ಬ್ರೇಕಿಂಗ್ ನ್ಯೂಸ್
01-09-22 02:00 pm Source: Vijayakarnataka ಕ್ರೀಡೆ
ಸಿಡ್ನಿ: ತಮ್ಮ ಆತಿಥ್ಯದಲ್ಲಿ ಮುಂಬರುವ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ರಿಕೆಟ್ ಆಸ್ಟ್ರೇಲಿಯಾ 15 ಸದಸ್ಯರ ತಂಡವನ್ನು ಗುರುವಾರ ಪ್ರಕಟಿಸಿದ್ದು, ಲೆಗ್ ಸ್ಪಿನ್ನರ್ ಮಿಚೆಲ್ ಸೆಪ್ಸನ್ ಅವರ ಬದಲು ಸಿಂಗಾಪುರ ಮೂಲದ ಹಾರ್ಡ್ ಹಿಟ್ಟರ್ ಟಿಮ್ ಡೇವಿಡ್‌ಗೆ ತಂಡದಲ್ಲಿ ಚೊಚ್ಚಲ ಅವಕಾಶ ಕಲ್ಪಿಸಿದೆ.
ಕಳೆದ 2022ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಮ್ಯಾಚ್ ಫಿನಿಷರ್ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದ್ದ ಟಿಮ್ ಡೇವಿಡ್, ಕಳೆದ ಎರಡು ವರ್ಷಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಫಿನಿಷರ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಟಿಮ್ ಡೇವಿಡ್‌ಗೆ ತಮ್ಮ ತಂಡದಲ್ಲಿ ಚೊಚ್ಚಲ ಅವಕಾಶ ನೀಡಿ ಬೆಂಬಲಿಸಿದೆ.
"ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾಗವಹಿಸುವ ಮೂಲಕ ಟಿಮ್ ಡೇವಿಡ್ ಕೆಲ ಗುಣಮಟ್ಟದ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ವಿಯಾಗಿರುವ ಅವರು, ಚೆಂಡನ್ನು ಹಿಮ್ಮೆಟ್ಟಿಸುವ ಸ್ವಾಭಾವಿಕ ಕೌಶಲವನ್ನು ಹೊಂದಿದ್ದಾರೆ," ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಜಾರ್ಜ್ ಬೈಲಿ ಗುಣಗಾಣ ಮಾಡಿದ್ದಾರೆ.
"ಯುಎಇಯಲ್ಲಿ ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಗೆ ಮಿಚೆಲ್ ಸೆಪ್ಸನ್ ಅವರು ತಂಡದಲ್ಲಿ ಆಡಿರಲಿಲ್ಲ. ಏಕೆಂದರೆ ಅಲ್ಲಿನ ಪರಿಸ್ಥಿತಿಗಳನ್ನು ಆಧರಿಸಿ ಅವರನ್ನು ಕೈ ಬಿಡಲಾಗಿತ್ತು. ಆದರೆ, ಆಸ್ಟ್ರೇಲಿಯಾದಲ್ಲಿ ದೊಡ್ಡ-ದೊಡ್ಡ ಮೈದಾನಗಳು ಇರುವುದರಿಂದ, ಇದೀಗ ಇಲ್ಲಿ ಬ್ಯಾಟಿಂಗ್ ಕಂಡೀಷನ್ ಅನ್ನು ನಾವು ನೋಡಬಹುದು. ಆದ್ದರಿಂದ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ," ಎಂದು ಹೇಳಿದರು.
ಟಿಮ್ ಡೇವಿಡ್ ಈಗಾಗಲೇ ಸಿಂಗಾಪುರದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಅವರು ಹಾಲಿ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡದ ಪರ ಆಡಲು ಎದುರು ನೋಡುತ್ತಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿರುವ ಟಿಮ್ ಡೇವಿಡ್ ಅವರಿಗೆ ಆಸ್ಟ್ರೇಲಿಯಾ ತಂಡದಲ್ಲಿ ಅವಕಾಶ ನೀಡುವಂತೆ ರಿಕಿ ಪಾಂಟಿಂಗ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಈ ಹಿಂದೆ ಸಲಹೆ ನೀಡಿದ್ದರು.
World Cup squad assembled!
— Cricket Australia (@CricketAus) August 31, 2022
Here's the 15 who will represent our national men's team at the upcoming T20 World Cup and tour of India 🇦🇺 pic.twitter.com/DUgqUGWuyV
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ತಂಡ, ಭಾರತ ಪ್ರವಾಸ ಕೈಗೊಳ್ಳಲಿದ್ದು ಟಿ20 ಸರಣಿ ಆಡಲಿದೆ. ಆ ಮೂಲಕ ತಮ್ಮದೇ ಆತಿಥ್ಯದಲ್ಲಿ ನಡೆಯುವ ಮಹತ್ವದ ಟೂರ್ನಿಗೆ ತಯಾರಿ ನಡೆಸಲಿದೆ. ಅಂದಹಾಗೆ ಕಳೆದ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಆಗಿತ್ತು. ಇದೀಗ ಅದೇ ಲಯವನ್ನು ತವರು ನೆಲದಲ್ಲಿ ಮುಂದುವರಿಸಲು ಆರೋನ್ ಫಿಂಚ್ ಬಳಗ ಎದುರು ನೋಡುತ್ತಿದೆ.
ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ: ಆರೋನ್ ಫಿಂಚ್(ನಾಯಕ), ಪ್ಯಾಟ್ ಕಮಿನ್ಸ್(ಉಪ ನಾಯಕ), ಆಸ್ಟನ್ ಎಗರ್, ಟಿಮ್ ಡೇವಿಡ್, ಜಾಶ್ ಹೇಝಲ್‌ವುಡ್, ಜಾಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್‌ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಂ ಝಾಂಪ.
T20 World Cup 2022 Cricket Australia Announce T20 World Cup Squad, Singapore Born Tim David With Maiden Call Up.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm