿಡಿಯೋ ಮಾಡುತ್ತ ಹುಡುಗಿಯನ್ನು ನೀನ್ಯಾರು, ಎಲ್ಲಿ ಓಡುತ್ತೀಯಾ, ಇಲ್ಲೇನು ಮಾಡ್ತಿದೀರಿ ಎಂದು ಜೋರು ಮಾಡಿದ್ದಾರೆ. ಅಲ್ಲದೆ, ಹುಡುಗನನ್ನು ಇಲ್ಲಿ ಕುಳಿತು ಏನು ಮಾಡ್ತಿದೀಯಾ, ನಾನು ವಿಡಿಯೋ ಮಾಡಿದ್ದೇನೆ, ಫೇಸ್ಬುಕ್ ಹಾಕುತ್ತೇನೆ ಎನ್ನುತ್ತ ಆತನಿಗೆ ಎರಡೇಟು ಕೊಟ್ಟು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ತಂದೆ-ಮಗ ಇಬ್ಬರು ಸೇರಿ ಹುಡುಗನನ್ನು ಎಳಕೊಂಡು ಹೋಗಿದ್ದಾರೆ. ವಿಡಿಯೋವನ್ನು ಸ್ಟೀವನ್ ತನ್ನ ಫೇಸ್ಬುಕ್ ನಲ್ಲಿ ಷೇರ್ ಮಾಡಿ ತನ್ನದೂ ಸೆಲ್ಫಿ ತೋರಿಸಿದ್ದಾನೆ. ವಿಡಿಯೋ ವೈರಲ್ ಆಗುತ್ತಲೇ ಹುಡುಗನ ತಂದೆ ಪೊಲೀಸ್ ದೂರು ನೀಡಿದ್ದಾರೆ. ಹುಡುಗ ಪರಿಶಿಷ್ಟ ಜಾತಿಗೆ ಸೇರಿದ್ದು ಮೋರಲ್ ಪೊಲೀಸಿಂಗ್ ಮತ್ತು ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸ್ಟೀವನ್ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.
In a case of alleged moral policing, a father and son have been arrested by Pandeshwar police for filming a college student couple who were sitting near a railway track in Attavar Babugudda area of the city, assaulting the boy, and uploading the video on social media. The arrested accused have been identified as Steven Montero and his son Avil, residents of Attavar under the Pandeshwar police station limits.
26-02-26 10:26 am
HK News Staffer
ವರನಟ ಡಾ.ರಾಜ್ ಅಪಹರಣ ಪ್ರಕರಣ ; ಬರೋಬ್ಬರಿ 25 ವರ್ಷಗ...
25-02-26 07:54 pm
ಕಾಮಗಾರಿ ಮುಗಿದರೂ ಮುಗಿಯದ 'ನಮ್ಮ ಮೆಟ್ರೋ' ಕಿರಿಕಿರಿ...
25-02-26 04:30 pm
ದೇಶದಲ್ಲೇ ಮೊದಲು ; ಕೇರಳ ನಾಗರಿಕರಿಗೆ ನೇಟಿವಿಟಿ ಕಾರ...
25-02-26 01:48 pm
ಕೊಪ್ಪಳ ; ಅಲ್ಪಸಂಖ್ಯಾತ ಇಲಾಖೆಯ ವಸತಿ ನಿಲಯದ ಶೌಚಾಲಯ...
25-02-26 12:30 pm
25-02-26 10:10 pm
HK News Desk
ಮಧ್ಯಪ್ರದೇಶದಲ್ಲಿ ಹೊಸ ರೀತಿಯ ಮತಾಂತರ ಜಾಲ ; ಹಿಂದು...
25-02-26 03:38 pm
ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ; ಮತ್ತೆ ಭುಗಿಲೆ...
24-02-26 01:21 pm
ನೀವು ಮೋದಿಯನ್ನು ನಿಂದಿಸುತ್ತೀರಿ, ಕಂಬಳಿ ಪಡೆಯಲು ಹಕ...
23-02-26 06:57 pm
ಕಠ್ಮಂಡು ಬಳಿ ಭೀಕರ ಬಸ್ ದುರಂತ ; ತ್ರಿಶೂಲಿ ನದಿಗೆ ಬ...
23-02-26 04:45 pm
26-02-26 10:37 am
HK News Staffer
ಮಂಗಳೂರು ವಿವಿಯ ಯಕ್ಷಮಂಗಳ ಪ್ರಶಸ್ತಿ ಪ್ರಕಟ ; ಕಪ್ಪೆ...
25-02-26 05:41 pm
ಮಂಗಳೂರಿನ ಕದ್ರಿಯಲ್ಲಿ ಚಿರತೆ ಪ್ರತ್ಯಕ್ಷ: ಸಿಸಿಟಿವಿ...
25-02-26 11:21 am
ಬೆಂಗಳೂರು ಬಿಟ್ಟು ಮಂಗಳೂರಿನತ್ತ ಐಟಿ ಉದ್ಯೋಗಿಗಳ ಚಿತ...
25-02-26 09:42 am
ಆನ್ಲೈನ್ ಹೂಡಿಕೆ ಹೆಸ್ರಲ್ಲಿ 19.06 ಲಕ್ಷ ರೂ. ವಂಚನ...
24-02-26 10:39 pm
24-02-26 10:07 pm
Mangaluru Staffer
ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸ...
24-02-26 06:01 pm
ನೀಟ್ ಪರೀಕ್ಷೆಗೆ ಒತ್ತಡ ಹೇರಿದ್ದಕ್ಕೆ ತಂದೆಯನ್ನೇ ಕೊ...
24-02-26 01:50 pm
ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿಯ ಮರ್ಡರ್ ; ಗಾಂಜ...
24-02-26 01:34 pm
ಐಡಿಎಫ್ಸಿ ಫಸ್ಟ್ ಬ್ಯಾಂಕಿನಲ್ಲಿ 590 ಕೋಟಿ ಹಗರಣ ;...
23-02-26 10:44 pm