ಬ್ರೇಕಿಂಗ್ ನ್ಯೂಸ್
28-05-26 02:45 pm HK News Staffer ಕರಾವಳಿ
ಮಂಗಳೂರು, ಮೇ 28: ಕರ್ನಾಟಕದ ಜನಪ್ರಿಯ ನಾಯಕ ಸಿದ್ದರಾಮಯ್ಯನವರನ್ನ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಿಲ್ಲ. ಇದರಿಂದಾಗಿ ಕರ್ನಾಟಕದಲ್ಲಿ ಅಸ್ಥಿರತೆ, ಅರಾಜಕತೆ, ಅವಿಶ್ವಾಸ ನಿರ್ಮಾಣವಾಗಿದೆ. ಇದರ ಪರಾಕಾಷ್ಠೆ ನಿನ್ನೆ ಮೊನ್ನೆಯಿಂದ ನಡೆಯುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವಾದರೂ ಇದ್ದ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನ ಯಾವ ರೀತಿ ನಡೆಸಿಕೊಂಡ್ರು ಎನ್ನೋದು ತಿಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇವರು ದಿನಾ ಬೆಳಗ್ಗೆ ಒಬಿಸಿ ಮಂತ್ರ ಜಪಿಸುತ್ತಾರೆ. ಯಾವ ರೀತಿ ವೀರೇಂದ್ರ ಪಾಟೀಲ್ ಅವರನ್ನ ರಾಜೀವ್ ಗಾಂಧಿ ಅಪಮಾನ ಮಾಡಿದ್ರೋ ಅದೇ ರೀತಿ ಮಗ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನ ನಡೆಸಿಕೊಂಡಿದ್ದಾರೆ. ಇದು ರಾಹುಲ್ ಗಾಂಧಿಗೆ ಬಂದಿರುವ ಬಳುವಳಿ. ಸಿದ್ದರಾಮಯ್ಯ ಹಾಗು ಯಡಿಯೂರಪ್ಪ ಕರ್ನಾಟಕದ ಮಾಸ್ ಲೀಡರ್ಸ್. ಇಡೀ ದೇಶದಲ್ಲಿ ನಾಲ್ಕು ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಅಧಿಕಾರದಲ್ಲಿದೆ. ಮೂರು ಕಡೆ ಮೇಲ್ಜಾತಿಯವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಇವರು ಒಬಿಸಿ ಬಗ್ಗೆ ಮಾತಾನಾಡ್ತಾರೆ. ಇದ್ದ ಒಬ್ಬ ಒಬಿಸಿ ಮುಖ್ಯಮಂತ್ರಿಗೆ ತೊಂದ್ರೆ ಕೊಟ್ಟಿದ್ದಾರೆ.
ಹಾಗೆಂದು ಸಿದ್ದರಾಮಯ್ಯ ಭಾರೀ ಪ್ರಾಮಾಣಿಕ ಎಂದಲ್ಲ. ಆದರೆ ಅವರನ್ನ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಜೋಷಿ ಹೇಳಿದರು. ಕಾಂಗ್ರೆಸ್ ಕುರ್ಚಿ ಫೈಟ್ ನಿಂದ ಬಿಜೆಪಿಗೆ ಲಾಭ ಆಗುತ್ತಾ ಎಂಬ ಪ್ರಶ್ನೆಗೆ, ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿ ಆಡಳಿತವಿಲ್ಲ. ಇಲ್ಲಿ ಇರೋದು ಕೇವಲ ತುಷ್ಟೀಕರಣ ಹಾಗು ಭ್ರಷ್ಟಾಚಾರ. ಡಿಕೆಶಿ ಬಂದರೂ ಅದು ಮುಂದುವರೆಯುತ್ತೆ. ಕಾಂಗ್ರೆಸ್ ವಿಫಲವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದಿಲ್ಲ. ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಸಕಾರಾತ್ಮಕ ಚಿಂತನೆಗಳ ಮೂಲಕ ಅಧಿಕಾರಕ್ಕೆ ಬರುತ್ತೇವೆ. ಯಾವ ರೀತಿ ಬಂಗಾಳ ಅಸ್ಸಾಂ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದೇವೋ ಅದೇ ರೀತಿ ಹಿಂದೆಂದೂ ಬರದ ಪ್ರಬಲ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.
ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಟೀಕೆಗೆ, ಈ ರೀತಿಯ ಜಾಗತಿಕ ಕ್ರೈಸಿಸ್ ಯಾವತ್ತೂ ಎದುರಾಗಲಿಲ್ಲ. ನನ್ನ ಅನುಭವದ ಆಧಾರದಲ್ಲಿ
ಈ ಪ್ರಮಾಣದ ಗ್ಲೋಬಲ್ ಕ್ರೈಸಿಸ್ ಯಾವಾಗಲು ನಿರ್ಮಾಣ ಆಗಲಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮನೆಗೆ ಬೆಂಕಿ ಹತ್ತಿದಾಗ ಇದರಲ್ಲಿ ಬೀಡಿ ಹಚ್ಚಿಕೊಳ್ಳುವ ಕೆಲಸವನ್ನ ಕಾಂಗ್ರೆಸ್ ಮಾಡಬಾರದು ಎಂದು ಟೀಕಿಸಿದರು.
ಭಟ್ಕಳದ ಘಟನೆ ಕಾಂಗ್ರೆಸ್ ಆಡಳಿತದ ತುಷ್ಟೀಕರಣದ ಒಂದು ಪರಾಕಾಷ್ಠೆ. ದೇಶ ವಿಭಜನೆಯ ವೇಳೆ ಮುಸ್ಲಿಂ ಲೀಗ್ ವರ್ತಿಸಿದ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಮುಸ್ಲಿಂ ಲೀಗ್ ಭಾಷೆಯನ್ನ ಕಾಂಗ್ರೆಸ್ ಅನುಸರಿಸುತ್ತಿದೆ. ದೇಶವನ್ನ ಇಬ್ಭಾಗ ಮಾಡಲು ಕರೆ ಕೊಟ್ಟ ಪಾರ್ಟಿ ಮುಸ್ಲಿಂ ಲೀಗ್. ಅಂತಹ ಮುಸ್ಲಿಂ ಲೀಗ್ ಜೊತೆ ಕಾಂಗ್ರೆಸ್ ಸಂಬಂಧ ಇಟ್ಟುಕೊಂಡು ಎಲ್ಲಾ ಕಡೆ ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ. ಭಟ್ಕಳದ ಘಟನೆಗೂ ಇದೇ ಕಾರಣ ಎಂದರು.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm