Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್ ಮಾರಾಟ ಮಳಿಗೆಯಲ್ಲಿ ಕೊಳೆತ ಮೊಟ್ಟೆ ! ಗ್ರಾಹಕರ ದೂರಿನ ಹಿನ್ನೆಲೆ ಫಳ್ನೀರಿನಲ್ಲಿ ಆಹಾರ ಇಲಾಖೆ ದಾಳಿ, ಗೋದಾಮು ಸೀಲ್ ಮಾಡಿದ ಅಧಿಕಾರಿಗಳು

03-09-26 10:19 pm       HK News Staffer   ಕರಾವಳಿ

ನಗರದ ಫಳ್ನೀರ್ ನಲ್ಲಿರುವ BLINK IT ಆಹಾರ ಮಳಿಗೆಯಿಂದ ಆನ್ಲೈನಲ್ಲಿ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳು ಆಗಿದೆ ಎಂಬ ಗ್ರಾಹಕರೊಬ್ಬರ ದೂರಿನಂತೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು ಗೋದಾಮು ಕೋಣೆಯನ್ನು ಸೀಲ್ ಮಾಡಿದ್ದಾರೆ.

ಮಂಗಳೂರು, ಸೆ.3: ನಗರದ ಫಳ್ನೀರ್ ನಲ್ಲಿರುವ BLINK IT ಆಹಾರ ಮಳಿಗೆಯಿಂದ ಆನ್ಲೈನಲ್ಲಿ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳು ಆಗಿದೆ ಎಂಬ ಗ್ರಾಹಕರೊಬ್ಬರ ದೂರಿನಂತೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು ಗೋದಾಮು ಕೋಣೆಯನ್ನು ಸೀಲ್ ಮಾಡಿದ್ದಾರೆ. 

ಆನ್ಲೈನಲ್ಲಿ ಖರೀದಿಸಿದ್ದ ಮೊಟ್ಟೆಯಲ್ಲಿ ಹುಳು ಇರುವುದನ್ನು ಕಂಡು ಗ್ರಾಹಕರೊಬ್ಬರು ನೇರವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಅವರಿಗೆ ದೂರು ನೀಡಿದ ಹಿನ್ನೆಲೆ ಇಲಾಖೆಯ ಅಧಿಕಾರಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದರು.‌ ಈ ಸಂದರ್ಭದಲ್ಲಿ ಒಡೆದ ಮೊಟ್ಟೆ ಇರುವ ಪ್ಯಾಕೆಟ್ ಗಳು ಪತ್ತೆಯಾಗಿದ್ದು ತಕ್ಷಣವೇ ಅವುಗಳನ್ನು ತೆರವುಗೊಳಿಸಲು ಸೂಚಿಸಿದ್ದಾರೆ.‌ ಶುಚಿತ್ವದ ಕೊರತೆ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿ ಗೋದಾಮನ್ನು ಅಧಿಕಾರಿಗಳು ಮುಚ್ಚಿಸಿ ಸೀಲ್ ಮಾಡಿದ್ದಾರೆ. 

ಆಹಾರ ಸಾಮಗ್ರಿ ಗೋದಾಮನ್ನು ಸಂಪೂರ್ಣ ಸ್ವಚ್ಛಗೊಳಿಸುವ ಉದ್ದೇಶದಿಂದ ಮಳಿಗೆಯ ಸಂಗ್ರಹಣ ಕೋಣೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗಿದೆ. ಫಳ್ನೀರ್ ನಲ್ಲಿರುವ ಫಳ್ನೀರ್ ಸ್ಕ್ವೇರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ Blink It ಆನ್ಲೈನ್ ಮಾರಾಟ ಸಂಸ್ಥೆಗೆ ಅಧಿಕಾರಿಗಳು ಎಚ್ಚರಿಕೆ ನೋಟಿಸ್ ನೀಡಿದ್ದಾರೆ. 

ಇತ್ತೀಚೆಗೆ ಮೆಕ್ ಡೊನಾಲ್ಡ್ ಮತ್ತು ಕೆಎಫ್ ಸಿ ಆಹಾರ ಮಳಿಗೆಯ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಅಲ್ಲಿನ ಕೊಳೆತ ಆಹಾರ, ಪದಾರ್ಥಗಳನ್ನು ಪತ್ತೆ ಮಾಡಿದ್ದರು. ತಾತ್ಕಾಲಿಕವಾಗಿ ಮಳಿಗೆಯನ್ನು ಬಂದ್ ಮಾಡಲಾಗಿತ್ತು.

Following a customer complaint about maggots being found in eggs purchased online through Blinkit, Food Safety officials conducted a raid at the company’s store in Falnir, Mangaluru, and sealed its storage room.