ಬ್ರೇಕಿಂಗ್ ನ್ಯೂಸ್
27-07-21 05:58 pm Headline Karnataka News Network ಕ್ರೀಡೆ
ಮುಂಬೈ, ಜುಲೈ 27: ಕ್ರಿಕೆಟ್ ಜಗತ್ತಿನಲ್ಲಿ ದೇವರು ಎಂದೇ ಖ್ಯಾತಿ ಗಳಿಸಿದ್ದ ಸಚಿನ್ ತೆಂಡುಲ್ಕರ್ ನಿಮಗೆಲ್ಲ ಗೊತ್ತು. ತನ್ನ ಕ್ರಿಕೆಟ್ ಜೀವನದ ಉತ್ತುಂಗದಲ್ಲಿದ್ದಾಗ ಜಾಹೀರಾತು, ಇನ್ನಿತರ ಕ್ಷೇತ್ರಗಳಿಂದ ಅಪಾರ ಬೇಡಿಕೆ ಹೊಂದಿದ್ದ ಜಗತ್ತಿನ ಏಕೈಕ ಕ್ರಿಕೆಟಿಗನಾಗಿದ್ದ ಸಚಿನ್ ತೆಂಡುಲ್ಕರ್ ಗಳಿಕೆಯೂ ಹುಬ್ಬೇರಿಸುವಷ್ಟರ ಮಟ್ಟಿಗಿತ್ತು. ಆದರೆ, ಈಗ ಆ ಸ್ಥಾನವನ್ನು ಯಾರು ಅಲಂಕರಿಸಿದ್ದಾರೆ ಗೊತ್ತಾ..? ಮೊನ್ನೆ ಮೊನ್ನೆ ಬ್ಯಾಟ್ ಹಿಡಿದು ಬಂದ ಹುರಿ ಮೀಸೆಯ ಹುಡುಗ ವಿರಾಟ್ ಕೊಹ್ಲಿ ಈಗ ಸಚಿನ್ ಹೆಸರಲ್ಲಿದ್ದ ಸ್ಟಾರ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅತಿ ಹೆಚ್ಚು ಗಳಿಕೆಯಲ್ಲೂ ಹೆಸರು ಮಾಡಿದ್ದಾನೆ.
ಸದ್ಯಕ್ಕೆ ಭಾರತೀಯ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಜಗತ್ತಿನಲ್ಲೇ ಅತಿ ಬೇಡಿಕೆಯ ಆಟಗಾರ. ಅಷ್ಟೇ ಅಲ್ಲಾ ಅತಿ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಕ್ರಿಕೆಟ್ ಆಟಗಾರ. ಬಿಸಿಸಿಐನಲ್ಲಿ ಎ ಪ್ಲಸ್ ವಿಭಾಗದಲ್ಲಿರುವ ಆಟಗಾರ ವಿರಾಟ್ ಕೊಹ್ಲಿ. ಅದರಲ್ಲಿ ವಾರ್ಷಿಕ ಸಂಭಾವನೆ ಏಳು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಅದರ ಮೇಲೆ ಆಯಾ ಏಕದಿನ, ಟೆಸ್ಟ್, ಇನ್ನಿತರ ಆಟಗಳ ಮೇಲಿನ ಸ್ಯಾಲರಿ ಬೇರೆ.

ಐಪಿಎಲ್ ಸೀಸನ್ ಆರಂಭಗೊಂಡಾಗಿನಿಂದಲೂ ವಿರಾಟ್ ಕೊಹ್ಲಿ ಬೆಂಗಳೂರಿನ ಆರ್ ಸಿಬಿ ತಂಡದಲ್ಲಿದ್ದಾರೆ. ಆರ್ ಸಿಬಿ ತಂಡದ ನಾಯಕನೂ ಹೌದು. ಐಪಿಎಲ್ ಒಂದು ಸೀಸನ್ ಅವಧಿಗೆ ಕೊಹ್ಲಿ 17 ಕೋಟಿ ರೂಪಾಯಿ ಪಡೆಯುತ್ತಾರೆ. ಇದು ಐಪಿಎಲ್ ಪಂದ್ಯಾವಳಿಯಲ್ಲಿ ಒಬ್ಬ ಆಟಗಾರ ಪಡೆಯುವ ಅತಿ ಹೆಚ್ಚು ಗಳಿಕೆ. ಇತರೆಲ್ಲ ಆಟಗಾರರು ಇದಕ್ಕಿಂತ ಕಡಿಮೆ ಸಂಭಾವನೆ ಪಡೆಯುತ್ತಾರೆ. ಇದರಲ್ಲದೆ, ಆಯಾ ಪಂದ್ಯಗಳಲ್ಲಿ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸಿರೀಸ್, ಅತಿ ಹೆಚ್ಚು ಕ್ಯಾಚ್, ವಿಕೆಟ್ ಪಡೆದಿದ್ದಕ್ಕೆ ದಕ್ಕುವ ಹೆಚ್ಚುವರಿ ಗಿಂಬಳ, ಟ್ರೋಫಿ ಗೆದ್ದರೆ ಪಡೆಯೋ ದುಬಾರಿ ಗಿಫ್ಟ್ ಬೇರೆಯದ್ದೇ ಇರುತ್ತೆ.

ಇದೆಲ್ಲಕ್ಕಿಂತಲೂ ಹೆಚ್ಚು ವಿರಾಟ್ ಕೊಹ್ಲಿ ಪಡೆಯೋ ಆದಾಯ ಜಾಹೀರಾತಿನದ್ದು. 32 ವರ್ಷದ ಕೊಹ್ಲಿ ಸದ್ಯಕ್ಕೆ ಒಂದು ವರ್ಷದಲ್ಲಿ ಬರೋಬ್ಬರಿ 178.77 ಕೋಟಿ ರೂಪಾಯಿ ಆದಾಯವನ್ನು ಜಾಹೀರಾತಿನಿಂದಲೇ ಪಡೆಯುತ್ತಾರೆ. ಜಗತ್ತಿನ ಮುಂಚೂಣಿ ಹೈಎಂಡ್ ಕಾರು ಕಂಪನಿಗಳಲ್ಲಿ ಬ್ರಾಂಡ್ ಅಂಬಾಸಿಡರ್ ಆಗಿ ಕೊಹ್ಲಿ ಇದ್ದಾರೆ. ರಾನ್, ವನ್ 8, ಪುಮಾ, ಆಡಿ, ಎಂಆರ್ ಎಫ್, ಕೋಲ್ಗೇಟ್- ಪಾಮೋಲಿವ್, ಟಿಸ್ಸಾಟ್ ಸೇರಿದಂತೆ ಹೆಸರಾಂತ ಕಂಪನಿಗಳಲ್ಲಿ ರಾಯಭಾರಿ ಆಗಿದ್ದಾರೆ.
ವಿರಾಟ್ ಕೊಹ್ಲಿ ಮುಂಬೈನ ದುಬಾರಿ ಜಾಗ ಎಂದೇ ಪ್ರಸಿದ್ಧಿ ಪಡೆದಿರುವ ವೂರ್ಲಿಯಲ್ಲಿ ವಾಸ ಇದ್ದಾರೆ. ಲಕ್ಸುರಿ ಅಪಾರ್ಟ್ಮೆಂಟ್ ನಲ್ಲಿ 34 ಕೋಟಿ ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ಅಲ್ಲದೆ, ಜಗತ್ತಿನ ಮುಂಚೂಣಿ ಹೈಎಂಡ್ ಕಾರುಗಳು ಕೊಹ್ಲಿ ಗ್ಯಾರೇಜಿನಲ್ಲಿದೆ. ದುಬಾರಿ ಕಾರುಗಳಾದ ಆಡಿ ಶ್ರೇಣಿಯ ಆರ್ 8 ವಿ10 ಪ್ಲಸ್, ಆರ್ 8ಎಲ್ಎಮ್ಎಕ್ಸ್, ಆಡಿ ಆರ್ ಎಸ್ 5, ಆಡಿ ಕ್ಯು 8 ಕಾರುಗಳು ಕೊಹ್ಲಿಯಲ್ಲಿದೆ. ಇದಲ್ಲದೆ, ಬ್ಯಾಂಟ್ಲೀಸ್, ಲ್ಯಾಂಡ್ ರೋವರ್ ರೇಗ್ ಕೂಡ ಆತನ ಬಳಿಯಿದೆ.


