ಬ್ರೇಕಿಂಗ್ ನ್ಯೂಸ್
29-05-26 08:30 pm HK News Staffer ಕ್ರೈಂ
ಮಂಗಳೂರು, ಮೇ 29: 2021ರಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡುವಂತೆ ಸರ್ಕಾರದ ಆದೇಶ ಇದ್ದರೂ, ಅದನ್ನು ಉಲ್ಲಂಘಿಸಿ ತನ್ನ ಹಾಸ್ಟೆಲಿನಲ್ಲಿ ವಿದ್ಯಾರ್ಥಿಗಳನ್ನು ಕೂಡಿಹಾಕಿ ತರಗತಿ ನಡೆಸಿದ್ದಲ್ಲದೆ, ಅಲ್ಲಿಗೆ ಬಂದಿದ್ದ ಪೋಷಕರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಸೇರಲು ಅವಕಾಶ ನೀಡಿದ್ದಕ್ಕಾಗಿ ಎಕ್ಸ್ ಪರ್ಟ್ ಕಾಲೇಜುಗಳ ಸಮೂಹದ ಅಧ್ಯಕ್ಷ ನರೇಂದ್ರ ನಾಯಕ್ ಗೆ ಮಂಗಳೂರಿನ ಕೋರ್ಟ್ ದಂಡ ವಿಧಿಸಿದೆ.
ಮಂಗಳೂರಿನ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ಇ.ಎಸ್.ಸುರೇಶ್ ಈ ಆದೇಶ ಮಾಡಿದ್ದಾರೆ. 2021ರಲ್ಲಿ ಜಿಲ್ಲಾಧಿಕಾರಿ ಕೋವಿಡ್ ಲಾಕ್ಡೌನ್ ಪ್ರಕಾರ, ಜಿಲ್ಲಾದ್ಯಂತ ಎಲ್ಲ ಕಾಲೇಜು, ಶಾಲೆಗಳ ಸ್ಥಗಿತಕ್ಕೆ ಸೂಚನೆ ನೀಡಿ ಆನ್ಲೈನ್ ಕ್ಲಾಸ್ ಮಾಡುವಂತೆ ಆದೇಶ ಮಾಡಿದ್ದರೂ, ವಳಚ್ಚಿಲ್ ನಲ್ಲಿರುವ ಎಕ್ಸ್ ಪರ್ಟ್ ಸಮೂಹ ಸಂಸ್ಥೆಗಳಲ್ಲಿ ಅದನ್ನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಹಾಸ್ಟೆಲಿನಲ್ಲಿಯೇ ಉಳಿಸಿಕೊಳ್ಳಲಾಗಿತ್ತು. ಇದರಿಂದ ಆತಂಕಗೊಂಡಿದ್ದ ವಿದ್ಯಾರ್ಥಿಗಳ ಪೋಷಕರು ದೂರದ ಊರುಗಳಿಂದ ವಳಚ್ಚಿಲ್ ಕಾಲೇಜು ಕ್ಯಾಂಪಸಿಗೆ ಬಂದಿದ್ದರು.




2021ರ ಜುಲೈ 29ರಂದು 30ಕ್ಕೂ ಹೆಚ್ಚು ಪೋಷಕರು ಕಾಲೇಜು ಕ್ಯಾಂಪಸ್ ಆವರಣಕ್ಕೆ ಬಂದಿದ್ದರೂ, ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನದ ವರೆಗೂ ಅವರನ್ನು ಗೇಟ್ ಒಳಗೆ ಬಿಡದೆ ಹೊರಗಡೆ ಗುಂಪು ಸೇರಲು ಅವಕಾಶ ಮಾಡಲಾಗಿತ್ತು. ಇದರ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಗೆ ಮಾಹಿತಿ ಹೋಗಿದ್ದರಿಂದ ಪೊಲೀಸರು ಬಂದು ಕಾಲೇಜು ವಿರುದ್ಧ ಪ್ರಕರಣ ದಾಖಲಿಸಿದ್ದರು. ಆಗಿನ ಇನ್ಸ್ ಪೆಕ್ಟರ್ ಜಾನ್ಸನ್ ಡಿಸೋಜ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕಾಲೇಜು ಸಂಸ್ಥೆಗಳ ಅಧ್ಯಕ್ಷ ನರೇಂದ್ರ ನಾಯಕ್ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಆನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಆರೋಪಿತ ನರೇಂದ್ರ ನಾಯಕ್ ಮೇಲಿನ ಅಪರಾಧ ಸಾಬೀತಾಗಿದ್ದರಿಂದ ಆರು ಸಾವಿರ ರೂಪಾಯಿ ದಂಡ ಮತ್ತು ತಪ್ಪಿದಲ್ಲಿ ಏಳು ದಿನಗಳ ಸಜೆ ವಿಧಿಸಲಾಗಿದೆ. ಪೊಲೀಸರು ಸ್ಥಳದ ಫೋಟೋ ಮತ್ತು ವಿಡಿಯೋ ಸಾಕ್ಷ್ಯಗಳನ್ನು ಕೋರ್ಟಿಗೆ ಹಾಜರುಪಡಿಸಿದ್ದರಿಂದ ಅಪರಾಧ ಸಾಬೀತಾಗಿತ್ತು. ವಿದ್ಯಾರ್ಥಿಗಳನ್ನು ಕಳಿಸಿಕೊಡದೆ ಲಾಕ್ಡೌನ್ ಆದೇಶ ಉಲ್ಲಂಘಿಸಿದ್ದಕ್ಕೆ ಪ್ರತ್ಯೇಕ ಒಂದು ಸಾವಿರ ರೂ. ದಂಡ ಮತ್ತು ಅದನ್ನು ತೆರಲು ತಪ್ಪಿದಲ್ಲಿ ಎರಡು ದಿನಗಳ ಸಾದಾ ಶಿಕ್ಷೆಯನ್ನು ವಿಧಿಸಲಾಗಿದೆ. ಶಿಕ್ಷೆ ವಿಧಿಸಿದ ಬಗ್ಗೆ ನ್ಯಾಯಾಧೀಶರು ಮೇ 26ರಂದು 67 ಪುಟಗಳ ವರದಿಯೊಂದಿಗೆ ಆದೇಶ ಮಾಡಿದ್ದಾರೆ.
Read: ಎಕ್ಸ್ ಪರ್ಟ್ ಕಾಲೇಜು ಹಾಸ್ಟೆಲ್ ಮಕ್ಕಳಿಗಿಲ್ಲ ಲಾಕೌನ್ ಬ್ರೇಕ್; ಗೇಟ್ ಮುಂದೆ ಹೆತ್ತವರ ಆಕ್ರೋಶ
A Mangaluru court has imposed a fine on Narendra Nayak, Chairman of the Expert Group of Educational Institutions, for violating COVID-19 lockdown regulations in 2021 by allegedly retaining students in hostels, conducting classes, and allowing gatherings without maintaining social distancing.
29-05-26 04:30 pm
HK News Staffer
ಸಿದ್ದರಾಮಯ್ಯ ರಾಜೀನಾಮೆಗೆ ರಾಜ್ಯಪಾಲರಿಂದ ಅಧಿಕೃತ ಮು...
29-05-26 10:29 am
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾ...
28-05-26 06:18 pm
CM Siddaramaiah, Supporters crying, Kaveri: ಸ...
28-05-26 05:31 pm
ರಾಜ್ಯಸಭೆಗೆ ಹೋಗಲ್ಲ, ರಾಜ್ಯದಲ್ಲೇ ಸಕ್ರಿಯ ರಾಜಕಾರಣದ...
28-05-26 04:34 pm
29-05-26 06:17 pm
HK News Staffer
ಟಿಎಂಸಿಯಲ್ಲಿ ಬಿರುಕು ; 50 ಶಾಸಕರು, ಸಂಸದರು ಬಿಜೆಪಿ...
27-05-26 09:17 pm
ಕೇರಳ ರಾಜಕಾರಣದಲ್ಲಿ ಭಾರೀ ಸಂಚಲನ..! ಮಾಜಿ ಸಿಎಂ ಪಿಣ...
27-05-26 08:36 pm
ಜೂನ್, ಜುಲೈನಲ್ಲಿ 12 ಪರಿಷತ್ ಸ್ಥಾನಗಳಿಗೆ ಚುನಾವಣೆ...
26-05-26 12:54 pm
ಗೃಹಲಕ್ಷ್ಮಿ ಪಡೆಯಲು ಬಯೋಮೆಟ್ರಿಕ್ ಕಡ್ಡಾಯ ; ಕೂಡಲೇ...
26-05-26 12:50 pm
28-05-26 02:45 pm
HK News Staffer
ಡಿಸಿಎಂ ಆಗಬೇಕೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾ...
28-05-26 02:28 pm
ಕುದುರೆಮುಖ ಅದಿರು ಕಂಪನಿ ಕಾರ್ಮಿಕರ ಬೇಡಿಕೆ ಈಡೇರಿಸಿ...
27-05-26 12:29 pm
ಕಟೀಲು ಶಿಬರೂರಿನಲ್ಲಿ ಮರಳು ದರೋಡೆ ರಾಜಾರೋಷ ; ಇಲ್ಲಿ...
26-05-26 09:02 pm
ನೌಕಾಪಡೆ ಸಬ್ ಲೆಫ್ಟಿನೆಂಟ್ ಆಗಿ ನೇಮಕಗೊಂಡ ನಿಶೆಲ್ ಡ...
26-05-26 07:52 pm
29-05-26 08:30 pm
HK News Staffer
ಕಾರಿನ ಟೈಯರ್ ಬ್ಲಾಸ್ಟ್ ಆಗಿ ರಸ್ತೆಬದಿ ನಿಂತಿದ್ದ...
29-05-26 03:05 pm
ಬಕ್ರೀದ್ ಹಿನ್ನೆಲೆ, ರಾತ್ರೋರಾತ್ರಿ ಮನೆ ಕೊಟ್ಟಿಗೆಯಲ...
28-05-26 09:44 pm
ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೊಲೀಸರಿಗೆ ಡಿಕ್ಕಿ ಹೊಡ...
28-05-26 10:43 am
ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಇಬ್ಬರು ನಟ...
27-05-26 08:34 pm