ಜಾಹೀರಾತು, ಕ್ರಿಕೆಟ್ ಇನ್ನಿತರ ಮೂಲಗಳಿಂದ ಬರುವ ಆದಾಯದ ಕಾರಣಕ್ಕೆ ವಿರಾಟ್ ಕೊಹ್ಲಿ ಜಗತ್ತಿನ ಸಿರಿವಂತ ಕ್ರಿಕೆಟಿಗ ಎನ್ನುವ ಹೆಗ್ಗಳಿಗೆ ಪಡೆದಿದ್ದಾರೆ. ಫೋರ್ಬ್ಸ್ ಮ್ಯಾಗಜಿನ್ 2020ರಲ್ಲಿ ಬಿಡುಗಡೆ ಮಾಡಿದ್ದ ಅತಿ ಹೆಚ್ಚು ಗಳಿಕೆಯ ಟಾಪ್ 100 ಅತ್ಲೀಟ್ ಗಳಲ್ಲಿ ವಿರಾಟ್ ಕೂಡ ಒಬ್ಬರು. ಕಳೆದ ವರ್ಷದ ಫೋರ್ಬ್ಸ್ ಪಟ್ಟಿಯಲ್ಲಿ ಸೇರಿದ್ದ ಏಕೈಕ ಕ್ರಿಕೆಟಿಗನೂ ಹೌದು.
ಭಾರತದ ಮುಂಚೂಣಿ ಕ್ರಿಕೆಟಿಗನಾಗಿರುವ ವಿರಾಟ್ ಕೊಹ್ಲಿ ವರ್ಷಕ್ಕೆ ಏನಿಲ್ಲ ಅಂದ್ರೂ 17.5 ಮಿಲಿಯನ್ ಡಾಲರ್ ಅಂದ್ರೆ, ಬರೋಬ್ಬರಿ 130 ಕೋಟಿ ರೂಪಾಯಿ ಅನ್ನು ಕ್ರಿಕೆಟಿನಲ್ಲೇ ಪಡೆಯುತ್ತಾರಂತೆ. ಸದ್ಯಕ್ಕೆ ಈತನ ಅಂದಾಜು ಆಸ್ತಿ 980 ಕೋಟಿ ರೂಪಾಯಿ.
ನೀವು ನಂಬಲಿಕ್ಕಿಲ್ಲ. 2008ರಲ್ಲಿ ಭಾರತ ತಂಡಕ್ಕೆ ಕೊಹ್ಲಿ ಎಂಟ್ರಿ ಪಡೆದಿದ್ದಾಗ ಇನ್ನೂ ಹಾಲುಗಲ್ಲದ ಹುಡುಗ. ಚಿಗುರು ಮೀಸೆಯೂ ಮೂಡಿರಲಿಲ್ಲ. 2008ರಲ್ಲಿ ಅಂಡರ್ 19 ಕ್ರಿಕೆಟ್ ತಂಡವನ್ನು ಮುನ್ನಡೆಸಿ, ಮಲೇಶ್ಯಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಪ್ರಶಸ್ತಿ ಜಯಿಸಿದ್ದು ಕೊಹ್ಲಿ ಪಾಲಿಗೆ ಮೊದಲ ಟರ್ನಿಂಗ್ ಪಾಯಿಂಟ್. ಅಲ್ಲಿ ತೋರಿದ ಆಕರ್ಷಕ ಪ್ರದರ್ಶನದಿಂದಾಗಿ ಕೆಲವೇ ತಿಂಗಳಲ್ಲಿ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದ. 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಗುರುತಿಸಿದ್ದ ಕೊಹ್ಲಿ ಎರಡೇ ವರ್ಷದಲ್ಲಿ ಏಕದಿನ ಸ್ಪೆಷಲಿಸ್ಟ್ ಆಗಿ ಹೆಸರು ಮಾಡಿದ್ದ. 2013ರಲ್ಲಿ ಏಕದಿನ ಐಸಿಸಿ ರ್ಯಾಂಕಿಂಗ್ ನಲ್ಲಿ ನಂಬರ್ ವನ್ ಆಗಿದ್ದ. 2014ರಲ್ಲಿ ಟ್ವೆಂಟಿ – ಟ್ವೆಂಟಿ ಕ್ರಿಕೆಟ್ ವಿಶ್ವಕಪ್ ನಲ್ಲಿ ಪ್ರಶಸ್ತಿ ಜಯಿಸಿದ್ದ ತಂಡದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದು ಆತನಿಗೆ ಕ್ರಿಕೆಟ್ ಜಗತ್ತಿನಲ್ಲಿ ದಿಕ್ಕನ್ನೇ ಬದಲಾಯಿಸಿತ್ತು.
Virat Kohli Net worth 2021 Cars salary income endorsement bikes.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm